28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಡಾ. ಎಂ. ಪ್ರಭಾಕರ ಜೋಶಿಯವರಿಗೆ ಪು. ಶ್ರೀ. ಪ್ರಶಸ್ತಿ;

ವರದಿ/ಚಿತ್ರ: ರೋಶನ್ ನೆಲ್ಲಿಗುಡ್ಡೆ

ಕಿನ್ನಿಗೋಳಿ : ನಾಡಿನ ಹಿರಿಯ ಬಹುಶ್ರುತ ವಿದ್ವಾಂಸ, ಲೇಖಕ, ಕಲಾವಿದ ಡಾ. ಎಂ. ಪ್ರಭಾಕರ ಜೋಷಿ ಅವರಿಗೆ ಈ ಬಾರಿಯ “ಕಟೀಲು ಪು. ಶ್ರೀನಿವಾಸ ಭಟ್ಟ ಪ್ರಶಸ್ತಿ” ಘೋಷಿಸಲಾಗಿದೆ.

ಡಾ. ಜೋಶಿಯವರು ಯಕ್ಷಗಾನ ಕಲಾವಿದ, ವಿಮರ್ಶೆ ಮೌಲ್ಯರಕ್ಷಣೆ, ಶಿಕ್ಷಣ, ಸಂಸ್ಕೃತಿ, ತತ್ವಶಾಸ್ತ್ರ, ಭಾಷೆ, ಸಾಂಸ್ಥಿಕ. ಸೇವೆಗಳಲ್ಲಿ ಆರು ದಶಕಗಳಿಗೂ ಮಿಕ್ಕಿ ಸಕ್ರಿಯರು. ತಾಳಮದ್ದಲೆ ಕಲಾವಿದ, ನಾಲ್ಕು ತಲೆಮಾರುಗಳ ಸಹ ಅರ್ಥಧಾರಿ, ಹಲವು ಗ್ರಂಥಗಳನ್ನು, ನೂರಾರು ಲೇಖನಗಳನ್ನು ಬರೆದವರು, ಅಕಾಡಮಿ ಪಾರ್ತಿಸುಬ್ಬ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕಸಾಪ ಗೌರವಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮಣಿಪಾಲ ಪ್ರಶಸ್ತಿ, ಕಲ್ಕೂರ ಪ್ರಶಸ್ತಿ, ಕಲಾರಂಗ ಪ್ರಶಸ್ತಿ, ಪಟ್ಟ ಪ್ರಶಸ್ತಿ ಸಹಿತ ನೂರಾರು ಮನ್ನಣೆಗಳಿಗೆ ಭಾಜನರಾಗಿರುವರು.

ಜುಲೈ 11 ರಂದು ಯುಗಪುರುಷ ನೇತೃತ್ವದಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಅಧ್ಯಾಪಕ, ಕಲಾವಿದ, ಸಂಶೋಧಕ, ಭಾಗವತ, ಅರ್ಥಧಾರಿ, ಸಂಶೋಧಕರಾಗಿ ಪ್ರಸಿದ್ಧರಾಗಿದ್ದ ಪು. ಶ್ರೀನಿವಾಸ ಭಟ್‌ರವರ ಸ್ಮೃತಿ ದಿನ ಕಾರ್ಯಕ್ರಮವು ಜರಗಲಿರುವುದು.

ಅಂದು ಡಾ. ಎಂ. ಪ್ರಭಾಕರ ಜೋಶಿಯವರಿಗೆ ಗಣ್ಯ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಅಂದು ಯುಗಪುರುಷದ ಕೆ. ಭುವನಾಭಿರಾಮ ಉಡುಪ ಹಾಗೂ ಪು. ಗುರುಪ್ರಸಾದ ಭಟ್‌ರವರು ತಿಳಿಸಿದ್ದಾರೆ.

Related posts

ಕಾಪು ರಂಗ ತರಂಗ ಸಂಸ್ಥೆಯ ನೂತನ “ವಿಕ್ರಂ ವೇದ” ನಾಟಕಕ್ಕೆ ಮುಹೂರ್ತ : ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಿಯಲ್ಲಿ ನಡೆದ ಮುಹೂರ್ತ ಕಾರ್ಯಕ್ರಮ;

Voiceoftulunadu

ಎಸ್ ಬಿ ಐ ಉಡುಪಿಯ ಪ್ರಾದೇಶಿಕ ವ್ಯವಹಾರ ಕಚೇರಿ ಸಂಭ್ರಮದ ಸ್ಟೇಟ್ ಬ್ಯಾಂಕ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾದೇಶಿಕ ವ್ಯವಸ್ಥಾಪಕರಾದ ಬಿ ಪ್ರಕಾಶ್ ಅಡಿಗ;

Voiceoftulunadu

ವಿಟ್ಲಪಿಂಡಿ ಪ್ರಯುಕ್ತ ರಾಜ್ಯಮಟ್ಟದ ರೀಲ್ಸ್ ಸ್ಪರ್ಧೆ : ವಿಜೇತರಿಗೆ ಆಕರ್ಷಕ ನಗದು ಬಹುಮಾನ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿದ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ;

Voiceoftulunadu

Leave a Comment