November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಮಂಗಳೂರು ದಸರಾ ಸಂಭ್ರಮದ “ಪಿಲಿ ನಲಿಕೆ ” ಕಾರ್ಯಕ್ರಮದಲ್ಲಿ ದಲ್ಲಿ ‘ದಿ ಗ್ರೇಟ್ ಖಲಿ’ ದರ್ಬಾರ್, ತುಳುನಾಡ ಹುಲಿ ಕುಣಿತಕ್ಕೆ ಎಲ್ಲರೂ ಫಿದಾ! ;

ಮಂಗಳೂರು : ಮಂಗಳೂರು ದಸರಾ ಸಂಭ್ರಮದ ಪಿಲಿನಲಿಕೆ ಸೀಸನ್ 11 ಕಾರ್ಯಕ್ರಮದಲ್ಲಿ ಜಗದ್ಪ್ರಸಿದ್ಧ ರೆಸ್ಲೆರ್ ಆದ ದಿ ಗ್ರೇಟ್ ಖಲಿ ಅವರು ಅನಿರೀಕ್ಷಿತ ಭೇಟಿ ನೀಡಿ ತುಳುವಿನಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದರು. ಪಿಲಿನಲಿಕೆ ಕಾರ್ಯಕ್ರಮದ ಹುಲಿಕುಣಿತ ಸ್ಪರ್ಧೆಯಲ್ಲಿ ಪೊಳಲಿ ಟೈಗರ್ಸ್ ಪ್ರಥಮ ಸ್ಥಾನ ಪಡೆದಿದೆ.

ಖಲಿಯನ್ನು ನೋಡಲು ಮುಗಿಬಿದ್ದ ಜನಸಾಗರ :

ದೈತ್ಯಾಕಾರದ. ಗ್ರೇಟ್ ಖಲಿಯನ್ನು ಕಣ್ಣಾರೆ ನೋಡಲು ಬೆಳಗ್ಗಿನಿಂದಲೇ ಜನಸಾಗರ ಕಾದು ಕುಳಿತಿತ್ತು. ರಾತ್ರಿ ಸುಮಾರು 10:30ರ ಸುಮಾರಿಗೆ ವೇದಿಕೆಗೆ ಖಲಿ ಬರುವ ವೇಳೆ ಜನರ ಶಿಳ್ಳೆ ಹಾಗೂ ಚಪ್ಪಾಳೆಯ ಸದ್ದು ಮುಗಿಲುಮುಟ್ಟಿತು.ಈ ಕಡೆ ತುಳುನಾಡಿನ ಪಿಲಿನಲಿಕೆ ಪ್ರದರ್ಶನವನ್ನು ಕಣ್ಣಾರೆ ನೋಡಿದ ಖಲಿ ಕರಾವಳಿಯ ಪಿಲಿ ನಲಿಕೆ ಯನ್ನು ಕಣ್ತುಂಬಿಕೊಂಡು ಮನ್ಸೂರ್ವಕವಾಗಿ ಮೆಚ್ಚಿಕೊಂಡರು. ಅಂತಿಮವಾಗಿ ಪ್ರಥಮ ಸ್ಥಾನ ಪಡೆದ ‘ಪೊಳಲಿ ಟೈಗರ್ಸ್‌’ ತಂಡದ ಅದ್ಭುತ ಪ್ರದರ್ಶನವನ್ನು ಕಂಡು ದೈತ್ಯ ರೆಸ್ಲೆರ್ ವಾವ್ ಎಂದು ಪ್ರಶಂಸಿಸಿದರು.

ಪಿಲಿ ನಲಿಕೆ ವೇದಿಕೆಯಲ್ಲಿ ತುಳುವಿನಲ್ಲೇ ‘ನಮಸ್ಕಾರ ಕುಡ್ಲ, ಎಂಚ ಉಲ್ಲರ್’ ಎಂದು ಮಾತು ಆರಂಭಿಸಿದ ಖಲಿ, ತಾವು ಜಗತ್ತಿನ ಹಲವೆಡೆ ಹೋಗಿದ್ದರೂ ಇಲ್ಲಿಯಷ್ಟು ಪ್ರೀತಿಯನ್ನು ಎಲ್ಲೂ ಕಂಡಿಲ್ಲ ಎಂದು ಹೇಳಿದರು . “ಹುಲಿ ಕುಣಿತದ ಬಗ್ಗೆ ವಿಡಿಯೋ ನೋಡಿ ಬೇರೆಯೇ ರೀತಿಯಾದ ಕಲ್ಪನೆ ಇತ್ತು, ಆದರೆ ಇದೀಗ ನೇರ ಪ್ರದರ್ಶನ ನೋಡಿದ ಬಳಿಕ ಮೈ ನವಿರೇಳುತ್ತಿದೆ” ಎಂದು ಎದ್ದು ನಿಂತು ಮೆಚ್ಚುಗೆ ವ್ಯಕ್ತಪಡಿಸಿದರು. ಖಲಿ ಜೊತೆಗೆ ಖ್ಯಾತ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹಾಗೂ ಅಂತರಾಷ್ಟ್ರೀಯ ಬಾಕ್ಸರ್ ವಿಜಯೇಂದರ್ ಸಿಂಗ್ ಕೂಡ ಆಗಮಿಸಿ ಕರಾವಳಿ ಹುಲಿಗಳ ಆರ್ಭಟಕ್ಕೆ ಶಹಬಾಸ್ ಗಿರಿ ನೀಡಿದರು.

ಈ ಬಾರಿಯ ಪಿಲಿನಲಿಕೆ ಸೀಸನ್ 11 ರಲ್ಲಿ ಒಂಬತ್ತು ಹುಲಿವೇಷ ತಂಡಗಳು ವಿಭಿನ್ನ ಪ್ರಯೋಗಗಳ ಮೂಲಕ ಅಬ್ಬರಿಸಿದವು. ಅದರಲ್ಲೂ 48 ಕೆಜಿಯ ಅಕ್ಕಿ ಮುಡಿಯನ್ನು ಕೈಯಿಂದ ಮುಟ್ಟದೆ ಕಚ್ಚಿ ಹಿಂದಕ್ಕೆ ಎಸೆಯುವ ಸಾಹಸ ವೇಷಧಾರಿಗಳ ಮೈಕಟ್ಟು ತೋರಿಸಿತು.

ಪ್ರತಿಷ್ಠಿತ ಮೊದಲ ಬಹುಮಾನ 10 ಲಕ್ಷ ರೂಪಾಯಿಯನ್ನು ‘ಪೊಳಲಿ ಟೈಗರ್ಸ್’ ಪಡೆದರೆ, 2ನೇ ಬಹುಮಾನ 5 ಲಕ್ಷವನ್ನು ‘ಎಮ್ಮೆಕೆರೆ ಫ್ರೆಂಡ್ಸ್’ ಹಾಗೂ 3ನೇ ಬಹುಮಾನ 3 ಲಕ್ಷವನ್ನು ‘ಸೋಮೇಶ್ವರ ಫ್ರೆಂಡ್ಸ್ ಸರ್ಕಲ್’ ಪಡೆದವು .

ಒಟ್ಟಿನಲ್ಲಿ ಮಂಗಳೂರಿನ ಈ ದಸರಾ ಹಬ್ಬವೂ ವಿಶ್ವ ಮಟ್ಟದಲ್ಲಿ ಸದ್ದು ಮಾಡುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

Related posts

ಸುಭಾಶ್ ನಗರ: ಅ.17ರಿಂದ ‘ಸಜಿಪ ದಸರಾ’ ಶತ ಸಂಭ್ರಮ. ಆರು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ : ರೂ 40 ಲಕ್ಷ ವೆಚ್ಚದ ಶಾಲಾ ಕಟ್ಟಡ ಹಸ್ತಾಂತರ ;

Voiceoftulunadu

ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ೪ನೇ ವಾರ್ಷಿಕ ಮಹಾಸಭೆ ;

Voiceoftulunadu

ಕರ್ನಾಟಕ ಪ್ರವಾಸಿ ತಾಣಗಳಿಗೆ ಆಕಾಶ ಮಾರ್ಗದ ಸಂಪರ್ಕ :13 ಕೇಂದ್ರಗಳಲ್ಲಿ ಬೃಹತ್ ‘ಕೇಬಲ್ ಕಾರ್’ ವ್ಯವಸ್ಥೆಗೆ ಸರ್ಕಾರ ಗ್ರೀನ್ ಸಿಗ್ನಲ್! ;

Voiceoftulunadu

Leave a Comment