28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ತುಳುನಾಡಿನ ರೈಲ್ವೆ ಇತಿಹಾಸದಲ್ಲೇ ಹೊಸ ದಾಖಲೆ: ಮೆಟ್ರೋ ಮಾದರಿಯಲ್ಲಿ ಕಂಗೊಳಿಸುತ್ತಿದೆ ಬಂಟ್ವಾಳ ಸ್ಟೇಷನ್: ಪ್ರಧಾನಿ ಮೋದಿಯವರಿಂದ ಚಾಲನೆ ;

ವರದಿ /ಚಿತ್ರ: ರವಿರಾಜ್ ಕಾವೂರು

ಬಿ.ಸಿ ರೋಡ್ (ಮಂಗಳೂರು): ಕರಾವಳಿ ಭಾಗದ ಪ್ರಮುಖ ಕೊಂಡಿಯಾಗಿರುವ ಬಂಟ್ವಾಳ ರೈಲು ನಿಲ್ದಾಣವು ಈಗ ಸಂಪೂರ್ಣ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮರುಜನ್ಮ ಪಡೆದಿದೆ. ಕೇಂದ್ರ ಸರ್ಕಾರದ ‘ಅಮೃತ್ ಭಾರತ್ ಸ್ಟೇಷನ್’ ಯೋಜನೆಯಡಿ ಬರೋಬ್ಬರಿ ₹26.18 ಕೋಟಿ ಭಾರಿ ವೆಚ್ಚದಲ್ಲಿ ನವೀಕೃತಗೊಂಡಿರುವ ಈ ಸುಸಜ್ಜಿತ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದೇ (ಶುಕ್ರವಾರ, 17 ಜುಲೈ 2026) ವರ್ಚುವಲ್ ಮಾಧ್ಯಮದ ಮೂಲಕ ದೇಶದ ಸೇವೆಗೆ ಸಮರ್ಪಿಸಿದ್ದಾರೆ.

ನಿಲ್ದಾಣದ ಮೊದಲ ಪ್ಲಾಟ್‌ಫಾರ್ಮ್‌ನಲ್ಲಿ ಏರ್ಪಡಿಸಲಾಗಿದ್ದ ಈ ಐತಿಹಾಸಿಕ ನೇರ ಪ್ರಸಾರ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಸ್ಥಳೀಯ ಪ್ರಮುಖ ಮುಖಂಡರು ಭಾಗವಹಿಸಿ ಜಂಟಿಯಾಗಿ ದೀಪ ಬೆಳಗಿಸಿ ಸಂಭ್ರಮಿಸಿದರು. ಮೆಟ್ರೋ ಮಾದರಿಯಲ್ಲಿ ಸಿಂಗಾರಗೊಂಡ ನಿಲ್ದಾಣವು ವಿಶೇಷತೆಗಳಿಂದ ಕೂಡಿದ್ದು, ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳು,400 ಮೀಟರ್ ಉದ್ದದ ವಿಸ್ತೃತ ಪ್ಲಾಟ್‌ಫಾರ್ಮ್,ಟ್ರಾಫಿಕ್ ಮುಕ್ತ ಸರ್ಕ್ಯುಲೇಟಿಂಗ್ ಏರಿಯಾ,ವಿಶೇಷ ಚೇತನ ಸ್ನೇಹಿ ಸೌಲಭ್ಯಗಳನ್ನು ಒಳಗೊಂಡಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು, “ತುಳುನಾಡಿನ ರೈಲ್ವೆ ಮೂಲಸೌಕರ್ಯಕ್ಕೆ ಈ ಯೋಜನೆ ಹೊಸ ದಿಕ್ಸೂಚಿಯಾಗಿದೆ. ಈ ಮಾರ್ಗದ ವಿದ್ಯುದೀಕರಣ ಪ್ರಕ್ರಿಯೆ ಸಂಪೂರ್ಣಗೊಂಡಿರುವುದರಿಂದ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ಸೇರಿದಂತೆ ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಗ ಹೆಚ್ಚಾಗಲಿದೆ. ಸಾರ್ವಜನಿಕರು ಕೇವಲ ₹25 ಟಿಕೆಟ್ ದರದಲ್ಲಿ ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆರಾಮದಾಯಕವಾಗಿ ಪ್ರಯಾಣಿಸಬಹುದು” ಎಂದು ಹೆಮ್ಮೆಯಿಂದ ತಿಳಿಸಿದರು.

ಬಂಟ್ವಾಳದೊಂದಿಗೆ ದೇಶದ ಇತರ 74 ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ಉದ್ಘಾಟಿಸಿದ್ದು, ಇದರಲ್ಲಿ ನಮ್ಮ ರಾಜ್ಯದ ಅಲ್ನಾವರ, ಬಾದಾಮಿ ಮತ್ತು ಕೊಪ್ಪಳ ನಿಲ್ದಾಣಗಳೂ ಹೈಟೆಕ್ ಆಗಿ ಹೊರಹೊಮ್ಮಿವೆ. ಇದರೊಂದಿಗೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾದ ಲಿಫ್ಟ್ ಮತ್ತು ಎಕ್ಸಿಕ್ಯೂಟಿವ್ ಲೌಂಜ್ ಕೂಡ ಲೋಕಾರ್ಪಣೆಯಾಗಿದೆ.

ಒಟ್ಟಾರೆಯಾಗಿ, ನಮ್ಮ ಬಿ.ಸಿ ರೋಡ್ ಪರಿಸರದ ಬಂಟ್ವಾಳ ರೈಲ್ವೆ ನಿಲ್ದಾಣವು ಯಾವುದೇ ದೊಡ್ಡ ಮೆಟ್ರೋ ಸಿಟಿಯ ನಿಲ್ದಾಣಕ್ಕೆ ಕಮ್ಮಿಯಿಲ್ಲದಂತೆ ಸೌಲಭ್ಯಗಳನ್ನು ಹೊಂದಿದ್ದು, ಕರಾವಳಿ ಪ್ರಯಾಣಿಕರಲ್ಲಿ ಹರ್ಷದ ವಾತಾವರಣ ಮೂಡಿಸಿದೆ.

Related posts

ಶಿರ್ವ ಹಿಂದೂ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ:ಅಧ್ಯಕ್ಷತೆ ವಹಿಸಿದ ಜನಜಾಗೃತಿ ಸಮಿತಿ :ಉಪಾಧ್ಯಕ್ಷೆ ಬಬಿತಾ ಜಗದೀಶ್ ಅರಸ್ ;

Voiceoftulunadu

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ರಾಜ್ಯಮಟ್ಟದಲ್ಲಿ ಕಾಪು ಯೋಜನಾ ಕಚೇರಿಗೆ ದ್ವಿತೀಯ ಸ್ಥಾನ ಅಭಿನಂದನಾ ಪತ್ರ ಸ್ವೀಕರಿಸಿದ ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ;

Voiceoftulunadu

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ ಮಹಾಲಕ್ಷ್ಮೀ ವ್ರತ, ಪೂಜೆ ಸಂಪನ್ನ ವರಮಹಾಲಕ್ಷ್ಮೀ ಪೂಜೆಯಲ್ಲಿ ಸಾವಿರಾರು ಮಹಿಳೆಯರ ಉಪಸ್ಥಿತಿ ;

Voiceoftulunadu

Leave a Comment