September 5, 2026
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನ

ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಕೆಎಸ್ ಸಿಎಸ್ ಟಿಯಿಂದ ಯೋಜನಾ ಪ್ರಶಸ್ತಿ : ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ, ಸಂಸ್ಥೆಯ ಪ್ರಾಂಶುಪಾಲರಿಂದ ಅಭಿನಂದನೆ;

ವರದಿ/ ಚಿತ್ರ: ಈ ಮೀಡಿಯಾ

ಬಂಟಕಲ್ : ಶ್ರೀ ಮಧ್ವ ವಾದಿರಾಜ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಬಿ ಜಿ ಎಸ್ ಮಹಾ ವಿದ್ಯಾಲಯ, ಮಂಡ್ಯ ಇಲ್ಲಿ ಜರಗಿದ 48ನೇ ವಿದ್ಯಾರ್ಥಿ ಯೋಜನಾ ಕಾರ್ಯಕ್ರಮದ ಅಂಗವಾಗಿ ನಡೆದ ಪೋಸ್ಟರ್ ಪ್ರದರ್ಶನ ಮತ್ತು ಯೋಜನಾ ಪ್ರದರ್ಶನ ಸ್ಪರ್ಧೆಯಲ್ಲಿ ಎ ಐ ಆಧಾರಿತ ಶ್ರವಣ ಸಾಧನ “ಹಿಯರ್ ಪ್ಯೂಶನ್” ಎಂಬ ಯೋಜನೆಗೆ ವರ್ಷದ ಅತ್ಯುತ್ತಮ ಯೋಜನಾ ಪ್ರಶಸ್ತಿಯನ್ನು ದೊರೆತಿದೆ.

ಸಾಮಾನ್ಯ ಶ್ರವಣ ಸಾಧನಗಳು ಸಾಮಾನ್ಯವಾಗಿ ಎಲ್ಲಾ ಶಬ್ದಗಳನ್ನುಸಮಾನವಾಗಿ ಗದ್ದಲದ ಕೇಳಿಸುವುದರಿಂದ ವಾತಾವರಣದಲ್ಲಿ ಸ್ಪಷ್ಟವಾಗಿ ಮಾತುಗಳನ್ನು ಗುರುತಿಸುವುದು ಬಳಕೆದಾರರಿಗೆ ಕಷ್ಟಕರವಾಗಿರುವುದರಿಂದ ಇದಕ್ಕೆ ಪರಿಹಾರವಾಗಿ ವಿದ್ಯಾರ್ಥಿಗಳು ಅನಗತ್ಯ ಹಿನ್ನಲೆ ಶಬ್ದವನ್ನು ಕಡಿಮೆ ಮಾಡುತ್ತಾ ಮಾತಿನ ಸ್ಪಷ್ಟತೆಯನ್ನು ಹೆಚ್ಚಿಸುವ ಶ್ರವಣ ಸಾಧನ ಇದಾಗಿದೆ.

ಈ ಮಾದರಿ ಡಿಜಿಟಲ್ ಸಿಗ್ನಲ್ ಪ್ರೋಸೆಸಿಂಗ್ ತಂತ್ರಜ್ಞಾನವನ್ನು ಬಳಸಿ ಮಾತಿನ ಧ್ವನಿಯನ್ನು ಸ್ಪಷ್ಟಗೊಳಿಸಿ, ಹಿನ್ನೆಲೆಯ ಶಬ್ದವನ್ನು ಕಡಿಮೆ ಮಾಡುವ ಮೂಲಕ ಅತ್ಯಲ್ಪ ವಿಳಂಬದ ಉತ್ತಮ ಗುಣಮಟ್ಟದ ಧ್ವನಿಯನ್ನು ಒದಗಿಸುತ್ತದೆ.

ಈ ಯೋಜನೆಯನ್ನು ವಿದ್ಯುನ್ಮಾನಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪೂರ್ಣಿತ, ಅನನ್ಯ ಆಚಾರ್ಯ, ಜತ್ತನ್ ಶ್ರದ್ಧಾ ವಸಂತ್ ಮತ್ತು ದೀಪ್ತಿಯವರು ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ಪವಿತ್ರ ಪೂರ್ಣಿಮಾ ಮತ್ತು ರಘುನಾಥ್ ಇವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹ ಣಾಧಿ ಕಾರಿಗಳು, ಸಂಸ್ಥೆಯ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದ್ದಾರೆ.

Related posts

ಭಜನೋತ್ಸವ’ ದಿಂದ ಮನೆ ಮನೆಗಳಲ್ಲಿ ಭಜನೆ ಮೊಳಗುವಂತಾಗಲಿ : ಡಾ. ನಿ.ಬೀ. ವಿಜಯ ಬಲ್ಲಾಳ್ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ‘ಭಜನೋತ್ಸವ-2026’ ಕ್ಕೆ ಚಾಲನೆ ;

Voiceoftulunadu

ಯೋಗ ದಿನಾಚರಣೆ| ಯೋಗವು ಕೇವಲ ದೈಹಿಕ ಕಸರತ್ತಲ್ಲ, ಇದು ಮಾನವ ಚೇತನದ ಅದ್ಭುತ ಅಭಿವ್ಯಕ್ತಿ: ಮೋದಿ;

Voiceoftulunadu

ಬಂಟಕಲ್ ತಾಂತ್ರಿಕ ಕಾಲೇಜಿನ ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಉದ್ಯೋಗ, ಕೌಶಲ್ಯ ವೃದ್ಧಿಗಾಗಿ ಉಪಾನ್ಯಾಸ ನೀಡಿದ ಪ್ರಾಧ್ಯಾಪಕಿ ಡಾ. ನೇಹಾ ಲಖೋಟಿಯ;

Voiceoftulunadu

Leave a Comment