ವರದಿ/ಚಿತ್ರ: ಈ ಮೀಡಿಯಾ
ಬಂಟ್ವಾಳ:ವಾಹನವೊಂದರಲ್ಲಿ ಅಕ್ರಮವಾಗಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಜಾಲವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರ ತಂಡ ಭೇದಿಸಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಿ 1.05 ಕೋ. ರೂ.ಗೂ ಅಧಿಕ ಮೌಲ್ಯದ ಎಂ ಡಿ ಎಂ ವಸ್ತು ಹಾಗೂ ಕೊಕೈನ್ ಸಹಿತ ಇತರ ಮಾದಕ ಸ್ವತ್ತುಗಳನ್ನು ವಶಪಡಿಸಿದ್ದಾರೆ.
ಶನಿವಾರ ರಾತ್ರಿ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಮತ್ತವರ ಸಿಬ್ಬಂದಿಗಳು ಬಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ ಹಾಸನ ಕಡೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಟೊಯೋಟೋ ಕಾರನ್ನು ಅನುಮಾನದಿಂದ ತಡೆದು నిలిసి ಪರಿಶೀಲಿಸಿದಾಗ ಎಂಡಿಎಂಎ ಮಾದಕ ವಸ್ತು ಹಾಗೂ ಕೊಕೈನ್ ಪತ್ತೆಯಾಗಿದೆ.
ಕೆಂಗೇರಿ ಮೂಲದ ನಿವಾಸಿ ಜರ್ತಾಬ್ ಕ ಮಹಮ್ಮದ್ ಅಮೀರ್ (35)ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಕಾರಿನಲ್ಲಿ ಮಾದಕವಸ್ತು ಸಾಗಿಸುತ್ತಿರುವುದನ್ನು ಬಾಯಿಬಿಟ್ಟಿದ್ದಾನೆಂದು ತಿಳಿದು ಬಂದಿದೆ.ಎಎಸ್ಪಿ ಅವರ ಮೂಲದ ಬಂಟ್ವಾಳ ಉಪವಿಭಾಗದ ಯಶ್ ಕುಮಾರ್ ಮಾರ್ಗದರ್ಶದಲ್ಲಿ ಮತ್ತಷ್ಟು ಆರೋಪಿಯನ್ನು ತನಿಖೆಗೊಳಪಡಿಸಿದಾಗ ನೈಜೀರಿಯಾ ಮಹಿಳೆಯೋರ್ವಳು ಮಾದಕವಸ್ತುಗಳನ್ನು ಬೆಂಗಳೂರಿಗೆ ತಂದುಕೊಡುತ್ತಿದ್ದು, ಅದನ್ನು ಆರೋಪಿ ಮಂಗಳೂರು ಕಡೆಗೆ ಸಾಗಿಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ಈ ಜಾಲದ ಹಿಂದೆ ಇನ್ನಿತರರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು,ಈ ನಿಟ್ಟಿನಲ್ಲಿ ಪೊಲೀಸರಿಂದ ತನಿಖೆಮುಂದುವರಿದಿದೆ.ಆರೋಪಿಯ ವಿರುದ್ಧ ಈ ಹಿಂದೆಯೂ 20ಕ್ಕೂ ಅಧಿಕ ಪ್ರಕರಣಗಳು ವಿವಿಧ ಠಾಣೆಯಲ್ಲಿ ದಾಖಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಬಂಧಿತ ಆರೋಪಿಯಿಂದ 538.63 ಗ್ರಾಂ ಎಂಡಿಎಂಎ ಮಾದಕವಸ್ತು ಹಾಗೂ 99.12 ಗ್ರಾಂ ಕೊಕೈನ್, ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ, ಕಾರು ಸೇರಿದಂತೆ ಇತರ ಸೊತ್ತುಗಳನ್ನು ಪೊಲೀಸರು ವಶ ಪಡಿಸಿದ್ದಾರೆ. ಇವುಗಳ ಒಟ್ಟು ಮೌಲ್ಯ1,05,59,450 20 ಅಂದಾಜಿಸಲಾಗಿದೆ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
