September 5, 2026
Uncategorizedಆರೋಗ್ಯಕಲೆ/ಸಾಹಿತ್ಯಕೃಷಿ/ಭೌಗೋಳಿಕಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬ ಮಹೋತ್ಸವಸೆ. 6 ರಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚಾಲನೆ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ, ಮಾಲಿನ್ಯ ರಹಿತ ಕೈಗಾರಿಕೀಕರಣ ಮತ್ತು ಪರಿಸರ ಸಂರಕ್ಷಣೆಗಾಗಿನ ಏಕ ಮಾತ್ರ ಧೈಯದೊಂದಿಗೆ ಸುಮಾರು 25 ವರ್ಷಗಳ ಹಿಂದೆ ಜನ್ಮತಾಳಿದ ಹಾಗೂ ತೋನ್ಸೆ ಜಯಕೃಷ್ಣ ಶೆಟ್ಟಿ ಅವರ ಕನಸಿನ ಕೂಸು ‘ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ’ ಒಂದು ಸ್ವಯಂ ಸೇವಾ ಸಂಸ್ಥೆ (ಎನ್ ಜಿಒ )ಯಾಗಿ ಇಂದು ದೊಡ್ಡ ಹೆಮ್ಮೆರವಾಗಿ ಬೆಳೆದು ನಿಂತಿದೆ. ನೆಲ ಜಲ ಉಳಿಸಿ, ಉದ್ದಿಮೆ ಬೆಳೆಸಿ, ಪ್ರಗತಿ ಸಾಧಿಸಿ, ಬಡತನ ನಿವಾರಿಸಿ ನಮ್ಮೂರ ಅಭಿವೃದ್ಧಿ ನಮ್ಮೆಲ್ಲರ ಸಮಗ್ರ ಸಮೃದ್ಧಿ ಎಂಬ ಧೈಯವಾಕ್ಯ ಜೊತೆಗೆ ಪರಿಸರ, ಗಾಳಿ, ನೀರು ಮತ್ತು ಭೂಮಿಯನ್ನು ಸಂರಕ್ಷಿಸಿ, ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ.

ಅಭಿವೃದ್ಧಿ ಮತ್ತು ಕೈಗಾರಿಕೆಗಳನ್ನು ಬೆಂಬಲಿಸಿ – ಉದ್ಯೋಗ ಸೃಷ್ಟಿಸಿ – ಬಡತನ ನಿರ್ಮೂಲನೆ ಮಾಡಿ. ನಮ್ಮ ಜಾತಿ ಮತ್ತು ಧರ್ಮಗಳನ್ನು ಪ್ರೀತಿಸುವುದು ನಮ್ಮ ಜವಾಬ್ದಾರಿ. ಆದರೆ ಇತರೆ ಜಾತಿ ಮತ್ತು ಧರ್ಮಗಳನ್ನು ಪ್ರೀತಿಸಿ ಗೌರವಿಸುವುದು ನಮ್ಮ ಅತ್ಯುನ್ನತ ಜವಾಬ್ದಾರಿ ಎಂಬ ಅರ್ಥಪೂರ್ಣ ಸಂದೇಶವನ್ನು ಪ್ರತಿ ಹೆಜ್ಜೆಯಲ್ಲೂ ಅನುಸರಿಸುತ್ತಾ ನಿರಂತರ ತನ್ನ ಕಾರ್ಯ ಚಟುವಟಿಕೆಗಳ ಮೂಲಕ ಇದೀಗ ತನ್ನ ಬೆಳ್ಳಿ ಹಬ್ಬ ಮಹೋತ್ಸವವನ್ನು 2026ರ ಸೆಪ್ಟೆಂಬರ್ 6 ರಂದು ಮಧ್ಯಾಹ್ನ 3.00 ಗಂಟೆಗೆ ಮಂಗಳೂರಿನ ಹಂಪನಕಟ್ಟೆಯ ಕುದ್ಮುಲ್ ರಂಗರಾವ್ ಟೌನ್ ಹಾಲ್ನಲ್ಲಿ ಹಮ್ಮಿಕೊಂಡಿದೆ .

ಐತಿಹಾಸಿಕ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸಮಿತಿಯ ಅಧ್ಯಕ್ಷರಾದ ತೋನ್ಸೆ ಶ್ರೀ ನಿತ್ಯಾನಂದ ಡಿ. ಕೋಟ್ಯಾನ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಎನ್.ಆರ್.ಐ ಗಣ್ಯರಾದ ಡಾ. ರೊನಾಲ್ಸ್ ಕೊಲಾಸೊ ಅವರು ಆಶಯ ಭಾಷಣ ಮಾಡಲಿದ್ದಾರೆ.ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಅವರು ಸಮಿತಿಯ ಯೋಜನೆಗಳ ದೃಷ್ಟಿಕೋನ ಕುರಿತು ಸವಿವರವಾಗಿ ಮಾತನಾಡಲಿರುವರು.

ಕಾರ್ಯಕ್ರಮದಲ್ಲಿ ಕರಾವಳಿ ಕರ್ನಾಟಕ ಉಸ್ತುವಾರಿ ಸಚಿವ ಯು. ಟಿ. ಖಾದರ್, ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ. ಜೆ. ಜಾರ್ಜ್, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಕರಾವಳಿ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಾಧ್ಯಕ್ಷ ಎಂ. ಎ. ಗಫೂರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ ಇದರ ಅಧ್ಯಕ್ಷರಾದ ಡಾ. ಮೋಹನ್ ಆಳ್ವ, ಎಂಆರ್ ಜಿ ಗ್ರೂಪ್ ಆಡಳಿತ ನಿರ್ದೇಶಕ ಡಾ ಕೆ. ಪ್ರಕಾಶ್ ಶೆಟ್ಟಿ, ಅಲ್ ಮುರೈಫ್ ಸಂಸ್ಥಾಪಕ ಜಕರಿಯಾ ಜೋಕಟ್ಟೆ, ಬಂಟರ ಸಂಘಮುಂಬೈ ಇದರ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ (ಉದ್ಯಮಿ, ದುಬೈ) ಹಾಗೂ ಸಮಿತಿಯ ಗೌರವಾಧ್ಯಕ್ಷರಾದ ಪದ್ಮವಿಭೂಷಣ ಡಾ. ಬಿ. ಎಂ. ಹೆಗ್ಡೆಉಪಸ್ಥಿತರಿರಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ : ಬೆಳ್ಳಿ ಸಮಾರಂಭದ ಅಂಗವಾಗಿ ಮಧ್ಯಾಹ್ನ 3.00ರಿಂದ 4.00 ಗಂಟೆಯವರೆಗೆ ಪುತ್ತೂರಿನ ನಾಟ್ಯರಂಗ ತಂಡದಿಂದ ವಿದೂಷಿ ಮಂಜುಳಾ ಸುಬ್ರಹ್ಮಣ್ಯ ಅವರ ನಿರ್ದೇಶನದಲ್ಲಿ “ನಾಟ್ಯಲಹರಿ” ನೃತ್ಯ ರೂಪಕ ಪ್ರದರ್ಶನಗೊಳ್ಳಲಿದ್ದು, ಸಂಜೆ 7.30ಕ್ಕೆ ಸಾರ್ವಜನಿಕ ಪ್ರೀತಿಭೋಜನ ಏರ್ಪಡಿಸಲಾಗಿದೆ.25 ವರ್ಷಗಳ ಸಾಧನೆಗಳ ಗುರುತು :ಉಡುಪಿ ಶ್ರೀ ಕೃಷ್ಣ ದೇವಾಲಯದ ಪೇಜಾವರ ಮಠದ ಪದ್ಮವಿಭೂಷಣ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು 2000ದ ದಿ.30 ರಂದು ಪರ್ಯಾಯ ಸ್ವಾಮೀಜಿಯಾಗಿ ಮಧ್ವಾಚಾರ್ಯ ಪೀಠದಲ್ಲಿ ಆಸೀನರಾಗಿದ್ದ ಸಂದರ್ಭದಲ್ಲಿ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ನಾಮಕರಣ ಮಾಡಿದರು.

ದಿವಂಗತ ಜಾರ್ಜ್ ಫರ್ನಾಂಡಿಸ್ ಅವರು, 2000ನೇ ಇಸವಿಯಿಂದ ಸಮಿತಿಯ ಎಲ್ಲಾ ಚಟುವಟಿಕೆಗಳು ಮತ್ತು ಸಾಧನೆಗಳಿಗೆ ಬೆನ್ನೆಲುಬಾಗಿ ಬೆಂಬಲವನ್ನು ನೀಡಿದರು. ರಾಜ್ಯಸಭಾ ಸದಸ್ಯರು ಹಾಗೂ ಧರ್ಮಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ಸಮಿತಿಯ ಸ್ಥಾಪನೆಯ ದಿನದಿಂದ ಇಂದಿನವರೆಗೂ ಸದಾ ಸಮಿತಿಯ ಹಿತೈಷಿಯಾಗಿ, ಮಾರ್ಗದರ್ಶಕರಾಗಿ ಹಾಗೂ ಶುಭಚಿಂತಕರಾಗಿ ಇದ್ದಾರೆ.

ಅವರ ಅಮೂಲ್ಯವಾದ ಹಾಗೂ ಬದ್ಧತೆಯ ಬೆಂಬಲವನ್ನು ಸಮಿತಿಯು ಸದಾ ಸ್ಮರಿಸುತ್ತಿದೆ.ಅಂತರರಾಷ್ಟ್ರೀಯ ಖ್ಯಾತಿಯ ವೈದ್ಯರು ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ. ಬಿ ಎಂ ಹೆಗ್ಡೆ ಅವರು ಸಮಿತಿಯ ಸ್ಥಾಪನೆ ಯಾ ದಂ ದಿ ನಿಂ ದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಸಮಿತಿಗೆ ಅಮೂಲ್ಯ ಮಾರ್ಗದರ್ಶನಮತ್ತು ಬೆಂಬಲವನ್ನು ನೀಡುತ್ತಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಯನ್ನು.ಪರಿಸರ ಸಂರಕ್ಷಣೆಯ ಪರಿಸರವಾದಿಗಳು ಹೆಸರಿನಲ್ಲಿ ಬಲವಾಗಿ ವಿರೋಧಿಸುತ್ತಿದ್ದ ಸಮಯದಲ್ಲಿ 1995 ರಲ್ಲಿ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಅಮೆರಿಕದ ಕೋಜೆಂಟ್ರಿಕ್ಸ್ ಕಂಪನಿಯು 1000 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಯತ್ನಿಸಿತು. ಈ ಯೋಜನೆಗೆ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳ ಸಂಪೂರ್ಣ ಬೆಂಬಲವಿತ್ತು.ಆಗಿನ ಕರ್ನಾಟಕದ ಮುಖ್ಯಮಂತ್ರಿ ಜೆ. ఎబో. ಪಟೇಲ್ ಅವರು ಪಡುಬಿದ್ರಿಯಲ್ಲಿ ಕೋಜೆಂಟ್ರಿಕ್ಸ್ ವಿದ್ಯುತ್ ಯೋಜನೆಯನ್ನು ಸರ್ಕಾರ ಸ್ಥಾಪಿಸಲಿದೆ ಎಂದು ಘೋಷಿಸಿದ್ದರು.

ಆಗಿನ ಪ್ರಧಾನಿ ನರಸಿಂಹ ರಾವ್ ಅವರಿಂದ ಯೋಜನೆಯ ಶಂಕುಸ್ಥಾಪನೆ ನೆರವೇರಬೇಕಾಗಿದ್ದು, ಈ ವಿಷಯವು ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆದರೆ, ವಿದ್ಯುತ್ ಯೋಜನೆಗೆ ವಿರೋಧ ತೀವ್ರಗೊಂಡು ಪ್ರತಿಭಟನೆಗಳು ಭಾರಿ ಪ್ರಮಾಣದಲ್ಲಿ ನಡೆದವು. ಪೊಲೀಸ್ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ನಿಯಂತ್ರಣವನ್ನೂ ಮೀರುವಂತಾಯಿತು. ಪ್ರಧಾನಿ ಕೋಜೆಂಟ್ರಿಕ್ಸ್ ವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದ ದಿನದ ಇತರರಿಂದ ಉಂಟಾದ ಹಿಂದಿನ ದಿನವೇ, ಸ್ಥಳೀಯರು ಹಾಗೂ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

ಅಂತಿಮವಾಗಿ, ಸುಮಾರು ಐದು ವರ್ಷಗಳ ನಿರಂತರ ಪ್ರಯತ್ನದ ನಂತರ ಯೋಜನೆಗಾಗಿ 120 ಕೋಟಿ ರೂ ವೆಚ್ಚ ಮಾಡಿದ್ದ ಕೋಜೆಂಟ್ರಿಕ್ಸ್ ಕಂಪನಿಯು ಭಾರತದಿಂದ ಹಿಂದೆ ಸರಿಯಿತು.ಈ ಘಟನೆಯ ಪರಿಣಾಮವಾಗಿ 2001 ರವರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಕೈಗಾರಿಕಾ ಅಭಿವೃದ್ಧಿಯ ದೃಷ್ಟಿಯಿಂದ “ಕೆಟ್ಟ ಜಿಲ್ಲೆ” ಎಂಬ ಹಣೆಪಟ್ಟಿ అంటించెస్తు.ಅನ್ಯಾಯವನ್ನು ಅವಳಿ ಜಿಲ್ಲೆಗಳಿಗೆ ಆಗಿರುವ ಮನಗಂಡು, ಇಂಜಿನಿಯರ್ ಹಾಗೂ ಸಮಾಜ ಸೇವಕ.ತೋನ್ಸೆ ಜಯಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಸಮಿತಿಯು ಅವಳಿ ಜಿಲ್ಲೆಗಳನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಸಂಕಲ್ಪಿಸಲಾಯಿತು.

“ಪರಿಸರವನ್ನು ಸಂರಕ್ಷಿಸಿ ಅಭಿವೃದ್ಧಿಯನ್ನು ಬೆಂಬಲಿಸಿ ಘೋಷವಾಕ್ಯದೊಂದಿಗೆ “ఎంబ 21 ನೇ ಶತಮಾನದಲ್ಲಿ ಪ್ರತಿಯೊಬ್ಬ ಮತ್ತು ಯುವಕ ಯುವತಿಯೂ ತಮ್ಮ ಉದ್ಯೋಗ ವ್ಯಾಪಾರಾವಕಾಶಗಳನ್ನು ಹುಡುಕುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಸಮಿತಿ ಕಾರ್ಯನಿರ್ವಹಿಸಿತು ಸಮಿತಿಯು, ಫೂ ಗ್ಯಾಸ್ ಡಿಸಲ್ಪರೈಸೇಷನ್ ಘಟಕ ಹೊಂದಿರುವ ಮೆಗಾ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವುದು.ಮಂಗಳೂರು ವಿಮಾನ ನಿಲ್ದಾಣವನ್ನು ರಾತ್ರಿ ವಿಮಾನಗಳ ಇಳಿಯುವಿಕೆ ಸೌಲಭ್ಯ ಹೊಂದಿದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವುದು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಸ್ತಿತ್ವದಲ್ಲಿರುವ ರನ್ನೇಯನ್ನು ವಿಸ್ತರಿಸಿ ಅಗತ್ಯ ಅಡಚಣೆಗಳನ್ನು ನಿವಾರಿಸುವುದು.16 ವರ್ಷಗಳಿಂದ ಸ್ಥಗಿತಗೊಂಡಿದ್ದ ಮಂಗಳೂರು-ಬೆಂಗಳೂರು ಸಂಪರ್ಕವನ್ನು ಪುನರಾರಂಭಿಸುವುದು ಹಾಗೂ ಮಾರ್ಗವನ್ನು ಮೀಟರ್ ಗೇಜಿಂದ ಬ್ರಾಡ್ ಗೇಜ್ ಪರಿವರ್ತಿಸುವುದು. ಸಮಿತಿಯ ಪ್ರಮುಖ ಬೇಡಿಕೆಗಳಾಗಿದ್ದವು.ಸಮಿತಿಯು ರಾಷ್ಟ್ರೀಯ ಹಿತಕ್ಕಾಗಿ ಅತ್ಯಂತ ಪ್ರಾಮಾಣಿಕತೆ, ನಿಷ್ಠೆ ಮತ್ತು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದೆ.

Related posts

ಕರಾವಳಿಗೆ ಹೈಕೋರ್ಟ್ ಪೀಠದ ಬೇಡಿಕೆ : ಉಡುಪಿಯಲ್ಲಿ ಬೃಹತ್ ಜನಾಂದೋಲನ;

Voiceoftulunadu

ವಾಲಿಕುಂಜ ಚಾರಣ : ಒಂದು ರುದ್ರ ರಮಣೀಯ ಅನುಭವ …!

Voiceoftulunadu

ಮಹಾರಾಷ್ಟ್ರ ವಿಧಾನ ಪರಿಷತ್ತ್‌ನ ಉಪ ಸಭಾಪತಿ ಸಚಿನ್ ಭಾವು ಅಹಿರೆ ಅವರನ್ನು ಅಭಿನಂದಿಸಿದ ಎನ್‌ಸಿಪಿ ಧುರೀಣ ಲಕ್ಷ ಣ ಪೂಜಾರಿ ಚಿತ್ರಾಪು ;

Voiceoftulunadu

Leave a Comment