November 6, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮೊಡಂಕಾಪು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾಬಲೇಶ್ವರ ಟಿ. ಹೆಬ್ಬಾರ್ ಅವರಿಗೆ ಗೌರವಾಭಿನಂದನೆ.;

ವರದಿ/ ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ

ಬಂಟ್ವಾಳ : ದೀಪಿಕಾ ಪ್ರೌಢಶಾಲೆ, ಮೊಡಂಕಾಪು ವತಿಯಿಂದ ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಟಿ. ಹೆಬ್ಬಾರ್ ಅವರಿಗೆ ಶಾಲೆಯ ಸಭಾಂಗಣದಲ್ಲಿ ಗೌರವಾಭಿನಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಂದನೀಯ ಫಾದರ್ ವಿಕ್ಟರ್ ಡಿಸೋಜಾ ಅವರು ಮಾತನಾಡಿ, ಮಹಾಬಲೇಶ್ವರ ಹೆಬ್ಬಾರ್ ಅವರ ಸಕಲ ಗುಣಸಂಪನ್ನ ವ್ಯಕ್ತಿತ್ವ ಹಾಗೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಅವರು ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸಿ ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ತುಕಾರಾಂ ಪೂಜಾರಿ ಅವರು ಅಭಿನಂದನಾ ಭಾಷಣ ಮಾಡಿ, ಅರ್ಹ ವ್ಯಕ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಕನ್ನಡ ನಾಡು, ನುಡಿ ಹಾಗೂಭಾಷೆಯ ಬೆಳವಣಿಗೆಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.

ಗೌರವ ಉಪಸ್ಥಿತರಾಗಿ ರಾಕೇಶ್ ಮಲ್ಲಿ, ಅಶ್ವನಿ ಕುಮಾರ್ ರೈ, ಮಹಮ್ಮದ್ ವಳವೂರು, ಸುನಿಲ್ ಲೂಯಿಸ್, ಜೋನ್ ಗೊಮ್ಸ್ ಹಾಗೂ ನಾರಾಯಣ ಹೆಬ್ಬಾರ್ ಉಪಸ್ಥಿತರಿದ್ದರು.ಶಿವಪ್ರಸಾದ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.

ಹಿರಿಯ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದರು. ಮುಖ್ಯ ಶಿಕ್ಷಕ ಸಾಧು ಸ್ವಾಗತಿಸಿದರು. ಹಿರಿಯ ಶಿಕ್ಷಕ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಪ್ರಫುಲ್ಲ ಸಲ್ದಾನ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Related posts

ಬಂಟ್ವಾಳ : ಫೋಟೋ ಗ್ರಾಫರ್ಸ್ ವತಿಯಿಂದ ಕ್ಷಯ ರೋಗಿಗೆ ಪೌಷ್ಟಿಕ ಆಹಾರ ವಿತರಣೆ;

Voiceoftulunadu

ಗೋಕುಲ ಸಂಕುಲದಲ್ಲಿನ ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಆಚರಿಸಲ್ಪಟ್ಟ ಶ್ರೀಕೃಷ್ಣ ಜನ್ಮಾಷ್ಟಮಿ : ಶ್ರೀಕೃಷ್ಣನ ಅನುಗ್ರಹ ಪರಮ ಪುಣ್ಯದಾಯಕವಾದುದು : ಪುತ್ತಿಗೆ ಸುಗುಣೇಂದ್ರ ತೀರ್ಥರು ;

Voiceoftulunadu

ಕ್ರಿಯೇಟಿವ್ ಸ್ಫೂರ್ತಿಮಾತು: ನಾಡಿನ ಖ್ಯಾತ ಲೇಖಕ, ಚಿಂತಕ, ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಭಾಗಿ ;

Voiceoftulunadu

Leave a Comment