September 5, 2026
Uncategorized

ಉಡುಪಿ ಶ್ರೀಕೃಷ್ಣನ ದಿವ್ಯ ಸನ್ನಿಧಿಯಲ್ಲಿ 25 ಗಂಟೆಗಳ ನಿರಂತರ ದಾಸಕೀರ್ತನೆ ಗಾಯನ : ವಿಶ್ವದಾಖಲೆ ನಿರ್ಮಿಸಿದ ವಿದುಷಿ ಸಂಗೀತ ಬಾಲಚಂದ್ರರಿಗೆ ‘ಗೀತಾ ಗಂಗೋತ್ರಿ’ಬಿರುದು;

ವರದಿ/ ಚಿತ್ರ: ಈ ಮೀಡಿಯಾ

ಉಡುಪಿ :ಉಡುಪಿಯ ಶ್ರೀಕೃಷ್ಣನ ದಿವ್ಯ ಸನ್ನಿಧಿಯಲ್ಲಿ ಸತತ 25 ಗಂಟೆಗಳ ಕಾಲ ನಿರಂತರವಾಗಿ ದಾಸರ ಕೀರ್ತನೆಗಳನ್ನು ಗಾಯನ ಮಾಡುವ ಮೂಲಕ ಸಂಗೀತ ವಿದುಷಿ ಸಂಗೀತ ಬಾಲಚಂದ್ರ ಅವರು విûదాఖల ನಿರ್ಮಿಸಿದ್ದಾರೆ.ಶ್ರೀಕೃಷ್ಣನ ಸನ್ನಿದಿಯಲ್ಲಿ ಹರಿನಾಮ ಸಂಕೀರ್ತನೆಯ ಮೂಲಕ ಮೂಡಿಬಂದ ಈ ಅಪೂರ್ವ ಸಂಗೀತ ಸಾಧನೆ ಉಡುಪಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ದಾಖಲಿಸಿದೆ.

ಭಾನುವಾರ ಬೆಳಿಗ್ಗೆ 6.30ಕ್ಕೆ ಶ್ರೀ ಪುತ್ತಿಗೆ ಮಠದ ಭಗವದ್ಗೀತಾ ಮಂದಿರದ ನೃಸಿಂಹ ಸಭಾಭವನದಲ್ಲಿ ಆರಂಭಗೊಂಡ ಸಂಗೀತ ಬಾಲಚಂದ್ರ ಅವರ ನಿರಂತರ ದಾಸವಾಣಿ ಗಾಯನ ಸೋಮವಾರ ಬೆಳಿಗ್ಗೆ ಸುಮಾರು 7.40ಕ್ಕೆ ಮಂಗಳವಾಯಿತು. ಕೊನೆಯಲ್ಲಿ ‘ಕೃಷ್ಣ ಏನ ಬಾರದೆ ಎಂಬ ದಾಸರ ಪದವನ್ನು ಭಕ್ತಿಭಾವದಿಂದ ಹಾಡಿದ ಅವರು ತಮ್ಮ 25 ಗಂಟೆಗಳ ಕಂಠಸಿರಿಯನ್ನು ಉಡುಪಿಯ ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ಸಮರ್ಪಿಸಿ ಧನ್ಯರಾದರು.ಕೇವಲ ದಾಸರ ಪದಗಳು ಮತ್ತು ಕೀರ್ತನೆಗಳ ಮೂಲಕ ಸತತ 25 ಗಂಟೆಗಳ ಕಾಲ ಹರಿನಾಮ ಸ್ಮರಣೆ ನಡೆಸಿರುವುದು อ่ ಸಾಧನೆಯ ವಿಶೇಷತೆ.

ಪಕ್ಕವಾದ್ಯ ಕಲಾವಿದರ ಸುಶ್ರಾವ್ಯ ಸಹಕಾರದೊಂದಿಗೆ ಒಂದರ ಹಿಂದೆ ಒಂದರಂತೆ ದಾಸಕೀರ್ತನೆಗಳನ್ನು ಪ್ರಸ್ತುತಪಡಿಸಿದ ಸಂಗೀತ ಬಾಲಚಂದ್ರ ಅವರು ತಮ್ಮ ಸಂಗೀತ ಸಾಧನೆಯನ್ನು ಭಗವಂತನಿಗೆ ಅರ್ಪಿಸುವ ಮೂಲಕ ವಿಶ್ವದಾಖಲೆಗೆ ಪಾತ್ರರಾದರು.ಈ ಐತಿಹಾಸಿಕ ಸಾಧನೆಯನ್ನು ಅಧಿಕೃತವಾಗಿ ದೃಢೀಕರಿಸಲು ಆಗಮಿಸಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ಏಷ್ಯಾ ಹೆಡ್ ಡಾ. ಮನೀಷ್ ವಿಕ್ಟೋಯಿ ಅವರು ವಿಶ್ವದಾಖಲೆಯನ್ನು ಘೋಷಿಸಿ ಪ್ರಮಾಣಪತ್ರವನ್ನು ನೀಡಿದರು.

ಬಳಿಕ ಪೂಜ್ಯ ಶ್ರೀಪಾದರು ವಿಶ್ವದಾಖಲೆಯಪ್ರಮಾಣಪತ್ರವನ್ನು ವಿದುಷಿ ಸಂಗೀತ ಬಾಲಚಂದ್ರ ಅವರಿಗೆ ಹಸ್ತಾಂತರಿಸಿ ಆಶೀರ್ವದಿಸಿದರು.ಕಾರ್ಯಕ್ರಮದ ವಿಶೇಷ ಪರಮಪೂಜ್ಯ ಅದಮಾರು ಮಠಾಧೀಶರಾದ ಆಕರ್ಷಣೆಯಾಗಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಬೆಳಗ್ಗೆಯೇ ತಮ್ಮ ಪೂಜಾನುಷ್ಠಾನಗಳನ್ನು ಪೂರೈಸಿ ಗೀತಾ ಮಂದಿರಕ್ಕೆ ಆಗಮಿಸಿದರು. ಸಂಗೀತ ಬಾಲಚಂದ್ರ ಅವರ ದಾಸವಾಣಿ ಗಾಯನವನ್ನು ಆಲಿಸಿದ ಶ್ರೀಪಾದರು, ವಿಶ್ವದಾಖಲೆಯ ಅಂತಿಮ ಕೀರ್ತನೆಯಾದ ‘ಕೃಷ್ಣ ಏನ ಬಾರದೆ’ ಪದವನ್ನೂ ಆಲಿಸಿ ಕಲಾವಿದೆಯನ್ನು ಪ್ರೋತ್ಸಾಹಿಸಿದರು.

ನಂತರ ನಡೆದ ಸರಳ ಸಮಾರಂಭದಲ್ಲಿ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪರಮಪೂಜ್ಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸೂಚಿಸಿದ ‘ಗೀತಾ ಗಂಗೋತ್ರಿ’ಎಂಬ ವಿಶೇಷ ಬಿರುದನ್ನು ವಿದುಷಿ ಸಂಗೀತ ಬಾಲಚಂದ್ರ ಅವರಿಗೆ ಪ್ರದಾನ ಮಾಡಿ ಗೌರವಿಸಿದರು.ಆಶೀರ್ವಚನ ನೀಡಿದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ‘ಗೀತಾ ಗಂಗೋತ್ರಿ’ ಎಂಬ ಬಿರುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.

ಗೀತಾ, ಗಂಗೆ, ಗೋವಿಂದ ಮತ್ತು ಗೋವು ಇವುಗಳ ಪವಿತ್ರ ಸ್ಮರಣೆ ಈ ಬಿರುದಿನಲ್ಲಿ ಅಡಕವಾಗಿದೆ. ಗಂಗೋತ್ರಿಯಿಂದ ಗಂಗೆಯು ನಿರಂತರವಾಗಿ ಪ್ರವಹಿಸುವಂತೆ ಸಂಗೀತ ಬಾಲಚಂದ್ರ ಅವರ ಕಂಠದಿಂದ ದಾಸಸಾಹಿತ್ಯ ಮತ್ತು ಭಕ್ತಿಸಂಗೀತದ ಗಂಗೆ ನಿರಂತರವಾಗಿ ಹರಿದು, ಜನರಲ್ಲಿ ಭಕ್ತಿ ಮತ್ತು ಭಾವವನ್ನು ಜಾಗೃತಗೊಳಿಸಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ವಿದುಷಿ ಸಂಗೀತ ಬಾಲಚಂದ್ರ ಅವರನ್ನು ಶಾಲು ಹೊದಿಸಿ, ಕಿರೀಟ ಹಾಗೂ ಹಾರ ಹಾಕಿ ವಿಶೇಷವಾಗಿ ಅಭಿನಂದಿಸಲಾಯಿತು.

ಮಾತಾ-ಪಿತೃಗಳಾದ ಶ್ರೀಮತಿ ಗೀತಾ ಅವರಪುರಾಣಿಕ ಹಾಗೂ ಶ್ರೀ ವೇದವ್ಯಾಸ ಪುರಾಣಿಕ ಅವರನ್ನೂ ಶ್ರೀಪಾದರು ಗೌರವಿಸಿ ಆಶೀರ್ವದಿಸಿದರು. 25 ಗಂಟೆಗಳ ನಿರಂತರ ಗಾಯನಕ್ಕೆ ಸಹಕಾರ ನೀಡಿದ ಪಕ್ಕವಾದ್ಯ ಕಲಾವಿದರನ್ನೂ ಶಾಲು ಹೊದಿಸಿ ಗೌರವಿಸಲಾಯಿತು.ವಿದುಷಿ ಸಂಗೀತ ಬಾಲಚಂದ್ರ ಅವರ ಸಾಧನೆಗೆ ಕೀಬೋರ್ಡ್ನಲ್ಲಿ ಗುರುರಾಜ್, ಮೊಗಿ ಗುರುರಾಜ್ ಹಾಗೂ ರಜ್ಯಾ ಕರಿವೆಲ್ಲೂರ್, ರಿದಮ್ ಪ್ಯಾಡ್ನಲ್ಲಿ ಪ್ರಭಾಕರ ಅಮ್ಮಿಂಗೋಡ್ ಹಾಗೂ ವಾಮನ ಕೆ., ತಬಲಾದಲ್ಲಿ ದೀಕ್ಷಿತ್ ಕೊಡಂಚಾ ಹಾಗೂ ದೀಪಕ್ ರಾಜ್ ಉಲ್ಲಾಸು, ಕೊಳಲು ವಾದನದಲ್ಲಿ ಸಂತೋಷ್ ವಿಟ್ಟಲ್ ಅವರು ಸಹಕಾರ ನೀಡಿದರು.ಹಾಗೂ ಈ ಸಂದರ್ಭದಲ್ಲಿ ಶ್ರೀಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನ ಆಚಾರ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಶ್ರೀಮತಿ ವಿಜಯಾ ನಾಗರಾಜ ಆಚಾರ್ಯ ಶ್ರೀಮತಿ ಲಕ್ಷ್ಮೀ ಪ್ರಸನ್ನ ಆಚಾರ್ಯ ಅವರು ವಿದುಷಿಯನ್ನು గౌరవిసి ಅಭಿನಂದಿಸಿದರು. ಪೂಜ್ಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರನ್ನು ಶ್ರೀ ನಾಗರಾಜ ಆಚಾರ್ಯ ಮತ್ತು ಶ್ರೀ ಪ್ರಸನ್ನ ಆಚಾರ್ಯ ಅವರು ವೇದಿಕೆಗೆ ಬರಮಾಡಿಕೊಂಡರು.ಭೀಮಾ ಪ್ರಾಯೋಜಕತ್ವದಲ್ಲಿ ಈ ನಡೆದ ಸಂಗೀತ ಐತಿಹಾಸಿಕ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಸಂಗೀತಾಭಿಮಾನಿಗಳು, ಶ್ರೀಕೃಷ್ಣ ಭಕ್ತರು ಹಾಗೂ ಸಾರ್ವಜನಿಕರು ಸಾಕ್ಷಿಯಾದರು.

Related posts

ಧವಳತ್ರಯ ಜೈನ ಕಾಶಿ – ಪುಸ್ತಕ ವಿತರಣೆ NEWSಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜ್‌ನ ವಿದ್ಯಾಥಿಗಳಿಗೆ ಪುಸ್ತಕಗಳ ವಿತರಣೆಶಿಕ್ಷಣದ ಮಹತ್ವ ಅರಿತು ಬದುಕು ರೂಪಿಸಿರಿ : ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ:

voiceoftulunadu

ನೆತ್ತರಕೆರೆ: ಎಡುವೆಂಚರ್ ಪಿಯು ಕಾಲೇಜಿನಲ್ಲಿ “ಪ್ರತಿಭಾಮೃತ” ಪ್ರತಿಭೆಗಳ ಅನಾವರಣ ಕಾರ್ಯಕ್ರಮ

Voiceoftulunadu

ಹಿರಿಯಡಕ: ಸಂಜೀವಿನಿ ಒಕ್ಕೂಟದಲ್ಲಿ ₹23 ಲಕ್ಷ ವಂಚನೆ: ದಂಪತಿ ಬಂಧನ;

Voiceoftulunadu

Leave a Comment