27 C
ಮಂಗಳೂರು
July 6, 2026
Uncategorizedಕ್ರೈಮ್ಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜಕೀಯರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಧರ್ಮಸ್ಥಳ ಕ್ಷೇತ್ರ ಮತ್ತು ಹೆಗ್ಗಡೆಯವರ ವಿರುದ್ಧ ನಡೆದ ದೊಡ್ಡ ಮಟ್ಟದ ಪಿತೂರಿ ; ಚಿನ್ನಯ್ಯನಿಂದ ರಿಟ್ಕರಾವಳಿ ಹಾಗೂ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ ಪ್ರಕಾಶ್ ರಾಜ್ ಹೆಸರು:

ವರದಿ/ಚಿತ್ರ: ಬಾಲಕೃಷ್ಣ ಉಚ್ಚಿಲ

ಬೆಂಗಳೂರು: ಧರ್ಮಸ್ಥಳದ ಬಹುಚರ್ಚಿತ “ಬುರುಡೆ ಪ್ರಕರಣ” ಪ್ರಕರಣಕ್ಕೆ ಈಗ ಅತ್ಯಂತ ಸ್ಫೋಟಕ ತಿರುವು ಸಿಕ್ಕಿದ್ದು, ಈ ಇಡೀ ಪ್ರಕರಣವು ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆದ ದೊಡ್ಡ ಮಟ್ಟದ ಪಿತೂರಿ ಎಂದು ಆರೋಪಿಸಿ, ಪ್ರಕರಣದ ಪ್ರಮುಖ ವ್ಯಕ್ತಿ ಚಿನ್ನಯ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ. ವಿಶೇಷವೆಂದರೆ, ಈ ಅರ್ಜಿಯಲ್ಲಿ ಆತ ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಪ್ರಮುಖರ ಹೆಸರುಗಳನ್ನು ಬಹಿರಂಗಪಡಿಸಿದ್ದು, ಇದು ಕರಾವಳಿ ಹಾಗೂ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ತನ್ನನ್ನು ದಾಳವಾಗಿ ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಚಿನ್ನಯ್ಯ ತನ್ನ ಅರ್ಜಿಯಲ್ಲಿ ಗಂಭೀರ ಆರೋಪ ಮಾಡಿದ್ದಾನೆ.

ಈ ಹಿಂದೆ ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂದು ಸುಳ್ಳು ಹೇಳುವಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಹಾಗೂ ವಿಠಲ್ ಗೌಡ ಎಂಬುವವರು ತನಗೆ ಒತ್ತಾಯಿಸಿದ್ದರು ಎಂದು ಆತ ತಿಳಿಸಿದ್ದಾನೆ. ಅಲ್ಲದೆ, ಬೆಂಗಳೂರಿನ ಜಯಂತ್ ಎಂಬುವವರ ಮನೆಗೆ ಕರೆದೊಯ್ದು, ಕೈಯಲ್ಲಿ ತಲೆ ಬುರುಡೆಯೊಂದನ್ನು ಕೊಟ್ಟು ಫೋಟೋ ತೆಗೆಸಿಕೊಂಡಿದ್ದರು. ನಂತರ ವಕೀಲರ ಕಚೇರಿಯಲ್ಲಿ ಸಹಿ ಪಡೆದು, ಸುಪ್ರೀಂಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದರು ಎಂದು ಚಿನ್ನಯ್ಯ ವಿವರಿಸಿದ್ದಾನೆ. ಈ ವೇಳೆ ತನಗೆ ಆಗಿಂದಾಗ್ಗೆ ಹಣದ ಆಮಿಷ ಒಡ್ಡಲಾಗಿತ್ತು ಮತ್ತು ಕೋರ್ಟ್‌ನಲ್ಲಿ ಹೇಳಿಕೆ ಬದಲಿಸಿದರೆ ಕೊಂದು ಹೂಳುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಆತ ದೂರಿದ್ದಾನೆ.

ಇದೇ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರನ್ನು ಉಲ್ಲೇಖಿಸಿರುವ ಚಿನ್ನಯ್ಯ, ತಲೆಬುರುಡೆ ನೀಡಿ ಪೊಲೀಸರಿಗೆ ದೂರು ನೀಡಿದ ಬಳಿಕ ತನ್ನನ್ನು ಕೇರಳದ ರೆಸಾರ್ಟ್‌ಗೆ ಕರೆದೊಯ್ಯಲಾಗಿತ್ತು ಎಂದು ಹೇಳಿದ್ದಾನೆ. ಅಲ್ಲಿ ರಾತ್ರಿ ವೇಳೆ ನಟ ಪ್ರಕಾಶ್ ರಾಜ್ ಅವರು ತನಗೆ ಫೋನ್ ಮಾಡಿ, ಗಿರೀಶ್ ಮಟ್ಟಣ್ಣವರ್ ಹೇಳಿಕೊಟ್ಟಂತೆಯೇ ಹೇಳಿಕೆ ನೀಡಬೇಕು ಎಂದು ತಮಿಳಿನಲ್ಲಿ ಸೂಚಿಸಿದ್ದರು. ಅಲ್ಲದೆ ಈ ಯೋಜನೆಯ ಒಟ್ಟು ಬಜೆಟ್ 200 ಕೋಟಿ ರೂಪಾಯಿ ಆಗಿದ್ದು, ವೀರೇಂದ್ರ ಹೆಗ್ಗಡೆಯವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ ತನಗೆ 50 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಆತ ಅರ್ಜಿಯಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಆದರೆ, ಎಸ್‌ಐಟಿ (SIT) ಅಧಿಕಾರಿಗಳು ಜಾಗ ಪರಿಶೀಲಿಸಿದಾಗ ಅಲ್ಲಿ ಯಾವುದೇ ಶವದ ಅವಶೇಷಗಳು ಸಿಗದ ಕಾರಣ, ತಾನು ಭಯಗೊಂಡು ಸತ್ಯ ಹೇಳಲು ತೀರ್ಮಾನಿಸಿರುವುದಾಗಿ ಚಿನ್ನಯ್ಯ ಸ್ಪಷ್ಟಪಡಿಸಿದ್ದಾನೆ.

ಪ್ರಸ್ತುತ ಈ ಇಡೀ ಪಿತೂರಿಯ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದ್ದರೂ, ಅಂತಿಮ ವರದಿ ಸಲ್ಲಿಸದ ಮತ್ತು ಸಂಚು ರೂಪಿಸಿದವರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರದ ನಿಲುವನ್ನು ಚಿನ್ನಯ್ಯ ಪ್ರಶ್ನಿಸಿದ್ದಾನೆ. ಈ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈಗ ರಾಜ್ಯ ಸರ್ಕಾರ ಹಾಗೂ ಎಸ್‌ಐಟಿಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಜೂನ್ 29 ರೊಳಗೆ ಈ ಪ್ರಕರಣದ ತನಿಖೆಯ ಪ್ರಗತಿ ಮತ್ತು ಸದ್ಯದ ಸ್ಥಿತಿಗತಿಯ ಸಂಪೂರ್ಣ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ.

Related posts

ಮುಂಬೈನಲ್ಲಿ ಮಂಗಳೂರಿನ ಲೆಕ್ಸಾ ಲೈಟಿಂಗ್ ಸಂಸ್ಥೆಗೆ ದೇಶದ ಅತ್ಯುತ್ತಮ ಲೈಟಿಂಗ್ ತಂತ್ರಜ್ಞಾನ ನವೀನತಾ ಪ್ರಶಸ್ತಿ:

Voiceoftulunadu

ಉಡುಪಿ ಶ್ರೀಕೃಷ್ಣ ಮಠಕ್ಕೆ ಉದ್ಯಮಿ ಅನಂತ್ ಅಂಬಾನಿ ಭೇಟಿ: ಶೀರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದ ಅನಂತ್ ಅಂಬಾನಿ;

voiceoftulunadu

ಧರ್ಮಸ್ಥಳದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ:ಕುಮಾರಿ ಚಿನ್ಮಯಿ ಬೆಂಗಳೂರಿಗೆ ‘ಯೋಗರತ್ನ’ ಪ್ರಶಸ್ತಿ ಪ್ರದಾನ;

Voiceoftulunadu

Leave a Comment