November 4, 2026
Uncategorizedಅಂತಾರಾಷ್ಟ್ರೀಯಕಲೆ/ಸಾಹಿತ್ಯಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ದುಬೈಯಲ್ಲಿ ಯುಎಇ ಬಂಟ್ಸ್‌ನ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನ ;

ದುಬೈ: ಅರಬ್ ಸಂಯುಕ್ತ ಸಂಸ್ಥಾನದ ಪ್ರಮುಖ ಜಾತಿ ಸಂಘಟನೆಗಳಲ್ಲಿ ಒಂದಾದ ಯುಎಇ ಬಂಟ್ಸ್ ವತಿಯಿಂದ ಆಯೋಜಿಸಲಾದ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆಯು ಅಕ್ಟೋಬರ್ 25ರಂದು ದುಬೈಯ ಜೆ.ಎಸ್.ಎಸ್. ಇಂಟರ್‌ನ್ಯಾಷನಲ್ ಪ್ರೈವೇಟ್ ಶಾಲೆಯ ಸಭಾಂಗಣದಲ್ಲಿ ಭಕ್ತಿ ಮತ್ತು ಸಡಗರದಿಂದ ನೆರವೇರಿತು.

ಯುಎಇಯ ಏಳು ಎಮಿರೇಟ್ಸ್‌ಗಳ ಬಂಟ ಬಾಂಧವರು ಹಾಗೂ ಯುಎಇಯ ವಿವಿಧ ತುಳು-ಕನ್ನಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಶ್ರೀ ರಘು ಭಟ್ ಹಾಗೂ ಶ್ರೀ ಸಂತೋಷ್ ಭಟ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಯುಎಇ ಬಂಟ್ಸ್‌ನ ಸುಮಂಗಲೆಯರು ದೀಪ ಬೆಳಗಿಸುವ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಧೂಷಿ ಸ್ವಪ್ನ ಕಿರಣ್ ಹಾಗೂ ವಿಧೂಷಿ ರೂಪ ಕಿರಣ್ ಅವರ ನಿರ್ದೇಶನದಲ್ಲಿ ಯುಎಇ ಬಂಟ್ಸ್‌ನ ಮಕ್ಕಳಿಂದ ಮೂಡಿಬಂದ ನೃತ್ಯ ಭಜನೆ ಎಲ್ಲರ ಗಮನ ಸೆಳೆಯಿತು.

ಸಾವಿರಾರು ಭಕ್ತರ ಪರವಾಗಿ ದಿನೇಶ್ ಶೆಟ್ಟಿ ಕೊಟ್ಟಿಂಜ, ಆರತಿ ದಿನೇಶ್ ಶೆಟ್ಟಿ, ಸತೀಶ್ ಶೆಟ್ಟಿ ಹಾಗೂ ಸಂಗೀತ ಸತೀಶ್ ಶೆಟ್ಟಿ ಅವರು ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆ ನಡೆಯಿತು.

ಶ್ರೀ ಸತ್ಯನಾರಾಯಣ ದೇವರ ಮಹಾಪೂಜೆಯ ಬಳಿಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪೋಷಕರನ್ನು ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಶೆಟ್ಟಿ, ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉಪಾಧ್ಯಕ್ಷ ಪ್ರೇಮ್‌ನಾಥ್ ಶೆಟ್ಟಿ ಹಾಗೂ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಅವರು ಶಾಲು ಹೊದಿಸಿ ವಿಶೇಷ ಪ್ರಸಾದ ನೀಡಿ ಗೌರವಿಸಿದರು.

ಚಿತ್ರ ಪ್ರಸನ್ನ ಶೆಟ್ಟಿ ಹಾಗೂ ಶಶಿ ರವಿರಾಜ್ ಶೆಟ್ಟಿ ಅವರು ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೆ ಅಚ್ಚುಕಟ್ಟಾಗಿ ನಿರೂಪಿಸಿದರು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಕೋರ್ ಕಮಿಟಿ ಸದಸ್ಯರು, 2025-26ನೇ ಸಾಲಿನ ಸಂಘಟನಾ ಸಮಿತಿಯ ಸದಸ್ಯರು ಹಾಗೂ ಯುಎಇ ಬಂಟ್ಸ್‌ನ ಎಲ್ಲಾ ಕಾರ್ಯಕರ್ತರಿಗೆ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಅವರು ಕೃತಜ್ಞತೆ ಸಲ್ಲಿಸಿದರು.

Related posts

ಮರಕಡ; ಜಮಾತುಲ್ ಮುಸ್ಲಿಮೀನ್ ಕಮಿಟಿ ವತಿಯಿಂದ ಸ್ವಾತಂತ್ರ್ಯ ಸಂಭ್ರಮ : ಸಯ್ಯದ್ ಅಬ್ದುರಹ್ಮಾನ್ ಸಆದಿ ಅಲ್ಲಾದಿ, ಸದಸ್ಯರಿಂದ ಧ್ವಜಾರೋಹಣ;

Voiceoftulunadu

ಮಂಗಳೂರು ವಲಯ ತುಳುವ ಮಹಾಸಭೆಯ ನೂತನ ಅಧ್ಯಕ್ಷರಾಗಿ ಉದ್ಯಮಿ ಕಿಶೋರ್ ಡಿ ಶೆಟ್ಟಿ ಅಧಿಕೃತವಾಗಿ ನೇಮಕ;

Voiceoftulunadu

ಬೆಂಗಳೂರಿನಲ್ಲಿ ಸಂಪಾಜೆ ಸಾಂಸ್ಕೃತಿಕ ಸಂಭ್ರಮ : 2 ಅದ್ಧೂರಿ ಆಚರಣೆ;

Voiceoftulunadu

Leave a Comment