September 5, 2026
Uncategorizedರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ಕೊಂಕಣ ರೈಲ್ವೆಗೆ ರೂ. 199.63 ಕೋಟಿ ನಿವ್ವಳ ಲಾಭ ;

ವರದಿ/ ಚಿತ್ರ :ದಿತೇಶ್ ಮಂಗಳೂರು

ಮಂಗಳೂರು: ಕೊಂಕಣ ರೈಲ್ವೆ ನಿಗಮವು 80ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಕಳೆದ ಒಂದು ವರ್ಷದ ಸಾಧನೆಗಳನ್ನು ಪ್ರಕಟಿಸಿದ್ದು, 2025-26ನೇ ಸಾಲಿನಲ್ಲಿ ರೂ.199.63 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಹಣಕಾಸು ನಿರ್ವಹಣೆ ಮತ್ತು ಸಂಪ ನ್ಮೂಲಗಳ ಸಮರ್ಪಕ ಬಳಕೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ನಿಗಮ ತಿಳಿಸಿದೆ.

ನವಿಮುಂಬೈನ ನೆರುಲ್‌ ಕೊಂಕಣ ರೈಲ್ ವಿಹಾರ್‌ನಲ್ಲಿ ನಡೆದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಕೊಂಕಣ ರೈಲ್ವೆ ಅಧ್ಯಕ್ಷ ಹಾಗೂ ವ್ಯವ ಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಧ್ವಜಾರೋಹಣ ನೆರವೇರಿಸಿ, ಆರ್‌ಪಿಎಫ್ ತುಕಡಿ ಯಿಂದ ಗೌರವ ವಂದನೆ ಸ್ವೀಕರಿಸಿ ದರು. ಬಳಿಕ ಮಾತನಾಡಿದ ಅವರು, ಸುರಕ್ಷತೆ, ಪ್ರಯಾಣಿಕರ ಸೌಲಭ್ಯ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸೇವಾ ಗುಣಮಟ್ಟಕ್ಕೆ ನಿಗಮ ನೀಡು ತಿರುವ ಆದ್ಯತೆಯನ್ನು ವಿವರಿಸಿದರು.

ಪ್ರಸ್ತುತ ಸುಮಾರು ರೂ.23,504 ಕೋಟಿ ಮೊ ಮೊತ್ತದ ವಿವಿಧ ಯೋಜ ನೆಗಳು ಅನುಷ್ಠಾನದಲ್ಲಿದ್ದು, ಇನ್ನೂ ಸುಮಾರು ರೂ.23,000 ಕೋಟಿ ಮೊತ್ತದ ಯೋಜನೆಗಳು ವಿವಿಧ ಹಂತ ಗಳಲ್ಲಿವೆ. ಪ್ರಯಾಣಿಕರ ಸೌಲಭ್ಯಗಳ ಅಭಿವೃದ್ಧಿಗೆ 2026-27ನೇ ಸಾಲಿನಲ್ಲಿ ರೂ.20.53 ಕೋಟಿ ಮೀಸಲಿಡಲಾ ಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ರೂ.105 ಕೋಟಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಮಂಡೋವಿ ಎಕ್ಸ್ ಪ್ರೆಸ್ ಮತ್ತು ಕೊಂಕಣ ಕನ್ಯಾ ಎಕ್ಸ್‌ಪ್ರೆ ಸ್‌ಗೆ ಹೆಚ್ಚುವರಿ 3E ಬೋಗಿ ಹಾಗೂ ಬಾಂದ್ರಾ-ಮಡಗಾಂವ್ ಮತ್ತು ಮಡಗಾಂವ್-ಎರ್ನಾಕುಲಂ ಎಕ್ಸ್ಪ್ರೆಸ್ ಗಳಿಗೆ ಹೆಚ್ಚುವರಿ 3AC ಬೋಗಿಗಳನ್ನು ಅಳವಡಿಸಲಾಗಿದೆ.

ಕಾಚಿಗುಡ-ಮುರ್ಡೇಶ್ವರ ಎಕ್ಸ್ ಪ್ರೆಸ್‌ನ್ನು ಕುಮಟಾವರೆಗೆ ವಿಸ್ತರಿಸಲಾ ಗಿದ್ದು, ಕರಾವಳಿ ಭಾಗದ ಪ್ರಯಾ ಣಿಕರಿಗೆ ಸಂಪರ್ಕ ಸುಧಾರಿಸಿದೆ. ಜನವ ರಿಯಿಂದ ಜುಲೈ 2026ರವರೆಗೆ ಕೊಂಕಣ ರೈಲ್ವೆಯಲ್ಲಿ 10,313 ಕೋಚಿಂಗ್ ರೈಲುಗಳು, 245 ಬೇಸಿಗೆ ವಿಶೇಷ ರೈಲುಗಳು, 3,785 ಸರಕು ರೈಲುಗಳು ಹಾಗೂ 37 ಟ್ರಾಫಿಕ್ ವಿಶೇಷ ರೈಲುಗಳು ಸಂಚರಿಸಿವೆ. ಹಿಂದಿನ ವರ್ಷದ ಇದೇ ಅವಧಿಗೆಹೋಲಿಸಿದರೆ ಒಟ್ಟಾರೆ ರೈಲು ಕಾರ್ಯಾಚರಣೆ ಶೇ.8ರಷ್ಟು ಹೆಚ್ಚಾಗಿದೆ.

ಪ್ರಯಾಣಿಕರ ಸುರಕ್ಷತೆಗೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 10 ನಿಲ್ದಾ ಣಗಳು ಹಾಗೂ ಒಂದು ಹಾಲ್‌ನಲ್ಲಿ 196 ಸಿಸಿಟಿವಿ ಕ್ಯಾಮೆರಾಗಳನ್ನು ಅಳ ವಡಿಸಲಾಗಿದೆ.ಉಡುಪಿ ಮತ್ತು ಥಿವಿಮ್‌ನಲ್ಲಿ ಕೋಚ್ ಗೈಡೆನ್ಸ್ ವ್ಯವಸ್ಥೆ ಹಾಗೂ ಆರು ನಿಲ್ದಾಣಗಳಲ್ಲಿ ರೈಲು ಮಾಹಿತಿ ಪ್ರದ ರ್ಶನ ಫಲಕಗಳನ್ನು ಸ್ಥಾಪಿಸಲಾಗಿದೆ. ಅಪಘಾತ ಪರಿಹಾರ ವೈದ್ಯಕೀಯ ವಾಹನಗಳಿಗೆ ಡೋನ್ ಕ್ಯಾಮೆರಾ ಗಳನ್ನು ಒದಗಿಸಲಾಗಿದೆ.’

ಆಪರೇಷನ್ ಅಮಾನತ್’ ಅಡಿಯಲ್ಲಿ ರೂ.90.55 ಲಕ್ಷ ಮೌಲ್ಯದ 206 ವಸ್ತುಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ‘ಆಪರೇಷನ್ ನನ್ನೆ ಫರಿತ್ತೆ’ ಮೂಲಕ 56 ಅಪ್ರಾಪ್ತ ಮಕ್ಕಳನ್ನು ರಕ್ಷಿಸಿ ಚೈಲ್ಡ್‌ಲೈನ್‌ಗೆ ಒಪ್ಪಿಸಲಾಗಿದೆ.ಅಡಿಯಲ್ಲಿ ಅಕ್ರಮ ಮದ್ಯದ 3,813 ಬಾಟಲಿಗಳನ್ನು ವಶಪ ಡಿಸಿಕೊಂಡು 24 ಮಂದಿ ಕಳ್ಳಸಾಗ ಣೆದಾರರನ್ನು ಬಂಧಿಸಲಾಗಿದೆ.

ಇದೇ ಅವಧಿಯಲ್ಲಿ 11 ಕಿ.ಮೀ. ಸಿಟಿಆರ್ ಮತ್ತು 21 ಕಿ.ಮೀ. ಸಿಆರ್ ಆರ್ ಕಾಮಗಾರಿ ಪೂರ್ಣಗೊಂಡಿದ್ದು, ರೈಲು ಹಳಿಯ ವೆಲ್ಡ್ ವೈಫಲ್ಯಗಳು ಶೇ.46ರಷ್ಟು ಕಡಿಮೆಯಾಗಿವೆ. 21 ಫುಟ್‌ ಓವರ್‌ ಬ್ರಿಡ್ಜ್ಗಳ ರಚನಾತ್ಮಕ ಸುರಕ್ಷತಾ ಪರಿಶೀಲನೆ ಹಾಗೂ ಅಗತ್ಯ ದುರಸ್ತಿ ಕಾರ್ಯವೂ ಪೂರ್ಣಗೊಂ ಡಿದೆ. ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಕೊಂಕಣ ರೈಲ್ವೆಯ ರತ್ನಗಿರಿ ಹಾಗೂ ಕಾರವಾರ ವಿಭಾಗಗಳಲ್ಲಿ ಧ್ವಜಾ ರೋಹಣ ಕಾರ್ಯಕ್ರಮ ನಡೆಯಿತು.

Related posts

ಶಿರ್ಲಾಲು: ಭಾರತೀಯ ಜೈನ್ ಮಿಲನ್ ವತಿಯಿಂದ ಆಹಾರೋತ್ಸವ ಹಾಗೂ ವಿದ್ಯಾರ್ಥಿ ವೇತನ ವಿತರಣೆ ;

Voiceoftulunadu

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ಚಲನಚಿತ್ರ ನಟ ಯಶ್ ಭೇಟಿ: ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಆಶೀರ್ವಾದ ಪಡೆದ ಯಶ್;

Voiceoftulunadu

ಫಿಫಾ ವಿಶ್ವಕಪ್: ಅಂದು ಮೆಸ್ಸಿ ಸ್ನಾನ ಮಾಡಿಸಿದ್ದ ಮಗು ಇಂದು ಫೈನಲ್ನಲ್ಲಿ ಎದುರಾಳಿ!!

Voiceoftulunadu

Leave a Comment