28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಬಿಜೆಪಿಯ ವಿರುದ್ಧ ಹೋರಾಡಲು ಮಹಿಳೆಯರು ಸಂಘಟಿತರಾಗೋಣ :ವಿಲ್ಮಾ ಡಿಕೋಸ್ಟ;

ವರದಿ/ ಚಿತ್ರ:ರೋಶನ್ ನೆಲ್ಲಿಗುಡ್ಡೆ

ಮೂಲ್ಕಿ: ದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಮಹಿಳೆಯರ ಶೋಷಣೆ, ಮಹಿಳೆಯರಿಗೆ ಅನ್ಯಾಯ ಇಂತಹ ಕಾರ್ಯಗಳಲ್ಲಿ ನಿಸ್ಸೀಮರಾಗಿರುತ್ತಾರೆ.ಮಹಿಳೆಯರ ಶಕ್ತಿ ಏನೆಂಬುದಂದು ಇಂದಿರಾ ಗಾಂಧಿ ತೋರಿಸಿರುತ್ತಾರೆ. ಇದೇ ರೀತಿ ಮೂಡಬಿದ್ರೆ ಕ್ಷೆತ್ರದಲ್ಲಿಯೂ ಕೂಡ ನಾವು ಮಹಿಳೆಯರು ಸಂಘಟಿತರಾಗಿ ಬಿಜೆಪಿಯನ್ನು ಸೋಲಿಸುವ ಮಟ್ಟಿಗೆ ಬಲಯುತರಾಗಬೇಕೆಂದು ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ವಿಲ್ಮಾ ದಿಕೋಸ್ಟ ಕರೆ ನೀಡಿದರು.ಅವರು ಅಧ್ಯಕ್ಷ ಸ್ಥಾನ ಪಡೆದುಕೊಂಡ ನಂತರ ಪ್ರಥಮ ಮಹಿಳಾ ಬ್ಲಾಕ್ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ದಕ್ಷಿಣ

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ಮುಲ್ಕಿ ಉಸ್ತುವಾರಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಚಂದ್ರಕಲಾ ಡಿ ರಾವ್ ಮಾತನಾಡಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ನಡೆಯುವ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಮಹಿಳಾ ಕಾಂಗ್ರೆಸ್ನ ಎಲ್ಲಾ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ನ ಪ್ರತಿನಿಧಿಗಳಾದ ಮೇರಿ ಪಿಂಟೂ, ಮತ್ತು ಅನಿತಾ ಉಪಸ್ಥರಿದ್ದರು.ವಿಲ್ ಡಿಕೋಸ್ಟ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಿರಂಜಲನೀತು ವಂದಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸಿನ ಪದಾಧಿಕಾರಿಯಾದ ರೇಖಾ ಶೆಟ್ಟಿ ಸಮಿತಿ ಸದಸ್ಯರ ಪಟ್ಟಿಯನ್ನು ವಾಚಿಸಿದರು, ಸಂಘಟನಾ ಕಾರ್ಯದರ್ಶಿ ಸುಚಿತ್ರ ಹಳೆಯಂಗಡಿ ಪ್ರಾರ್ಥಿಸಿ ,ಜಿಲ್ಲಾ ಮಹಿಳಾ ಕಾಂಗ್ರೆಸಿನ ಪದಾಧಿಕಾರಿಯಾದ ಅನಿತಾ ಅರನ್ನ ಕಾರ್ಯಕ್ರಮ ನಿರೂಪಿಸಿದರು.ಪಂಚಾಯತ್ ವ್ಯಾಪ್ತಿಯಲ್ಲಿ ಉಪ ಸಮಿತಿಗಳನ್ನು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Related posts

ಬೆಂಜನಪದವು: ಸಾರ್ವಜನಿಕ ಶ್ರೀಕೃಷ್ಣ ಲೀಲೋತ್ಸವ, ಧಾರ್ಮಿಕ ಸಭೆ. ಒಗ್ಗಟ್ಟೇ ನಮ್ಮ ಶಕ್ತಿ, ಸನಾತನವೇ ನಮ್ಮ ಸಂಸ್ಕೃತಿ: ಡಾ.ರವೀಶ್ ಪಡುಮಲೆ ;

Voiceoftulunadu

ಮಂಗಳೂರು ವಿಮಾನ ನಿಲ್ದಾಣದಲ್ಲಿ “ಉಬರ್” ಸೇವೆ ಆರಂಭ:ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ;

Voiceoftulunadu

ಲಾವಣ್ಯ ಹಂತಕನ ಬಂಧನ, ಆಸ್ಪತ್ರೆಗೆ ದಾಖಲು, ಕಕ್ಕೆಪದವಿನಲ್ಲಿ ಅವರಿಸಿದ ಸ್ಮಶಾನ ಮೌನಆರೋಪಿಯನ್ನು ವಾಮಂಜೂರು ಪಚ್ಚನಾಡಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿ;

Voiceoftulunadu

Leave a Comment