28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಜೈನಕಾಶಿ ಮೂಡುಬಿದಿರೆಯ 18 ಬಸದಿಗಳಲ್ಲಿ ನಾಗರ ಪಂಚಮಿ ಆಚರಣೆ ;

ವರದಿ /ಚಿತ್ರ: ರೋನ್ಸ್ ಬಂಟ್ವಾಳ್

ಮುಂಬಯಿ /ಮೂಡುಬಿದಿರೆ : ಜೈನಕಾಶಿ ಮೂಡುಬಿದಿರೆಯ ಎಲ್ಲಾ 18 ಬಸದಿಗಳಲ್ಲಿ ಬಸದಿ ಮೂಲ ಸ್ವಾಮಿ ಅಭಿಷೇಕ ಜರುಗಿ ಆಯಾಯ ಬಸದಿಗೆ ಸಂಬಂಧಪಟ್ಟ ಭಕ್ತರು ನಾಗಬನದಲ್ಲಿ ಹಾಲು ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅವರು ಈ ಸಂಧರ್ಭ ಗುರುಬಸದಿಯಲ್ಲಿ ಉಪಸ್ಥಿತರಿದ್ದು ಆಶೀರ್ವಾದ ನೀಡಿ ಪೂಜೆಯಲ್ಲಿ ಭಾಗವಹಿಸಿದ ಸರ್ವರಿಗೂ ಒಳಿತಾಗಲಿ ಲೋಕ ಶಾಂತಿಯಾಗಲಿ ಎಂದು ಪ್ರಾಥಿಸಿದರು.

ಜೈನ ಧರ್ಮದಲ್ಲಿ ಪ್ರತಿದಿನ ನಿತ್ಯ ಪೂಜಾ ಸಂಧರ್ಭ ಪಂಚ ಕುಮಾರ ಪೂಜೆ ಶ್ರೀ ಜಿನೇಂದ್ರ ಭಗವಂತರ ಪೂಜೆಗೆ ಮೊದಲು ಸಂಧ್ಯಾವಂದನೆ ವಿಧಿಯಲ್ಲಿ ನಾಗದೇವರಿಗೆ ಉಪಚಾರ ಪೂಜೆ ಸಲ್ಲಿಸಲಾಗುತ್ತದೆ ಹಾಗೂ ಕಲಶ ಸ್ಥಾಪನೆ ಪುಣ್ಯಾಹ, ವಾಚನ ಸಂಧರ್ಭ ನಾಗ ಮಂತ್ರ’ಗಳನ್ನು ಉಚ್ಚರಿಸಿ ಸ್ಮರಿಸಲಾಗುತ್ತದೆ ನಾಗ ಪೂಜೆ ಆರಾಧನೆ ಪದ್ಧತಿ ಪ್ರಾಚೀನ ಇತಿಹಾಸ ಇದೆ.

ಚತುರ್ಥಕಾಲ ಪ್ರಥಮ ತೀರ್ಥಂಕರರಾದ ಭಗವಾನ್ ಅಧಿನಾಥರ ಕಾಲದಿಂದ ಪೂಜಿಸಿ ಆರಾಧಿಸಾಲಾಗುತ್ತದೆ ಪೂಜೆಯಲ್ಲಿ ಅಷ್ಟಕುಲ ನಾಗರು ಪ್ರಮುಖರಾಗಿದ್ದು ಒಟ್ಟು ಅರುವತ್ತು ಸಾವಿರ ನಾಗ ಕುಲಗಳಿಗೆ ನಿತ್ಯ ನೆನಪಿಸಿ ಅರ್ಗ್ಯ ನೀಡಲಾಗುತ್ತಿದೆ. ಇಪ್ಪತ್ತ ಮೂರನೇ ತೀರ್ಥಂಕರರಾದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಯಕ್ಷ ಧರಣೇಂದ್ರ ದೇವ ಪದ್ಮಾವತಿ ಭವನ ವಾಸಿ ಜಿನ ಶಾಸನ ರಕ್ಷಣಾ ದೇವರು ಇವರು ಭವನ ವಾಸಿ ದೇವತೆ ಗಳು ಜಿನ ಶಾಸನ ರಕ್ಷಕ ದೇವರನ್ನು ಉಪಚಾರ ಹಾಗೂ ವಿನಯ ದಿಂದ ಕೃತಜ್ಞತೆ ಪೂರ್ವಕ ಭಕ್ತಿಯಿಂದ ಉಪಚರಿಸಲಾಗುತ್ತದೆ ಎಂದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯರು ತಿಳಿಸಿದರು.

ಈ ಸಂಧರ್ಭ ದರ ಸೇನ, ನೇಮಿರಾಜ್, ವೀರೇಂದ್ರ, ಅಭಯ ಕುಮಾರ್, ಪಾರ್ಶ್ವನಾಥ, ವೃಂದಾ ರಾಜೇಂದ್ರ ಅರಮನೆ, ಮಂಜುಳಾ ಅಭಯಚಂದ್ರ, ಎಸ್.ಸುಧಾ, ದಿವ್ಯಾ, ಆರತಿ ಉಪಸ್ಥಿತರಿದ್ದರು. ವಿರಾಜ್ ಇಂದ್ರ ಗುರು ಬಸದಿಯಲ್ಲಿ ಜಗತ್ಪಾಲ ಇಂದ್ರ ಸಾವಿರ ಕಂಬ ಬಸದಿಯಲ್ಲಿ ಪೂಜೆ ನೆರವೇರಿಸಿದರು.

Related posts

ಹೆಬ್ರಿಯ ಚಾಣಕ್ಯ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಚೆಸ್ ತರಗತಿ ಉದ್ಘಾಟನೆ : ಚೆಸ್‌ ತರಗತಿ ಉದ್ಘಾಟಿಸಿದ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ;

Voiceoftulunadu

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ” ನುವಾ” ವಜ್ರಾಭರಣ ಅನಾವರಣ: ವಜ್ರಾಭರಣ ಅನಾವರಣಗೊಳಿಸಿದ ರೂಪದರ್ಶಿಗಳಾದ ನಿಧಿ, ಅನುಷಾ, ನಿಹಾರಿಕಾ ಶೆಟ್ಟಿ, ಶ್ರಾವ್ಯ;

Voiceoftulunadu

ಅಗರಿ ಎಂಟರ್‌ಪ್ರೈಸಸ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅಫ‌ರ್ ಪ್ರಾರಂಭ ;

Voiceoftulunadu

Leave a Comment