November 6, 2026
Uncategorizedಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಶ್ರೀ ಏಕದಂತ ಸೇವಾ ಸಮಿತಿ ಪಣಿಯಾಡಿ : ದೀಪಾವಳಿ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹಾಯಹಸ್ತ : ತಲಾ 2000ರೂ. ರಂತೆ 29 ಕುಟುಂಬಗಳಿಗೆ 58000 ರೂ. ಮೊತ್ತದ ಆಹಾರ ಸಾಮಾಗ್ರಿ ವಿತರಣೆ ;

ವರದಿ / ಚಿತ್ರ: ಈ ಮೀಡಿಯಾ

ಉಡುಪಿ: ಶ್ರೀ ಏಕದಂತ ಸೇವಾ ಸಮಿತಿ ಪಣಿಯಾಡಿ ಹಾಗೂ ದಾನಿಗಳ ಸಹಕಾರದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹಾಯಹಸ್ತ ನೀಡಲಾಯಿತು.

ಸಮಿತಿಯ ಆಯೋಜನೆಯಲ್ಲಿ ತಲಾ 2000ರೂ. ರಂತೆ 29 ಕುಟುಂಬಗಳಿಗೆ 58000 ರೂಪಾಯಿ ಮೊತ್ತದ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಆರನೇ ವರ್ಷದ ಕಾರ್ಯಕ್ರಮಕ್ಕೆ ಊರಿನ ಹಿರಿಯರಾದ ಬಾಲಕೃಷ್ಣ ಸರಳಾಯ, ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಪ್ರಾರ್ಥನೆ ಮುಖೇನ ಚಾಲನೆಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ನಾಗರಾಜ್ ಪಣಿಯಾಡಿ, ಗೌರವಾಧ್ಯಕ್ಷ ತಲ್ಲೂರು ಚಂದ್ರಶೇಖರ್ ಶೆಟ್ಟಿ, ವಿಠಲಮೂರ್ತಿ ಆಚಾರ್ಯ, ರಾಮದಾಸ್ ಶೆಟ್ಟಿಗಾರ್, ದತ್ತಾತ್ರೇಯ ಭಟ್, ಪ್ರವೀಣ್ ಕುಂಜಿಬೆಟ್ಟು, ಸಚ್ಚಿದ್ರ ನಾಯ್ಕ,ಮಿತೇಶ್ ಸೇರಿಗಾರ್, ನಗರಸಭೆ ಮಾಜಿ ಉಪಾಧ್ಯಕ್ಷರಾದ ಬಿ. ಕುಶಲ ಶೆಟ್ಟಿ ಇಂದ್ರಾಳಿ, ಮಲ್ಪೆ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಸುಧಾಕರ ಪೂಜಾರಿ, ಉದ್ಯಮಿ ಪೆರ್ಣಂ ಕಿಲ ಶ್ರೀಶ ನಾಯಕ್, ನಗರಸಭೆ ಮಾಜಿ ಸದಸ್ಯ ಶಾಂತರಾಮ್ ಸಾಲ್ವಂಕಾರ್, ದಿವಾಕರ ಸಾಲಿಯಾನ್, ನಾರಾಯಣ ಪೂಜಾರಿ, ಶಂಕರ್ ನಾಯ್ಕ, ಪ್ರಕಾಶ್ ಪೂಜಾರಿ, ಮುದ್ದು ನಾಯ್ಕ, ರತ್ನಾಕರ್ ನಾಯ್ಸ್, ಉಜ್ವಲ್ ಶ್ರೀಯಾನ್, ಹರೀಶ್ ಶೆಟ್ಟಿಗಾರ್, ಕೃಷ್ಣ ನಾಯ್ಕ, ಸುಧಾಕರ ನಾಯ್ಕ, ಪ್ರದೀಪ್ ಶ್ರೀಯಾನ್, ಹರೀಶ್ ನಾಯ್ಕ, ಶ್ರೀಮತಿ ಜಾನಕೀ ಕೃಷ್ಣ ನಾಯ್ಕ, ರವಿ ಸೇರಿಗಾರ್, ವಸಂತಿ ಸೇರಿಗಾರ್, ಶಿವರಾಮ್ ಶೆಟ್ಟಿಗಾರ್, ಮುಕ್ತ ಎಂ. ಜಿ. ಎಂ, ಜಗದೀಶ ಸೇರಿಗಾರ್, ಹರ್ಷಿಲ್ ಡಿ. ತಿಂಗಳಾಯ, ಆಯುಷ್, ಅನುರಾಗ್ ಆಚಾರ್ಯ, ಶ್ಯಾಮ ಪೂಜಾರಿ, ವಿಠಲ ನಾಯ್ಕ ಉಪಸ್ಥಿತರಿದ್ದರು.

Related posts

ದಕ್ಷಿಣ ಕನ್ನಡವೋ, ಮಂಗಳೂರು ಜಿಲ್ಲೆಯೋ? ಮರುನಾಮಕರಣದ ಕರಡು ಅಧಿಸೂಚನೆಗೆ ಸಚಿವ ಸಂಪುಟ ಅಸ್ತು; ಪರ – ವಿರೋಧದ ಬಿಸಿಬಿಸಿ ಚರ್ಚೆ;

Voiceoftulunadu

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಕೆನಡಾ ಘಟಕದ ಅಧ್ಯಕ್ಷರಾಗಿ ಶ್ರೀ ಸುದರ್ಶನ್ ಶೆಟ್ಟಿ ನೇಮಕ ;

Voiceoftulunadu

ಜೈನಕಾಶಿ ಮೂಡಬಿದಿರೆ ಇದರ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಯೋಗ ಪ್ರಾತ್ಯಕ್ಷಿಕೆಯೋಗಾಸನಗೈದ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ  ;

Voiceoftulunadu

Leave a Comment