September 5, 2026
Uncategorizedಕ್ರೈಮ್ಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಶಾಸಕರಿಂದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತು : ದೂರು ದಾಖಲು, ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ ಕಾಪು ಯುವ ಕಾಂಗ್ರೆಸ್ ವತಿಯಿಂದ ದೂರು;

ವರದಿ /ಚಿತ್ರ :ಈ ಮೀಡಿಯಾ

ಪಡುಬಿದ್ರಿ : ಲೋಕಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಾಪು ಯುವ ಕಾಂಗ್ರೆಸ್ ವತಿಯಿಂದ ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಿಯಾಜ್ ನೇತೃತ್ವದಲ್ಲಿ ಪಡುಬಿದ್ರಿ ಠಾಣೆಗೆ ದೂರು ನೀಡಲಾಯಿತು.

ಇತ್ತೀಚೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರವರು ಅಸಂವಿದಾನಿಕ ಶಬ್ದ ಬಳಸಿದ್ದರು.ಈ ಸಂದರ್ಭ ಮಾತನಾಡಿದ ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಿಯಾಜ್, ಜವಾಬ್ದಾರಿಯುತ ಶಾಸಕಸ್ಥಾನದಲ್ಲಿದ್ದು ನೀಡಿದ ಬೇಜವಾಬ್ದಾರಿ ಹೇಳಿಕೆಯನ್ನು ಯುವ ಕಾಂಗ್ರೆಸ್ ಖಂಡಿಸುತ್ತದೆ. ನಮ್ಮ ನೇತಾರ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದ ಪ್ರಮುಖರಾದ ಗಣೇಶ್ ಕೋಟ್ಯಾನ್, ಕೇಶವ ಸಾಲ್ಯಾನ್, ರಮೀಜ್ ಹುಸೇನ್, ಅಶ್ವಿನ್ ಕೋಟ್ಯಾನ್, ಶಫಿ ಕಲಂದರ್, ತಸ್ಮಿನ್ ಅರಹಾ, ಎಂ.ಎಸ್.ಮನ್ಸೂರ್, ಜ್ಯೋತಿ ಮೆನನ್, ಸುಚರಿತ, ಸಂತೋಷ್ ಪಡುಬಿದ್ರಿ, ಕೀರ್ತಿ ಕಲ್ಲಟ್ಟೆ, ವಿಠಲ್ ಮಾಸ್ತರ್, ಬುಡಾನ್ ಸಾಹೇಬ್, ಸುನಂದ ಸಾಲ್ಯಾನ್, ಮುಬೀನಾ ಮುಂತಾದವರಿದ್ದರು.

Related posts

ಆಗಸ್ಟ್ 13 ಕ್ಕೆ ಮಂಗಳೂರಿನಲ್ಲಿ ಆರಂಭವಾಗಲಿದೆ ಅಂತಾರಾಷ್ಟ್ರೀಯ ಮಟ್ಟದ ‘ಡೋಲ್ವೆ 2′(Dolce Estetica)ಹೊಸ ಸೌಂದರ್ಯ ಚಿಕಿತ್ಸಾ ಕೇಂದ್ರ ಟ್ರ್ಯಾಂಡ್ ಎಂಟ್ರಿ!

Voiceoftulunadu

ಕಲೆ, ಸಂಸ್ಕೃತಿ ಜನರನ್ನು ಬೆಸೆಯುವ ಸೇತುವೆ: ಶ್ರೀ ರಮಾನಂದ ಗುರೂಜಿ, ಸಂಪಾಜೆ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿದ ಗುರೂಜಿ;

Voiceoftulunadu

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಎಂಎಲ್ಸಿ ಭಂಡಾರಿ ಆಗ್ರಹ : ಉಡುಪಿ ಬಿಜೆಪಿ ಆಯೋಜಿಸಿದ್ದ ಸಭೆಯಲ್ಲಿ ಯಶ್ವಾಲ್ ಸುವರ್ಣರಿಂದ ಭಾಷಣದ ಹಿನ್ನೆಲೆ;

Voiceoftulunadu

Leave a Comment