September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭಅಕಾಡೆಮಿ ಸಾಹಿತ್ಯಕ್ಕೆ ಮೀಸಲಾಗಬೇಡಿ, ಸಂಸ್ಕೃತಿ, ಸಂಸ್ಕಾರ ಪಸರಿಸಿ: ಶಾಸಕ ಉಮಾನಾಥ ಕೋಟ್ಯಾನ್

ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭಅಕಾಡೆಮಿ ಸಾಹಿತ್ಯಕ್ಕೆ ಮೀಸಲಾಗಬೇಡಿ, ಸಂಸ್ಕೃತಿ, ಸಂಸ್ಕಾರ ಪಸರಿಸಿ: ಶಾಸಕ ಉಮಾನಾಥ ಕೋಟ್ಯಾನ್ಮೂಲ್ಕಿ

ಮೂಲ್ಕಿ: ಪ್ರಶಸ್ತಿಗೆ ವ್ಯಕ್ತಿ ಮುಖ್ಯವಲ್ಲ,ವ್ಯಕ್ತಿತ್ವ ಪ್ರಾಮುಖ್ಯ. ಅಕಾಡೆಮಿಗಳು ಸಾಹಿತ್ಯಕ್ಕೆ ಸೀಮಿತವಾಗದೇ ತುಳುನಾಡಿನ ಸಂಸ್ಕಾರ, ಸಂಸ್ಕೃತಿಯನ್ನು ಪಸರಿಸಬೇಕು. ಸಮಾಜದಲ್ಲಿ ಸಾಹಿತ್ಯದ ಜೊತೆ ಜೊತೆಗೆ ಸಮಾಜ ಸ್ಪಂದನೆಯೂ ಮುಖ್ಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಉಡುಪರ ಅವರು ಕಿನ್ನಿಗೋಳಿ ಯುಗಪುರುಷದ ಸಂಸ್ಥಾಪಕ ಕೊಡತ್ತೂರು ಅನಂತಪದ್ಮನಾಭ ಸಂಸ್ಕರಣ ಸಮಾರಂಭದಲ್ಲಿ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ವೇದವಿದ್ವಾಂಸರ ಸನ್ಮಾನ, ಕೃತಿ ಬಿಡುಗಡೆ, ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಟೀಲು ದೇವಳದ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಅಸ್ರಣ್ಣ ಶುಭಹಾರೈಸಿದರು.ದ.ಕ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರರವರು ಸಂಸ್ಮರಣ ಭಾಷಣಮಾಡಿದರು.ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ. ಪಿ. ವಿ. ಪ್ರದೀಪ್ಯುಮಾರ್ ಕಥಾಬಿಂದು ರಚಿತ ಅದಿತಿ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.

ಪತ್ರಕರ್ತ, ಸಾಹಿತಿ ಚಿದಂಬರ ಬೈಕಂಪಾಡಿ ಅವರಿಗೆ ಹತ್ತು ಸಾವಿರ ನಗದು ಸಹಿತ ಕೊ. ಅ. ಉಡುಪ ಪ್ರಶಸ್ತಿ ಹಾಗೂ ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ರಾಮದಾಸ ಆಚಾರ್ಯ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಯಿತು.

ಕಾವೇರಿ, ಡೆನ್ಸಿಕಾ ಪಿರೇರಾ, ಆಯುಷ್, ಚೇತನ್ ವೈ ಶೆಟ್ಟಿಗಾರ್, ಯಜ್ಞ, ಕಿರಣ್ ದೇವಾಡಿಗ, ಲಕ್ಷ್ಮೀ ಉಡುಪ, ಅಂಜಲಿ, ಮನ್ವಿತಾ, ಸಿಂಚನಾ ಆಚಾರ್ಯ, ಸುಪ್ರಿತಾ, ಶ್ರಿಯಾ ಪೂಜಾರಿ, ಖುಷಿ, ತ್ರಿಶಾ ಪೂಜಾರಿ, ಕಿರಣ್ ಅವರಿಗೆ ವಿದ್ಯಾ ನಿಧಿಯನ್ನು ವಿತರಿಸಲಾಯಿತು.ಅನ್ಯ ಆಚಾರ್ಯ ಹಾಗೂ ಸ್ವಾತಿ ಎಸ್. ಶೆಟ್ಟಿ ಅವರನ್ನು ಗೌರವಿಸಲಾಯಿತು.

ಮುಂಬಯಿ ಉದ್ಯಮಿ ತಾಳಿಪಾಡಿ ರಾಮಚಂದ್ರ ಶೆಟ್ಟಿ, ಪೃಥ್ವಿರಾಜ್ ಕಿನ್ನಿಗೋಳಿ ಪಟ್ಟಣ ಆಚಾರ್ಯ, ಪಂಚಾಯತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಹರಿಶ್ಚಂದ್ರ ಸಾಲ್ಯಾನ್, ಜಯರಾಂ ಉಡುಪ, ಕೃತಿಕಾರ ಪಿ.ವಿ. ಪ್ರದೀಪ್ಪುಮಾ‌ರ್, ಡಾ. ನಯನಾಭಿರಾಮ ಉಡುಪ ಇದ್ದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ ಕಲಾವಿದರಿಂದ ಶ್ರೀ ಹರಿ ಲೀಲಾರ್ವಣ ಯಕ್ಷಗಾನ ಪ್ರಸಂಗ ನಡೆಯಿತು.ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ಅನುಷಾ ಕರ್ಕೇರ, ಗುರುರಾಜ್ ಭಟ್, ಶರತ್ ಶೆಟ್ಟಿ ನಿರೂಪಿಸಿದರು.

Related posts

ಗ್ಯಾನ್ ಜಿ ಪಾಲನ್ ಕೊಡವೂರುರವರಿಗೆ “ಇಸ್ಕಾನ್ ವ್ಯಾಲ್ಯೂ ಎಜುಕೇಶನ್” ಪುರಸ್ಕಾರ: ಪ್ರಶಸ್ತಿ ಪತ್ರ ವಿತರಿಸಿದ ಮಂಗಲಯಾನದ ರೂವಾರಿ ಡಾ. ಸೋಮನಾಥ್;

Voiceoftulunadu

ವಲ್ಸಾಡ್–ವೇಲಂಕಣಿ ನಡುವೆ ವಿಶೇಷ ರೈಲು ಸಂಚಾರ ಆರಂಭ;

Voiceoftulunadu

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಸಿಡ್ನಿ ಘಟಕದ ಅಧ್ಯಕ್ಷರಾಗಿ ಸುರೇಶ್ ಪೂಂಜ ನೇಮಕ ;

Voiceoftulunadu

Leave a Comment