September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ ಮಹಾಲಕ್ಷ್ಮೀ ವ್ರತ, ಪೂಜೆ ಸಂಪನ್ನ ವರಮಹಾಲಕ್ಷ್ಮೀ ಪೂಜೆಯಲ್ಲಿ ಸಾವಿರಾರು ಮಹಿಳೆಯರ ಉಪಸ್ಥಿತಿ ;

ವರದಿ /ಚಿತ್ರ :ಈ ಮೀಡಿಯಾ

ಉಚ್ಚಿಲ : ದಕ್ಷಿಣಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿತು.ಬೆಳಿಗ್ಗೆ 9.30 ಗಂಟೆಗೆ ಕಲಶ ಪ್ರತಿಷ್ಠೆ ನೇರವೇರಿತು. ನಂತರ ಸಾಮೂಹಿಕ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ಸಂಪನ್ನಗೊಂಡಿತು.

ಮಧ್ಯಾಹ್ನ 12.00 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ ಅಮ್ಮನ, ಶ್ರೀ ಭದ್ರಕಾಳಿ ಅಮ್ಮನ ಮಹಾಪೂಜೆ ನೆರವೇರಿತು. ಇದೇ ಸಂದರ್ಭ ಭದ್ರಕಾಳಿ ಅಮ್ಮನ ದರ್ಶನ ಸೇವೆ ನೆರವೇರಿತು.ಮಹಾ ಪೂಜೆಯ ಬಳಿಕ ಮಹಾ ಅನ್ನಸಂತರ್ಪಣೆ ನೆರವೇರಿತು.

ಈ ಸಂದರ್ಭ ದಕ್ಷಿಣಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ.ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ರತ್ನಾಕ‌ರ್ಸಾಲ್ಯಾನ್ ಮಲ್ಪೆ, ಸುಜಿತ್ ಸಾಲ್ಯಾನ್ ಮೂಲ್ಕಿ, ಗುಂಡು ಬಿ. ಅಮೀನ್ ಕಿದಿಯೂರು, ವಿನಯ್ ಕರ್ಕೇರ ಮಲ್ಪೆ, ವಾಸುದೇವ ಸಾಲ್ಯಾನ್ ಕಟಪಾಡಿ, ಸುಧಾಕರ್ ಕುಂದರ್ ಬಂಕೇರ್ ಕಟ್ಟ, ಶ್ರೀಮತಿ ಜಯಾ ಶೆಟ್ಟಿ ಕಟಪಾಡಿ, ದಿನೇಶ್ ಎರ್ಮಾಳ್, ಅನಿಲ್ ಕುಮಾರ್ ಬೊಕ್ಕಪಟ್ಟಣ, ಸತೀಶ್ ಸಾಲ್ಯಾನ್ ಎರ್ಮಾಳ್, ಮನೋಜ್ ಕಾಂಚನ್ ಎರ್ಮಾಳ್, ಶಿವರಾಮ್ ಕೋಟ, ಸುಧಾಕರ್ ಸುವರ್ಣ ಎರ್ಮಾಳು, ಮೋಹನ್ ಬಂಗೇರ ಕಾಪು, ಸರ್ವೋತ್ತಮ ಕುಂದರ್, ಶಿವಪ್ಪ ಕಾಂಚನ್ ಮಲ್ಪೆ, ಸತೀಶ್ ಕುಂದರ್ ಮಲ್ಪೆ, ನಾರಾಯಣ ಸಿ. ಕರ್ಕೇರ, ಶ್ರೀಮತಿ ಸುಗುಣ ಎಸ್ ಕರ್ಕೇರ, ಶ್ರೀಮತಿ ಕವಿತಾ ಕಾಂಚನ್, ವಿನಯ್ ಕರ್ಕೇರ ಮಲ್ಪೆ, ಗುಂಡು ಬಿ ಅಮೀನ್ ಕಿದಿಯೂರ್, ಸತೀಶ್ ಸಾಲ್ಯಾನ್ ಎರ್ಮಾಳ್, ಸುಧಾಕರ ಸುವರ್ಣ ಎರ್ಮಾಳು, ಸುಗುಣ ಎಸ್‌. ಕರ್ಕೇರ, ಪೂರ್ಣಿಮಾ ಚಂದ್ರಶೇಖರ, ಮೋಹನ್ ಬಂಗೇರ ಕಾಪು, ಶ್ರೀ ಮಹಾಲಕ್ಷ್ಮೀ ದೇವಳದ ಪ್ರಬಂಧಕ ಸತೀಷ್ ಅಮೀನ್ ಮುಂತಾದವರು ಉಪಸ್ಥಿತರಿದ್ದರು.

Related posts

ಕರ್ನಾಟಕ ಪ್ರವಾಸಿ ತಾಣಗಳಿಗೆ ಆಕಾಶ ಮಾರ್ಗದ ಸಂಪರ್ಕ :13 ಕೇಂದ್ರಗಳಲ್ಲಿ ಬೃಹತ್ ‘ಕೇಬಲ್ ಕಾರ್’ ವ್ಯವಸ್ಥೆಗೆ ಸರ್ಕಾರ ಗ್ರೀನ್ ಸಿಗ್ನಲ್! ;

Voiceoftulunadu

ಆ.09: ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರದಲ್ಲಿತುಳುನಾಡಿನ ಮರೆಯಾಗುತ್ತಿರುವ ಸಂಸ್ಕೃತಿ-ಸಂಪ್ರದಾಯದ ವಿಚಾರ ಸಂಕಿರಣ ;

Voiceoftulunadu

ಸರೋವರ ಕ್ಷೇತ್ರ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮೀ ಸನ್ನಿಧಿಯಲ್ಲಿ 2027 ರ ಫೆ. 23 ರಿಂದ 28 ರ ತನಕ ನವೀಕರಣ ಬ್ರಹ್ಮಕಲಶೋತ್ಸವದೊಂದಿಗೆ ಅತ್ಯಪೂರ್ವ ತೆಪ್ಪೋತ್ಸವ;

Voiceoftulunadu

Leave a Comment