September 6, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮರ್ಕಂಜ ಗ್ರಾಮದ ಕುದುಳಿ ಮನೆ ನಿವಾಸಿ ಚೇತನ್ ಕುಮಾರ್ ಕೆ.ಎಸ್. ನಿಧನ ;

ಮಂಗಳೂರು: ಮರ್ಕಂಜ ಗ್ರಾಮದ ಕುದುಳಿ ಮನೆ ನಿವಾಸಿ ಹಾಗೂ ಮಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚೇತನ್ ಕುಮಾರ್ ಕೆ.ಎಸ್. (39) ಅವರು ಆಗಸ್ಟ್ 29ರಂದು ನಿಧನರಾದರು.ಆರೋಗ್ಯವಾಗಿದ್ದ ಅವರು ಆಗಸ್ಟ್ 25ರಂದು ರಾತ್ರಿ ಮನೆಯಲ್ಲಿ ಕುಳಿತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದರೆನ್ನಲಾಗಿದೆ.

ತಕ್ಷಣ ಅವರನ್ನು ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅಧಿಕ ರಕ್ತದೊತ್ತಡದಿಂದಾಗಿ ಬ್ರೈನ್ ಹ್ಯಾಮರೇಜ್ ಸಂಭವಿಸಿತ್ತೆನ್ನಲಾಗಿದೆ. ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಆಗಸ್ಟ್ 29ರಂದು ಅವರು ಕೊನೆಯುಸಿರೆಳೆದರು.

ಮೃತರು ತಂದೆ ಕುದುಳಿ ಸೋಮಯ್ಯ ಗೌಡ, ತಾಯಿ ಶ್ರೀಮತಿ ತೀರ್ಥ, ಪತ್ನಿ ಶ್ರೀಮತಿ ಮೇಘಶ್ರೀ, ಪುತ್ರಿ ಸಂಹಿತಾ, ಸಹೋದರಿ ಚಿತ್ರಾ, ಮಾವ ದಾಮೋದರ ಕನ್ನಡ್ಕ, ಅತ್ತೆ ಮೋಹನಾಂಗಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಚೇತನ್ ಕುಮಾರ್ ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಗಳು ಹಾಗೂ ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Related posts

ಉಡುಪಿ ಜನ್ಮಾಷ್ಟಮಿ ಸಂಭ್ರಮ ಭಕ್ತಿ, ಶ್ರದ್ದೆಯ ಕೃಷ್ಣಾಷ್ಠಮಿ: ಪರ್ಯಾಯ ಶಿರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಅರ್ತ್ಯ ಪ್ರಧಾನ ;

Voiceoftulunadu

ಎಂಇಟಿ ಸಂಸ್ಥೆಯ ಶೈಕ್ಷಣಿಕ ಸಲಹಾ ಮಂಡಳಿ ಸದಸ್ಯರಾಗಿ ಸುನೀಲ್ ಲೋಬೊ ನೇಮಕ ;

Voiceoftulunadu

ಉಸಿರಿರುವಾಗ ಸಿಗದ ಆಸರೆ: ಸಾವಿನ ನಂತರದ ತೋರಿಕೆಯ ಪ್ರೀತಿಯೇ?

Voiceoftulunadu

Leave a Comment