November 6, 2026
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ವೈಕುಂಠ ಬಾಳಿಗಾ ಕಾನೂನು ಕಾಲೇಜು ವಜ್ರಮಹೋತ್ಸವ ಸಂಭ್ರಮಕ್ಕೆ ಚಾಲನೆ : ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನವನ್ನು ವಿವೇಚನೆಯಿಂದ ಬಳಸಬೇಕು : ನ್ಯಾಯಾಧೀಶ ರಮೇಶ್ ಎಂ.;

ವರದಿ / ಚಿತ್ರ : ಈ ಮೀಡಿಯಾ

ಉಡುಪಿ : ಪ್ರಸ್ತುತ ಕಾಲಘಟ್ಟದಲ್ಲಿ ಡಿಜಿಟಲ್ ಸಾಧನಗಳಬಳಕೆ ಅನಿವಾರ್ಯವಾಗಿದೆ. ಹಾಗಾಗಿ ಕಾನೂನು ಕ್ಷೇತ್ರದಲ್ಲಿಯೂ ಕೃತಕ ಬುದ್ದಿಮತ್ತೆ ಹಾಗೂ ಅಧುನಿಕ ತಂತ್ರಜ್ಞಾನಗಳ ಪ್ರಭಾವ ಹೆಚ್ಚಾಗಿದೆ.

ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಪೂರಕವಾದ ಡಿಜಿಟಲ್ ತಂತ್ರಜ್ಞಾನಗಳನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕು ಹಾಗೂ ಇವುಗಳ ಬಳಕೆಯಿಂದ ಗಮನ ಬೇರೆಡೆಗೆ ಹರಿಯದಂತೆ ಹಾಗೂ ಅವುಗಳ ಮೇಲೆ ಅತಿಯಾಗಿ ಅವಲಂಬಿತರಾಗದಂತೆ ಎಚ್ಚರಿಕೆ ವಹಿಸಬೇಕೆಂದು ಉಡುಪಿಯ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ರಮೇಶ್ ಎಂ. ಹೇಳಿದರು.

ಅವರು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ವಜ್ರಮಹೋತ್ಸವದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಯುವಜನರು ತಮ್ಮ ಆಂತರಿಕ ಶಕ್ತಿಯಲ್ಲಿ ನಂಬಿಕೆ ಇಟ್ಟುಕೊಂಡು ಶಿಸ್ತು ಮತ್ತು ನೈತಿಕಮೌಲ್ಯಗಳನ್ನು ತನ್ನು ಮೈಗೂಡಿಸಿಕೊಂಡುಸಮಾಜದ ಸೇವೆಗೆ ತಮ್ಮನ್ನು ಸರ್ಪಿಸಿ ಕೊಳ್ಳಬೇಕೆಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಸುರೇಖಾ ಕೆ ಯವರು ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಮಾನವಿಕ ವಿಭಾಗದ ಮುಖ್ಯಸರಾದ ಪ್ರೊ. ರೋಹಿತ್ ಎಸ್. ಅಮೀನ್ ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲೆ ಡಾ. ಪ್ರೀತಿ ಹರೀಶ್ ರಾಜ್ ವಿವಿಧ ಕ್ಲಬ್ ಗಳ ಬಗ್ಗೆ ಮಾಹಿತಿ ನೀಡಿದರು.ಐಕ್ಯೂಎಸಿ ಸಂಯೋಜಕ ಡಾ. ಜಯಮೋಲ್ಪಿ ಯವರು ಮಹೋತ್ಸವದ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ತಿಳಿಸಿದರು. ವಾರ್ಷಿಕಚಟುವಟಿಕೆಗಳವೈಭವಿ ಪ್ರಾರ್ಥಿಸಿದರು. ರಷಿಕಾ ಸ್ವಾಗತಿಸಿದರು. ದೀಪಿಕಾ ಸಾಗ‌ರ್ ವಂದಿಸಿದರು. ಸಂಜನಾ ನಿರೂಪಿಸಿದರು.

Related posts

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿಯಾದ ಡಾ|ಕೆ.ಸಿ. ನಾರಾಯಣ ಗೌಡ ನಿಯೋಗ ;

Voiceoftulunadu

ನೂತನ ಸಿಎಂ ಡಿಕೆ ಶಿವಕುಮಾರ್ ಭರ್ಜರಿ ಕೊಡುಗೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಯುವ ಸಂಘಗಳಿಗೆ ತಲಾ 10 ಲಕ್ಷ ರೂ. ಅನುದಾನ!

Voiceoftulunadu

ಬೆಂಜನಪದವು: ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ ಆಚರಣೆ ;

Voiceoftulunadu

Leave a Comment