November 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬದುಕು ಮೆರವಣಿಗೆಯಂತೆ – ಡಾ. ಗುರುರಾಜ ಕರ್ಜಗಿ ಅಭಿಮತ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಕಲಾಮಂಟಪದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮ ;

ವರದಿ/ ಚಿತ್ರ :ಈ ಮೀಡಿಯಾ

ಕಟೀಲು : ವೇಷಧಾರಿಗಳು, ಕಲಶ ಹಿಡಿದವರು, ಕುಣಿಯುವವರು, ವಾದ್ಯವಾದಕರು ಹೀಗೆ ನಾನಾ ಮಂದಿಯೊಂದಿಗೆ ಹೊರಟ ಮೆರವಣಿಗೆಯನ್ನು ಹಾದಿಯುದ್ದಕ್ಕೂ ನಾನಾ ಭಾವನೆಗಳೊಂದಿಗೆ ನೋಡುವ ಸಾಲುಸಾಲು ಜನರು. ನಮ್ಮ ಬದುಕೂ ಒಂದು ಅದ್ಭುತ ಮೆರವಣಿಗೆಯಂತೆ ಎಂದು ಖ್ಯಾತ ಚಿಂತಕ ಡಾ. ಗುರುರಾಜ ಕರ್ಜಗಿ ಹೇಳಿದರು.

ಅವರು ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಕಲಾಮಂಟಪದಲ್ಲಿ ಆಯೋಜಿಸಲಾದ ಉಪನ್ಯಾಸ ಮಾತನಾಡಿದರು. ಕಾರ್ಯಕ್ರಮದಲ್ಲಿಮನೆಯಿಂದ ಸಾಮಾನುಗಳ ಪಟ್ಟಿ ಮಾಡಿಕೊಂಡು ಕಿರಾಣಿ ಅಂಗಡಿಗೆ ಹೋಗಿ ನಮಗೆ ಬೇಕಾದ್ದನ್ನು ಕೇಳಿಅಂಗಡಿಯವ ಕೊಟ್ಟದ್ದನ್ನು ತರುತ್ತಿದ್ದೆವು. ಈಗ ಹಾಗಲ್ಲ, ಮಾಲ್ಗಳಿಗೆ ಹೋದರೆ ಒಂದೇ ಬಗೆಯ ನಾನಾ ಕಂಪನಿಗಳ ಅನೇಕ ವಸ್ತುಗಳಿರುತ್ತವೆ. ಮನೆಗೆ ಬಂದು ಚೀಲ ತೆರೆದು ನೋಡಿದರೆ ನಮಗೆ ಅಗತ್ಯವಿಲ್ಲದ್ದನ್ನೂ ಕೊಂಡು ತಂದಿರುತ್ತೇವೆ.

ನಾವು ಸಮಾಜದಿಂದ ಪಡೆದುದ್ದನ್ನು ವಾಪಾಸು ಕೊಡಬೇಕು. ಅದು ಜ್ಞಾನ ಅಥವಾ ಬೇರೆ ಏನೇ ಅಗಿರಬಹುದು.ಅಂತಹ ಪಾಶ್ಚಾತ್ಯರು ತಮಗೆ ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎನ್ನುತ್ತಾರೆ. ಸಮಯಕ್ಕೆ ಮಹತ್ವ ಕೊಡುವ ಪ್ರಾಮಾಣಿಕತೆಯನ್ನು ಕಲಿಯಬೇಕು. ವಿದೇಶದಲ್ಲಿ ದುಡ್ಡು ಮುಖ್ಯ ಎಂದು ನಂಬಿದ್ದರೆ, ಇಲ್ಲಿ ಜೀವಂತಿಕೆಯನ್ನು ನಂಬಿದ್ದೇವೆ. ನಾವುನಾನು ಒಳ್ಳೆಯವನೇ ಆದರೆಜಗತ್ತು ಒಳ್ಳೆಯದು. ನನ್ನ ಜೀವನ ಸಂ ತೊ ಷ ವಾಗಿರ ಬೇಕಾ ದರೆ ಒಳ್ಳೆಯದ್ದನ್ನೇ ಮಾಡಬೇಕು.

ಒಳ್ಳೆಯದನ್ನೇ ನೋಡಬೇಕು. ನಾವು ಬದುಕಿದಾಗ ಮನೆ ಸಮಾಜಕ್ಕೆ ಮಾಡುವುದು ಒಳ್ಳೆಯದನ್ನು ಮಾತ್ರವಲ್ಲ, ಕೃಷ್ಣನಂತೆ ಹೆಜ್ಜೆ ಗುರುತನ್ನು ಮೂಡಿಸಬೇಕು. ಜನರು ಓದದೇ ಅರ್ಥ ಮಾಡಿಕೊಂಡ ಮಹಾಕಾವ್ಯಗಳು ರಾಮಾಯಣ ಮತ್ತು ಮಹಾಭಾರತ ಎನ್ನುವುದು ಗಮನೀಯ ಎಂದು ಕರ್ಜಗಿ ಹೇಳಿದರು.

ಕಟೀಲು ದೇಗುಲದ ಅರ್ಚಕರಾದ ಶ್ರೀಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಸದಾನಂದ ಆಸ್ರಣ್ಣ ಉಪಸ್ಥಿತಿಯಲ್ಲಿ ಕರ್ಜಗಿಯವರನ್ನು ದೇವರ ಶೇಷವಸ್ತ್ರ ನೀಡಿ ಗೌರವಿಸಲಾಯಿತು. .

Related posts

ಸಾಹಿತಿ ಪುಷ್ಪ ಪ್ರಸಾದ್‌ ಅವರಿಗೆ ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ: ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Voiceoftulunadu

ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮಿನಿ ಅಸೋಸಿಯೇಶನ್ನೂತನ ಅಧ್ಯಕ್ಷರಾಗಿ ಅಡ್ವೊಕೇಟ್ ಶೇಖರ್ ಎಸ್.ಭಂಡಾರಿ ಆಯ್ಕೆ

Voiceoftulunadu

ಕುತ್ತುರು ಸರಕಾರಿ ಶಾಲೆಗೆ ಗ್ಲೋಬಲ್ ಸಿಂಪತಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ;

Voiceoftulunadu

Leave a Comment