September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಿನಿಮಾ/ಮನರಂಜನೆ

ಟ್ರೇಲರ್‌ನಲ್ಲೇ ಮನರಂಜನೆ ನೀಡಿದ ‘ಪಿಚ್ಚರ್’ ಆಗಸ್ಟ್ 7ರಂದು ತುಳು, ಕನ್ನಡದಲ್ಲಿ ಸಿನಿಮಾ ತೆರೆಗೆ ;

ವರದಿ /ಚಿತ್ರ :ದಿತೇಶ್ ಪೂಜಾರಿ ಮಂಗಳೂರು

ಮಂಗಳೂರು/ಬೆಂಗಳೂರು : ಗೋಲ್ಡನ್ ಮೂವೀಸ್ ಲಾಂಭನದಲ್ಲಿ ಸದಭಿರುಚಿ ಚಿತ್ರಗಳ ನಿರ್ಮಾ ಪಕಿ ಶಿಲ್ಪಾ ಗಣೇಶ್ ಅವರು ನಿರ್ಮಿ ಸಿರುವ, ಸಂದೀಪ ಬೆದ್ರ ಚೊಚ್ಚಲ ನಿರ್ದೇಶನದ ಹಾಗೂ ನಿತ್ಯಪ್ರಕಾಶ್ ಬಂಟ್ವಾಳ ನಾಯಕನಾಗಿ ನಟಿಸಿರುವ ‘ಪಿಚ್ಚರ್’ ಚಿತ್ರ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಕನ್ನಡ ಹಾಗೂ ತುಳು ಎರಡು ಭಾಷೆಗಳಲ್ಲೂ ನಿರ್ಮಾಣವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾ ಗಿದ್ದು, ಟ್ರೇಲರ್‌ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ದೊರಕಿದೆ ಹಾಗೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯೂ ಆಗುತ್ತಿದೆ.

ಈಗಾಗಲೇ ಹಾಡುಗಳು ಹಾಗೂಸ್ಯಾಮುಯೆಲ್ ಅಭಿ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಈ ಚಿತ್ರದ ‘ಗೋಕುಲದ ರಾಧೆ ..’ ಹಾಡನ್ನು ಹಾಡಿರುವುದು ವಿಶೇಷ.ಟ್ರೇಲರ್ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಚಿತ್ರ ಆಗಸ್ಟ್ 7ರಂದು ಅದ್ಧೂರಿಯಾಗಿ ಬಿಡುಗಡೆಯಾಗು ತ್ತಿದೆ.

ಕೌಟುಂಬಿಕ, ಕಾಮಿಡಿ ಕಥಾಹಂ ದರದ ಜೊತೆಗೆ ಮನೋರಂಜನೆಯೇ ಪ್ರಧಾನವಾಗಿರುವ ಈ ಚಿತ್ರವನ್ನು ಸಂದೀಪ್ ಬೆದ್ರ ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್ ಕೆ.ಎಸ್ಅವರ ಛಾಯಾಗ್ರಹಣ, ರಾಜು ಆರ್ಯನ್ ಸಂಕಲನ, ಧನಂಜಯ್.ಬಿ -ಶ್ರೀರಾಜು ನೃತ್ಯ ನಿರ್ದೇಶನ, ರಾಧೇಶ್ ಸಂತೋಷ್ ಪೂಜಾರಿ ಕಲಾ ನಿರ್ದೇಶನ ಹಾಗೂ ಡ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ವಿರುವ ಈ ಚಿತ್ರಕ್ಕೆ ಮೋಹನ್ ಭಟ್ಕಳ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಸ್ಯಾಮು ಯೆಲ್ ಅಭಿ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ.ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಈ ಚಿತ್ರದ ‘ಗೋಕುಲದ ರಾಧೆ …’ ಹಾಡನ್ನು ಹಾಡಿರುವುದು ವಿಶೇಷ ನಿತ್ಯಪ್ರಕಾಶ್ ಬಂಟ್ವಾಳ ‘ಪಿಚ್ಚರ್’ಚಿತ್ರದ ನಾಯಕನಾಗಿದ್ದು, ನಾಯಕಿ ಯಾಗಿ ಅಮೃತ ಸುದು ಅಭಿನಯಿಸಿ ದ್ದಾರೆ.

ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂ ಜೂರ್. ಸಾಯಿಕೃಷ್ಣ, ವಜ್ರಧೀರ್ ಜೈನ್, ಸದಾಶಿವ ಅಮೀನ್, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಪೂಜಾರ್, ಜಯಶೀಲ ಮರೋಳಿ, ರೂಪ ವರ್ಕಾಡಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Related posts

ಆರೋಗ್ಯ ಕ್ಷೇತ್ರದ ಸಾರಥಿ ಸಚಿವ ಯು.ಟಿ ಖಾದರ್ ಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ

voiceoftulunadu

ಯುವವಾಹಿನಿ ಯುವ ಸಮಾಜದ ಧ್ವನಿಯಾಗಲಿ : ಸತೀಶ್ ಅಂಚನ್ ಮೂಲ್ಕಿ

voiceoftulunadu

ರಾಮಮಂದಿರ ವಿರೋಧಿಗಳೀಗ ರಾಮಭಕ್ತರಾಗಲು ಹೊರಟಿದ್ದಾರೆಯೇ? : ಶರಣ್ ಕುಮಾರ್ ಮಟ್ಟು,ಕಾಪು ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಕೌಂಟರ್;

Voiceoftulunadu

Leave a Comment