September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಪಡುಬಿದ್ರಿ ಬಂಟರ ಸಂಘದ ಆಯೋಜನೆಯಲ್ಲಿ “ಪಡ್ಡೆದ್ರ ಬಂಟೆರ್ನ ಕೆಸರ್ದ ಗೊಬ್ಬು”:ಕಾರ್ಯಕ್ರಮ ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ;

ವರದಿ /ಚಿತ್ರ :ಈ ಮೀಡಿಯಾ

ಪಡುಬಿದ್ರಿ : ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ಫೆರ್ ಟ್ರಸ್ಟ್ ಪಡುಬಿದ್ರಿ, ಯುವ ವಿಭಾಗ ಬಂಟರ ಸಂಘದ ಆಯೋಜನೆಯಲ್ಲಿ ಭಾನುವಾರ ಎರ್ಮಾಳು ಮೂಡಬೆಟ್ಟು ಬರ್ಪಾಣಿ ದಿ. ಜಗನ್ನಾಥ ಶೆಟ್ಟಿಯವರ ಗದ್ದೆಯಲ್ಲಿ “ಪಡ್ಡೆದ್ರ ಬಂಟೆರ್ನ ಕೆಸರ್ದ ಗೊಬ್ಬುಕಾರ್ಯ ಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.

ಅವರು ಮಾತನಾಡಿ, ಸಂಸ್ಕಾರದ ಜೊತೆಗೆ ಶಿಸ್ತು ಮೂಡಿದಾಗ ಜೀವನ ಪಾವನವಾಗಬಹುದು. ಅಂದು ಬಡತನವಿದ್ದರೂ, ಹೃದಯ ಶ್ರೀಮಂತಿಕೆಯಿತ್ತು. ಇಂದು ಶ್ರೀಮಂತಿಕೆಯಿದ್ದರೂ, ಮಾನವೀಯತೆ ಮರೆಯಾಗಿದೆ. ಹೆತ್ತವರು ಮಕ್ಕಳ ಅಂಕಗಳೆಡೆಗೆ ಗಮನ ನೀಡುವ ಜೊತೆಗೆ ಯಾವುದೇ ವ್ಯಸನಗಳ ದಾಸರಾಗದೆ ಇರುವಂತೆ ನೋಡಬೇಕಾಗಿದೆ.

ಎಸ್ಸೆಸ್ಸೆಲ್ಸಿ, ಪದವಿಪೂರ್ವದಲ್ಲಿ ನಮ್ಮ ಜಿಲ್ಲೆ ರ‍್ಯಾಂಕ್ ಗಳಿಸಿರುವುದು ಸಂತಸದ ವಿಷಯವಾದರೆ, ಡ್ರಗ್ಸ್ ಸೇವನೆಯಲ್ಲಿಯೂ ನಮ್ಮ ಯುವಕರು ತೃತೀಯ ಸ್ಥಾನ ಗಳಿಸಿರುವುದೂ ನೋವಿನ ಸಂಗತಿಯಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಯುವಜನರಿಗೆ ಸಂಸ್ಕೃತಿಯ ಆರಿವು ಮೂಡಿಸೋಣ ಎಂದರು.

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಕೆಸರಗೊಬ್ಬು ಉದ್ಘಾಟಿಸಿದರು. ಹಿರಿಯ ಕೃಷಿಕೆ ಪಾದೆಬೆಟ್ಟು ಸುಗುಣ ವಿಠಲ ಶೆಟ್ಟಿ ಮತ್ತು ಬಾಲಚಂದ್ರ ಶೆಟ್ಟಿ ಎರ್ಮಾಳು ಪುಚ್ಚೊಟ್ಟು ಬೀಡು ಅವರನ್ನು ‌ಸನ್ಮಾನಿಸಲಾಯಿತು. ಪಡುಬಿದ್ರಿ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ಸುಜಿತ್ ಶೆಟ್ಟಿ ಅಧ್ಯಕ್ಷತೆ ‌ವಹಿಸಿ, ಸ್ವಾಗತಿಸಿದರು.

ಈ ಸಂದರ್ಭ ಮುನಿಯಾಲು ಉದಯ ಕೃಷ್ಣ ಚಾರಿಟೇಬಲ್‌ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿ, ಆಸ್ಪೆನ್ ಎಸ್ ಇ ಝಡ್ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ, ನವೀನ್ ಚಂದ್ರ ಜೆ ಶೆಟ್ಟಿ, ಸಂತೋಷ್‌ ಶೆಟ್ಟಿ ಪಲ್ಲವಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಕಾಶ್ ಶೆಟ್ಟಿ ಪಡುಹಿತ್ಲು, ರವಿಶೆಟ್ಟಿ ಗುಂಡ್ಲಾಡಿ, ಭಾರತಿ ಭಾಸ್ಕರ ಶೆಟ್ಟಿ, ಸಂತೋಷ್ ಶೆಟ್ಟಿ ಬರ್ಪಾಣಿ, ಮಿಥುನ್ ಶೆಟ್ಟಿ, ಪ್ರಣಮ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸತೀಶ್ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು

Related posts

ಖಾಕಿ ಕಳಚಿದರೂ ಅಳಿಯದ ಜನಪರ ಕಾಳಜಿ: ‘ಟೈಗರ್’ ರವಿ ಅವರ ನಿವೃತ್ತಿ ಪಯಣಕ್ಕೆ ಒಂದು ಭಾವಾಭಿವಾದನ:

voiceoftulunadu

ಬೆಳೆ ವಿಮೆ ಅವಧಿ ವಿಸ್ತರಣೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ಜುಲೈ 15ರವರೆಗೆ ವಿಸ್ತರಿಸಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಿಬಹುದು;

Voiceoftulunadu

ನಂದಿಕೂರು : 73 ಕೆ.ಜಿ ಗೂ ಅಧಿಕ ತೂಕದ ಗಾಂಜಾ ನಾಶಉಡುಪಿ ಜಿಲ್ಲಾ ಎಸ್ಪಿ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಂ ಶಂಕರ್ ನೇತೃತ್ವ;

Voiceoftulunadu

Leave a Comment