ವರದಿ/ ಚಿತ್ರ:ಈ ಮೀಡಿಯಾ
ಉಡುಪಿ: ಪರ್ಕಳ ಲಯನ್ಸ್ ಕ್ಲಬ್ಬ ನೂತನ ಸಾಲಿನ ಸಾರಥ್ಯವನ್ನು ಕಟಪಾಡಿ ಅಭಿರಾಜ್ ಸುವರ್ಣ ವಹಿಸಿಕೊಂಡಿದ್ದಾರೆ.ಉಡುಪಿ ಪುರಭವನದಲ್ಲಿ ಲಯನ್ಸ್ ಕ್ಲಬ್ ಪರ್ಕಳ ಇದರ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಅಭಿರಾಜ್ ಸುವರ್ಣ ಕಟಪಾಡಿ ಅವರ ನೇತೃತ್ವದ ತಂಡಕ್ಕೆ, ನಿಕಟಪೂರ್ವ ಜಿಲ್ಲಾ ಗವರ್ನರ್ (317 ಡಿ) ಅರವಿಂದ್ ಶೆಣೈ ಅವರು ಪ್ರತಿಜ್ಞಾವಿಧಿ ಬೋಧಿಸಿ, ಅಧಿಕಾರ ಮುದ್ರೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ನಿಟ್ಟಿನಲ್ಲಿ ಹೊಸ ತಂಡವು ಕಾರ್ಯಾಚರಿಸಲಿ ಎಂದು ಆಶಿಸಿದರು.
ಪ್ರಧಾನ ಕಾರ್ಯದರ್ಶಿಯಾಗಿ ಶ್ರೀವತ್ಸ ಉಡುಪಿ, ಕೋಶಾಧಿಕಾರಿ ಭಗೀರಥ್ ಸಾಲ್ಯಾನ್ ಆಯ್ಕೆ ಆಗಿದ್ದು ಪ್ರಮಾಣವಚನ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳಾದ ರೋಟರಿ ಜಿಲ್ಲಾ ಕಾರ್ಯದರ್ಶಿ ಸದಾನಂದ ನಾವಡ, ವಲಯಾಧ್ಯಕ್ಷ ಶೇಖರ್ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ವಿನೋದರವರು ಉಪಸ್ಥಿತರಿದ್ದು ಆಡಳಿತ ಮಂಡಳಿಗೆ ಬೆಂಬಲ ಸೂಚಿಸಿದರು.
ಇದರೊಂದಿಗೆ ಲಿಯೋ ಜಿಲ್ಲಾಧ್ಯಕ್ಷೆ ಸಂಜನಾ ಬಾಳಿಗ ಮತ್ತು ನಿಕಟಪೂರ್ವ ಜಿಲ್ಲಾ ಗವರ್ನರ್ (317 ಸಿ) ಸಪ್ನಾ ಸುರೇಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ತಂಡದ ಸಾಮಾಜಿಕ ಯೋಜನೆಗಳಿಗೆ ಪ್ರೇರಣೆ ನೀಡಿದರು.ಈ ಸಂದರ್ಭ ಕಟಪಾಡಿ ಅಭಿರಾಜ್ ಸುವರ್ಣ ಮತ್ತು ತಂಡಕ್ಕೆ, ಕುಟುಂಬಿಕರು, ಬಂಧುಮಿತ್ರರು ಶುಭ ಹಾರೈಸಿದರು.
