September 5, 2026
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿಸ್ಥಳೀಯ/ಪ್ರಾದೇಶಿಕ ಸುದ್ದಿ

ಕುಂತಳನಗರ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ :ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಅ. 9 ರಂದು ಎಂಆರ್ ಜಿ ಸಂಸ್ಥೆಯ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳ;

ವರದಿ/ ಚಿತ್ರ: ಈ ಮೀಡಿಯಾ

ಉಡುಪಿ, ಕುಂತಳನಗರ :ಬಂಟರ ಸಂಘದ ಸಭಾಭವನ ನಿರ್ಮಾಣ ಮತ್ತು ಅಭಿವೃದ್ಧಿ ಸಮಿತಿಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗ್ರಾಮೀಣ “ಉದ್ಯಮಶೀಲತೆಯ ಮೂಲಕ ಗ್ರಾಮೀಣಾಭಿವೃದ್ಧಿ”ಎಂಬ ಧೈಯದೊಂದಿಗೆ ನಡೆಸಲಾಗುತ್ತಿರುವ ಉದ್ಯೋಗ ಆಧಾರಿತ ಕಾರ್ಯಕ್ರಮದಡಿ, ಒಂದು ತಿಂಗಳ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ ತಂಡ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭವು ಕೌಶಲ್ಯ ಅಭಿವೃದ್ಧಿ ಕೇಂದ್ರ ಕುಂತಲನಗರ “ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಸನ್ ಸೆಂಟರ್”ಮೊದಲ ಮಹಡಿಯಲ್ಲಿ 21 ಶನಿವಾರ ಸಂಜೆ ನೆರವೇರಿತು.

ಕಾರ್ಯಕ್ರಮವನ್ನು ಎನ್ಎಂಎಎಂ ತಂತ್ರಜ್ಞಾನ ಸಂಸ್ಥೆ, ನಿಟ್ಟೆಯ ಸಮಾಲೋಚನೆ, ಕಲ್ಯಾಣ, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಭರತ್ ಜಿ. ಕುಮಾರ್ ಉದ್ಘಾಟಿಸಿದರು.ಅವರು ಈ ಸಂದರ್ಭ ಮಾತನಾಡಿ, ವಿದ್ಯಾರ್ಥಿಗಳು ಒಂದಿಷ್ಟು ಸ್ಕಿಲ್ ಕಲಿತರೆ ಸಾಲದು. ಹೆಚ್ಚಿನದನ್ನು ಯಾರು ಸಾಧಿಸುತ್ತಾನೆಯೋ ಆತನೇ ಮುಂದುವರಿಯುತ್ತಾನೆ. ವಿದ್ಯಾರ್ಥಿಗಳು ಇನ್ನಷ್ಟು ಸಾದನೆ ಮಾಡಿದರೆ, ಯಶಸ್ಸು ತನ್ನಿಂದ ತಾನೆ ನಮ್ಮ ಕಾಲಬುಡಕ್ಕೆ ಬರುತ್ತದೆ ಎಂದು ಕಿವಿಮಾತು ಹೇಳಿದರು.

ಒಂದು ಸಂಸ್ಥೆ ಉಚಿತವಾಗಿ 21 ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ ಸಾಮಾನ್ಯ ವಿಷಯವಲ್ಲ. ಮುಂದೆಯೂ ಈ ಸಂಸ್ಥೆಯಿಂದ ನೂರಾರು ಸಾಕ್ಷರತಾ ಶಿಬಿರ ನಡೆಯಲಿ ಎಂದು ಶುಭ ಹಾರೈಸಿದರು. ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭರತ್ ಜಿ. ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅ. 9 ರಂದು ಎಂಆರ್ ಜಿ ಸಂಸ್ಥೆಯ ಸಹಯೋಗದಲ್ಲಿ ಪ್ರಕಾಶ್ ಶೆಟ್ಟಿ ಕನ್ವೆನ್ನನ್ ಸೆಂಟರ್ ನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಘೋಷಣೆ ಮಾಡಿದರು.ಅತಿಥಿಗಳು ತರಬೇತಿ ಪೂರ್ಣಗೊಳಿಸಿದ ಪ್ರಮಾಣಪತ್ರಗಳನ್ನು ವಿತರಿಸಿದರು.

ಈ ಸಂದರ್ಭ ಉಡುಪಿ ಬಂಟರ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷರಾದ ಡಾ. ಎಚ್.ಬಿ. ಶೆಟ್ಟಿ, ಸಂಘದ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಖಜಾಂಚಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ವಿಜಿತ್ ಶೆಟ್ಟಿ, ಟ್ರಸ್ಟಿಗಳಾದ ಪದ್ಮನಾಭ ಹೆಗ್ಡೆ ಹಾಗೂ ಶ್ರೀಮತಿ ರಂಜಿನಿ ಹೆಗ್ಡೆ ಮೈಸ್, ಉಡುಪಿ ಇದರ ಪ್ರಭಾರ ಪ್ರಾಂಶುಪಾಲ ರವಿ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಎ. ಶ್ರೀಧರ ಶೆಟ್ಟಿ, ಹೇಮಂತ್ ಶೆಟ್ಟಿ, ಟ್ರಸ್ಟಿ ಜಗದೀಶ್ ಹೆಗ್ಡೆ, ರಮೇಶ್ ಶೆಟ್ಟಿ ನಿಂಜೂರು, ದಯಾನಂದ ಶೆಟ್ಟಿ, ಹರೀಂದ್ರ ಹೆಗ್ಡೆ, ಭಾರತೀಯ ವಿಕಾಸ ಟ್ರಸ್ಟ್ ನ ಸಂತೋಷ್ ಶೆಟ್ಟಿ, ಮೋಹನ ಶೆಟ್ಟಿ ದೆಂದೂರುಕಟ್ಟೆ, ವಿಷ್ಣುಮೂರ್ತಿ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್‌ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಜಸ್ಟಿಸ್ ಕೆ. ಎಸ್. ಹೆಗ್ಡೆ ನಿಟ್ಟೆ ಮ್ಯಾನೇಜೆಂಟ್ ಸಂಸ್ಥೆಯ ಪ್ರಾಧ್ಯಾಪಕ ಡಾ. ಸುಧೀರ್ ರಾಜ್ ನಿರೂಪಿಸಿದರು. ವಿಜಿತ್‌ ಶೆಟ್ಟಿ ವಂದಿಸಿದರು.

Related posts

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಹಣದ ದುರ್ಬಳಕೆ: ಕಾಪುವಿನಲ್ಲಿ ಕಾಂಗ್ರೆಸ್ ಜಾಥಾ, ಪ್ರತಿಭಟನಾ ಸಭೆಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆ;

Voiceoftulunadu

ಮಹಿಳಾ ಸಮಾಜ ಮಣಿಪಾಲದಿಂದ ಸಂಸ್ಥಾಪಕರ ದಿನಾಚರಣೆ: ಶ್ರೀಮತಿ ಶಾರದಾ ಎಂ. ಪೈ ಹಾಗೂ ಡಾ. ಎ. ಪದ್ಮರಾವ್ ಅವರ ಸ್ಮರಣಾರ್ಥ ಸಂಸ್ಥಾಪಕರ ದಿನಾಚರಣೆ ;

Voiceoftulunadu

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಎಂಎಲ್ಸಿ ಭಂಡಾರಿ ಆಗ್ರಹ : ಉಡುಪಿ ಬಿಜೆಪಿ ಆಯೋಜಿಸಿದ್ದ ಸಭೆಯಲ್ಲಿ ಯಶ್ವಾಲ್ ಸುವರ್ಣರಿಂದ ಭಾಷಣದ ಹಿನ್ನೆಲೆ;

Voiceoftulunadu

Leave a Comment