September 4, 2026
Uncategorizedಅಂತಾರಾಷ್ಟ್ರೀಯಕಲೆ/ಸಾಹಿತ್ಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾಸಿನಿಮಾ/ಮನರಂಜನೆ

ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ‘ರಾಮಾಯಣ’ ಟ್ರೇಲರ್ : ರಾಕಿಂಗ್ ಸ್ಟಾರ್ ಯಶ್, ಬಾಲಿ ವುಡ್ ನಟ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ದ ಚಿತ್ರದ ಟ್ರೇಲರ್ ;

ಜಾಗತಿಕ/ದೇಶ : ನಿನ್ನೆ(ಜುಲೈ 30) ಬ್ರಾಡ್ಮಿ ಮುಹೂರ್ತದಲ್ಲಿ(4:15ಕ್ಕೆ) ಜಾಗತಿಕವಾಗಿ ಬಿಡುಗಡೆಯಾದ ಟ್ರೇಲರ್ ಸಾಮಾಜಿಕ ಮಾಧ್ಯಮಗಳಲ್ಲಿ ಧೂಳೆಬ್ಬಿಸಿದೆ. ಸದ್ಯ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರದ ಟ್ರೇಲರ್ ಅನಾ ವರಣಗೊಂಡಿದೆ. ಸುಮಾರು 4 ನಿಮಿಷ 10 ಸೆಕೆಂಡುಗಳ ಅವಧಿಯ ಈ ಟ್ರೇಲರ್‌ನಲ್ಲಿ ಧರ್ಮ ಮತ್ತು ಅಧ ರ್ಮದ ನಡುವಿನ ಮಹಾಯುದ್ಧವನ್ನ ಅದ್ಭುತ ದೃಶ್ಯ ವೈಭವದೊಂದಿಗೆ ಕಟ್ಟಿಕೊ ಡಲಾಗಿದೆ.

ಮೊದಲು ರಾವಣನ ಇಂಟ್ರಿ ಡಕ್ಷನ್‌ನಿಂದ ಟ್ರೇಲರ್ ಶುರುವಾಗುತ್ತೆ ವೇಷ ಮರೆಸಿಕೊಂಡ ಲುಕ್‌ನಲ್ಲಿ ರಾವಣ ಬರುವ ಸನ್ನಿವೇಷ, ನಂತರ ರಿಯಲ್ ರಾಜನ ಗೆಟಪ್ ನಲ್ಲಿ ತಯಾ ರಾಗುವ ದೃಶ್ಯ, ಬ್ಯಾಕ್‌ ಗೌಂಡ್‌ನಲ್ಲಿ ಮೂರು ಲೋಕಕ್ಕೂ ನಾನೇ ರಾಜ ಎನ್ನುವ ರಾವಣನ ಡೈಲಾಗ್ ರೋಮಾಂಚನದ ಅನುಭವ ಕೊಡುತ್ತೆ ರಾವಣನಾಗಿ ಕನ್ನಡದ ಹೆಮ್ಮೆ ನಟಯಶ್ ಅವರು ಅಬ್ಬರಿಸಿದ್ದಾರೆ.ದುಷ್ಟನ ಪಾತ್ರ ಪರಿಚಯ ಆದ್ದೇಲೆ ಅವನ ಸಂಹಾರದ ಘೋಷ ಮೊಳ ಗಬೇಕಲ್ವಾ? ಶ್ರೀಮನ್ ನಾರಾಯಣನ ಬಳಿ ಭಕ್ತರ ಮೊರೆ, ಭೂಲೋಕಕ್ಕೆ ಮಹಾ ವಿಷ್ಣುವು ಯಜ್ಞ ಕುಂಡದ ಮೂಲಕ ರಾಮನಾಗಿ ಜನಿಸುವ ಪರಿ ಚಯ.

ಬಾಲಿವುಡ್ ನಟ ರಣಬೀರ್ ಕಪೂರ್ ಅವರು ರಾಮನ ಪಾತ್ರವನ್ನ ಶಾಂತಚಿತ್ತದಿಂದ ನಿಭಾಯಿಸಿದ್ದಾರೆ. ರಾಮ ಮತ್ತು ರಾವಣನ ಪರಿಚಯದ ನಂತರ ಬರುವುದು, ರಾಮನಿಂದ ಮೂರನೇ ತಾಯಿ ಕೈಕೇಯಿ ವಚನ ಪಡೆಯುವ ದೃಶ್ಯ. ಈ ದೃಶ್ಯದ ಜೊತೆ ಜೊತೆಗೆ ಸೀತೆಯ ಪರಿಚಯವನ್ನು ಜೋಡಿಸಲಾಗಿದೆ. ದಕ್ಷಿಣ ಭಾರತದ ಅಪ್ಪಟ ಪ್ರತಿಭೆ ಸಾಯಿಪಲ್ಲವಿ ಅವರು ಎಂದಿನಂತೆ ತಮ್ಮ ಸಹಜ ಅಭಿನಯದ ಮೂಲಕ ಕಣ್ಣನ ಸೆಳೆಯುತ್ತಾರೆ.

ಮುಂ ದೆ ರಾಮ ಕಾಡಿಗೆ ಹೋಗುವ ದೃಶ್ಯ ಬರುತ್ತೆ, ಬಹುಮುಖ್ಯವಾಗಿ ಗಮನಿ ಸುವ ವಿಚಾರ ಅಂದ್ರೆ ಶೂರ್ಪ ನಖಿ ಪಾತ್ರ ‘ರಾಮಾಯಣ’ ಮೂಲ ಶುರು ವಾಗುವುದೇ ಇಲ್ಲಿಂದ ಕಾಡಿಗೆ ಬಂದ ರಾಮ ಮತ್ತು ಲಕ್ಷ್ಮಣರನ್ನ ಮೋಹಿ ಸುವ ಶೂರ್ಪನಖಿ, ಇದರಿಂದಕೋಪಗೊಂಡ ಲಕ್ಷಣ ಶೂರ್ಪ ನಖಿಯ ಮೂಗು ಕತ್ತರಿಸುತ್ತಾನೆ. ಆವ ಮಾನಕ್ಕೊಳಗಾದ ಶೂರ್ಪನಖಿ ಸೀದಾ ಅಣ್ಣ ರಾವಣ ಬಳಿ ಹೋಗಿ ದೂರು ಹೇಳುತ್ತಾಳೆ. ಅಲ್ಲಿ ಕಿಡಿ ಹೊತ್ತಿ ಕೊಳ್ಳುತ್ತದೆ. ಈ ಅಷ್ಟು ದೃಶ್ಯವನ್ನ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಬಹು ಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಶೂರ್ಪನಖಿ ಪಾತ್ರದಲ್ಲಿ ನಟಿಸಿದ್ದಾರೆ.

‘ರಾಮಾಯಣ’ ಸಿನಿಮಾದದೊಡ್ಡ ಪ್ಲಸ್ ಪಾಯಿಂಟ್ ವೈಭವದ ಗ್ರಾಫಿಕ್ಸ್ ಸಂಪೂರ್ಣ ಸಿನಿಮಾವನ್ನ ಐಮ್ಯಾಕ್ಸ್‌ನಲ್ಲಿ ಚಿತ್ರೀಕರಿಸಲಾಗಿದೆ. ಅಧುನಿಕ ತಂತ್ರಜ್ಞಾನವನ್ನ ಭರಪೂರ್ ಆಗಿ ಬಳಸಿದ್ದಾರೆ. ಕಥೆ ಹೊಸದಲ್ಲ, ಆದರೆ ಸಿನಿಮಾ ಕಟ್ಟಿರುವ ರೀತಿ ವೀಕ್ಷ ಕರಿಗೆ ಹೊಸ ಅನುಭವ ನೀಡುವು ದಂತೂ ಪಕ್ಕಾ, ‘ರಾಮಾಯಣ’ ಸಿನಿಮಾ ಟ್ರೇಲರ್ ‘ಟಿ ಸೀರೀಸ್’ ಮತ್ತು ‘ವಲ್ಡ್ ಆಫ್ ರಾಮಾಯಣ’ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಯಾಗಿದೆ.

ನಿತೇಶ್ ತಿವಾರಿ ನಿರ್ದೇ ಶನದ ಈ ಚಿತ್ರವನ್ನು ಸೋನಿ ಪಿಕ್ಚರ್ಸ್ ಸಹಯೋಗದೊಂದಿಗೆ ಸುಮಾರು 4,000 ಕೋಟಿ ವೆಚ್ಚದಲ್ಲಿ ಎರಡು ಭಾಗಗಳಾಗಿ ನಿರ್ಮಿಸಲಾಗುತ್ತಿದೆ. ಚಿತ್ರದಲ್ಲಿ ರಣಬೀರ್ ಶ್ರೀರಾಮನಾಗಿ, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಬಣ್ಣ ಹಚ್ಚಿ ದ್ದಾರೆ. ಇನ್ನು ರಾವಣನ ಪಾತ್ರದಲ್ಲಿ ಯಶ್ ಹಾಗೂ ಹನುಮಂತನ ಪಾತ್ರ ದಲ್ಲಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ.

ಉಳಿದಂತೆ ಲಕ್ಷ್ಮಣನಾಗಿ ರವಿ ದುದೆ. ಕೈಕೇಯಿಯಾಗಿ ಲಾರಾ ದತ್ತಾ, ಶೂರ್ಪ ನಖಿಯಾಗಿ ರಕುಲ್ ಪ್ರೀತ್ ಸಿಂಗ್. ಮಂಡೋದರಿಯಾಗಿ ಕಾಜಲ್ ಆಗ ರ್ವಾಲ್ ಮತ್ತು ದಶರಥ ಮಹಾ ರಾಜ ನಾಗಿ ಅರುಣ್ ಗೋವಿಲ್ ನಟಿಸು ತ್ತಿದ್ದಾರೆ. ವಿವೇಕ್ ಒಬೆರಾಯ್, ಕುನಾ ಲ್ ಕಪೂರ್, ಆದಿನಾಥ್ ಕೊಠಾರೆ ಮತ್ತು ಮೋಹಿತ್ ರೈನಾ ಕೂಡ ಚಿತ್ರದ ಭಾಗವಾಗಿದ್ದಾರೆ.

ಸೋನಿ ಪಿಕ್ಚರ್ಸ್ ಸಹಯೋ ಗದೊಂದಿಗೆ ನಿರ್ಮಾಣವಾಗುತ್ತಿರುವ ‘ರಾಮಾಯಣ: ಭಾಗ-1’ 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ತೆರೆಕಾಣಲಿದೆ. ಅಂದಂಗೆ ಈ ಚಿತ್ರವನ್ನು ಇಂಗ್ಲಿಷ್, ಜಪಾನೀಸ್ ಹಾಗೂ ಮ್ಯಾಂಡರಿನ್ (ಚೈನೀಸ್) ಸೇರಿದಂತೆ ಹಲವು ಪ್ರಮು ಖ ಅಂತಾರಾಷ್ಟ್ರೀಯ ಭಾಷೆಗಳಿಗೆ ಡಬ್ ಮಾಡಲು ಚಿತ್ರತಂಡ ಯೋಜಿ ಸಿದೆ ಎನ್ನಲಾಗಿದೆ.

Related posts

ಕೊಳಲಗಿರಿ ಯುವ ವಿಚಾರ ವೇದಿಕೆ ಆಟಿಡೊಂಜಿ ದಿನಆಟಿ ತಿಂಗಳಿನಲ್ಲಿ ತಯಾರಿಸುತ್ತಿದ್ದ 28 ವಿವಿಧ ಬಗೆಯ ಖಾದ್ಯಗಳ ಸವಿರುಚಿ;

Voiceoftulunadu

ಧರ್ಮಸ್ಥಳದಲ್ಲಿ ಇಂದ್ರಿಯ ಆರೋಗ್ಯದ ಬಗ್ಗೆ ಅಂತಾರಾಷ್ಟ್ರೀಯ ಸಮಾವೇಶ : ‘ಪುನರ್ವಸು’ ಆಯುರ್ವೇದ ಪದ್ಧತಿಯ ಬಲವರ್ಧನೆಯೊಂದಿಗೆ ಆರೋಗ್ಯಭಾಗ್ಯ: ಡಾ| ಮನೀಷಾ ಕೋಟೆಕಾರ್;

Voiceoftulunadu

ತುಳುನಾಡ ಸಾಂಸ್ಕೃತಿಕ ಪತ್ರಿಕೋದ್ಯಮದ ವಿಶಿಷ್ಟ ಧ್ವನಿ ಪರಮಾನಂದ ಸಾಲ್ಯಾನ್ ಇನ್ನಿಲ್ಲ;

Voiceoftulunadu

Leave a Comment