September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಾಣಿಜ್ಯವಿಶೇಷ ಅಂಕಣ

ಫಿಲಿಪೈನ್ಸ್‌ನಲ್ಲಿ 50ನೇ ಗ್ಲೋಬಲ್ ವುಮನ್ ಅಚೀವರ್ಸ್ ಅವಾರ್ಡ್‌ಗೆ ಭಾಜನರಾದ ಪ್ರಭಾ ಸುವರ್ಣ:

ಚಿತ್ರ /ವರದಿ: ರೋನ್ಸ್ ಬಂಟ್ವಾಳ

ಮುಂಬೈ (ಮನಿಲಾ), ಜೂನ್ 11: ಫಿಲಿಪೈನ್ಸ್‌ನ ಮನಿಲಾದಲ್ಲಿರುವ ದಿ ವೆಸ್ಟಿನ್ ಮನಿಲಾ ಹೋಟೆಲ್‌ನ ಗ್ರ್ಯಾಂಡ್ ಬಾಲ್‌ರೂಮ್‌ನಲ್ಲಿ ಕಳೆದ ಭಾನುವಾರ (ಜೂನ್ 7) ಪ್ರತಿಷ್ಠಿತ ‘ಮೈಲ್ಸ್‌ಟೋನ್ ಗ್ಲೋಬಲ್ ಅವಾರ್ಡ್ಸ್’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.ಈ ಸಮಾರಂಭದಲ್ಲಿ ಮಹಾ ಮುಂಬೈನ ದಾದರ್ ಪೂರ್ವದ ಪ್ರಭಾ ಎನ್. ಸುವರ್ಣ ಅವರಿಗೆ ’50ನೇ ಗ್ಲೋಬಲ್ ವುಮನ್ ಅಚೀವರ್ಸ್ ಅವಾರ್ಡ್’ ಪ್ರದಾನ ಮಾಡಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಭಾ ಸುವರ್ಣ ಅವರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿನ ಕೊಡುಗೆಗಳನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.ಈ ಪ್ರಶಸ್ತಿ ಲಭಿಸಿರುವುದಕ್ಕೆ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಹಿತೈಷಿಗಳು ಪ್ರಭಾ ಸುವರ್ಣ ಅವರನ್ನು ಅಭಿನಂದಿಸಿದ್ದಾರೆ.

Related posts

ಸಂಸ್ಕೃತದ ಅಧ್ಯಯನ ನಮ್ಮ ಆದ್ಯ ಕರ್ತವ್ಯ – ಪರ್ಯಾಯ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು : ಇಹಲೋಕ ಮತ್ತು ಪರಲೋಕ ಎರಡಕ್ಕೂ ಸಂಸ್ಕೃತದಿಂದ ಉಪಯೋಗ : ವಿದ್ಯಾಸಾಗರ ತೀರ್ಥ ಶ್ರೀಪಾದರು ;

Voiceoftulunadu

ಕಿನ್ನಿಗೋಳಿ ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ “ಆಟಿದ ನೆಂಪು – ೨೦೨೬” – ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳು ವರ್ಲ್ಡ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ಭಾನುಮತಿ ಶೆಟ್ಟಿ ;

Voiceoftulunadu

ಜಗಜ್ಯೋತಿ ಕಲಾವೃಂದ ಸಂಸ್ಥೆಯಿಂದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕಅಖಿಲ ಭಾರತ ಮಟ್ಟದ ಕಥೆ ಹಾಗೂ ಕವಿತಾ ಪ್ರಶಸ್ತಿಗಳ ಸ್ಪರ್ಧೆಗೆ ಆಹ್ವಾನ

voiceoftulunadu

Leave a Comment