ಚಿತ್ರ /ವರದಿ: ರೋನ್ಸ್ ಬಂಟ್ವಾಳ
ಮುಂಬೈ (ಮನಿಲಾ), ಜೂನ್ 11: ಫಿಲಿಪೈನ್ಸ್‌ನ ಮನಿಲಾದಲ್ಲಿರುವ ದಿ ವೆಸ್ಟಿನ್ ಮನಿಲಾ ಹೋಟೆಲ್‌ನ ಗ್ರ್ಯಾಂಡ್ ಬಾಲ್‌ರೂಮ್‌ನಲ್ಲಿ ಕಳೆದ ಭಾನುವಾರ (ಜೂನ್ 7) ಪ್ರತಿಷ್ಠಿತ ‘ಮೈಲ್ಸ್‌ಟೋನ್ ಗ್ಲೋಬಲ್ ಅವಾರ್ಡ್ಸ್’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.ಈ ಸಮಾರಂಭದಲ್ಲಿ ಮಹಾ ಮುಂಬೈನ ದಾದರ್ ಪೂರ್ವದ ಪ್ರಭಾ ಎನ್. ಸುವರ್ಣ ಅವರಿಗೆ ’50ನೇ ಗ್ಲೋಬಲ್ ವುಮನ್ ಅಚೀವರ್ಸ್ ಅವಾರ್ಡ್’ ಪ್ರದಾನ ಮಾಡಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಭಾ ಸುವರ್ಣ ಅವರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿನ ಕೊಡುಗೆಗಳನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.ಈ ಪ್ರಶಸ್ತಿ ಲಭಿಸಿರುವುದಕ್ಕೆ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಹಿತೈಷಿಗಳು ಪ್ರಭಾ ಸುವರ್ಣ ಅವರನ್ನು ಅಭಿನಂದಿಸಿದ್ದಾರೆ.
