November 5, 2026
Uncategorizedಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಜಗದ್ಗುರು ಶ್ರೀ ಮಧ್ವಾಚಾರ್ಯ ವೃತ್ತ, ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಮಾರ್ಗ ಉದ್ಘಾಟನೆ : ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ, 39 ನೇ ಚಾತುರ್ಮಾಸ್ಯದಲ್ಲಿ ಮಹತ್ವದ ಕೊಡುಗೆ ;

ವರದಿ/ ಚಿತ್ರ: ಈ ಮೀಡಿಯಾ

ನವದೆಹಲಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು39 ನೇ ಚಾತುರ್ಮಾಸ್ಯವನ್ನು ನವದೆಹಲಿಯಲ್ಲಿ ಕೈಗೊಂಡಿದ್ದು, ಮಹತ್ವದ ಕೊಡುಗೆ ಎಂಬಂತೆ ದೆಹಲಿ ಮಹಾನಗರ ಪಾಲಿಕೆ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ವಸಂತ್ ಕುಂಜ್ ಪ್ರದೇಶದ ಬೃಹತ್ ಸರ್ಕಲ್ ಒಂದಕ್ಕೆ ಜಗದ್ಗುರು ಶ್ರೀ ಮಧ್ವಾಚಾರ್ಯ ವೃತ್ತ ಮತ್ತು ಆ ವೃತ್ತದಿಂದ ಸುಮಾರು ಎರಡು ಕಿ ಮೀ ಮುಖ್ಯ ರಸ್ತೆಗೆ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಮಾರ್ಗ ಎಂದು ನಾಮಕರಣಗೊಳಿಸಿ ಗೌರವಿಸಿದೆ.

ಗುರುವಾರದಂದು ಸಂಜೆ ಪೇಜಾವರ ಸ್ವಾಮೀಜಿಯವರು ಈ ಎರಡನ್ನೂ ಉದ್ಘಾಟಿಸಿದರು.ದೆಹಲಿ ಮೇಯ‌ರ್ ಪರ್ವೇಶ್ ವಾಹಿ, ಸ್ಥಳೀಯ ಶಾಸಕ ಕೈಲಾಶ್ ಗೆಹೋಟ್, ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜ್ ಬಬ್ಬರ್, ಸದಸ್ಯ ಇಂದ್ರಜಿತ್ ಸೆರಾವತ್, ವಾಸುದೇವ ಭಟ್ ಪೆರಂಪಳ್ಳಿ, ಡಾ ವಿಠೋಬಾಚಾರ್ಯ, ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾ‌ರ್ ಉಪಸ್ಥಿತರಿದ್ದರು.

Related posts

ಮೂಡುಬಿದಿರೆಯಲ್ಲಿ 2027 ಜನವರಿ 6 ರಿಂದ 10ರವರಿಗೆ ಐದು ದಿನಗಳ ಕಾಲ ಆಳ್ವಾಸ್ ವಿರಾಸತ್ ನುಡಿಸಿರಿ ;

Voiceoftulunadu

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಧಾರ್ಮಿಕ ವೇಷ ಧರಿಸಿ ‘ಹೈಟೆಕ್ ಭಿಕ್ಷಾಟನೆ’ : ಇಬ್ಬರ ಬಂಧನ ;

Voiceoftulunadu

ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೃಣ್ಮಯ ಮೂರ್ತಿ ವಿಸರ್ಜನೆ : ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆ, ವಿಜಯದಶಮಿಯಂದು ಜಲಸ್ತಂಭನ ;

Voiceoftulunadu

Leave a Comment