November 6, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು ತಾಲೂಕು ಪತ್ರಕರ್ತರ ಸಂಘದ ದಶಮಾನೋತ್ಸವದ ಲೋಗೋ, ಡೈರೆಕ್ಟರಿ ಬಿಡುಗಡೆ : ದಶಮಾನೋತ್ಸವ ಕಾರ್ಯಕ್ರಮಕ್ಕೆ ಹಾರೈಸಿದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಕುರ್ಯ ;

ವರದಿ/ಚಿತ್ರ : ಈ ಮೀಡಿಯಾ

ಕಾಪು : ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ದಶಮಾನೋತ್ಸವ ಕಾರ್ಯಕ್ರಮದ ಲೋಗೋ ಹಾಗೂ ಡೈರೆಕ್ಟರಿಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುರ್ಯ ಬುಧವಾರ ಕಾಪು ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಕಾಪು ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘವು ದಶಮಾನೋತ್ಸವದ ನಿಮಿತ್ತ ಹಮ್ಮಿಕೊಳ್ಳಲಿರುವ ದಶ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕಾರ್ಯದರ್ಶಿ ಸುರೇಶ್ ಎರ್ಮಾಳು, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಮೀದ್ ಪಡುಬಿದ್ರಿ, ಕಾರ್ಯದರ್ಶಿ ಪುಂಡಲೀಕ ಮರಾಠ, ಕೋಶಾಧಿಕಾರಿ ಸಂತೋಷ್ ನಾಯಕ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಧಿಗಳು, ಕಾಪು ತಾಲೂಕು ಪತ್ರಕರ್ತರ ಸಂಘದ ಪೂರ್ವ ಅಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related posts

ತುಂಬೆ: ಭಾಗ್ಯೋದಯ ಮಿತ್ರ ಕಲಾ ವೃಂದದ ನವೀಕೃತ ಕಟ್ಟಡ ಉದ್ಘಾಟನೆ. ಯುವ ಶಕ್ತಿಯಿಂದ ವಿಕಸಿತ ಭಾರತದ ಯಶಸ್ಸು:ಡಾ ರವೀಶ್ ತುಂಗ ;

Voiceoftulunadu

‘ಮೀಡಿಯಾ ಮನಸುಗಳು’ ತಂಡದ ಕಳಕಳಿ : ದೇರೆಬೈಲ್ ಬಸ್ ತಂಗುದಾಣ ಭಾಗಶಃ ಸ್ವಚ್ಛ , ವಾಸ್ತವ ಸ್ಥಿತಿ ವಿಡಿಯೋ ಮೂಲಕ ಜನರ ಮುಂದಿಟ್ಟ ತಂಡ, ಸ್ವಚ್ಛಗೊಳಿಸಿದ ಸ್ಥಳೀಯರು ;

Voiceoftulunadu

ಫೆಸ್ಟ್’ಗೆ ಚಾಲನೆ ಬೆಳ್ಳಿ ಆಭರಣಗಳ ಅನಾವರಣ ಗೊಳಿಸಿದ ರೂಪದರ್ಶಿಗಳಾದ ಡಾ. ಆ್ಯನ್ಸಿ ಡಿಸೋಜಾ, ಭಾರತಿ ಸುರೇಶ್(Udupi) :

voiceoftulunadu

Leave a Comment