ವರದಿ/ ಚಿತ್ರ :ರೋನ್ಸ್ ಬಂಟ್ವಾಳ್
ಮುಂಬಯಿ, ಜು.30: ದೇಶದ ಪ್ರತಿಷ್ಠಿತ “ಎಜ್ಯುಕೇಶನ್ ಎಕ್ಸಲೆನ್ಸ್ ಎಂಪವರಿಂಗ್ ಇಂಡಿಯಾ ಅವಾರ್ಡ್ 2026” ಪ್ರಶಸ್ತಿಯ ನಾಲ್ಕನೇ ಆವೃತ್ತಿಯ ಪುರಸ್ಕಾರ ಪ್ರದಾನ ಕಾರ್ಯಕ್ರಮ ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದ ವಿಜೇತ ಶಾಲೆಯಾಗಿ ಮಲಾಡ್ನ ರಾಯಾನ್ ಇಂಟರ್ನ್ಯಾಷನಲ್ ಸ್ಕೂಲ್ (ಐಸಿಎಸ್ಇ /ಐಎಸ್ಸಿ) ಆಯ್ಕೆಯಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಸಾಧನೆಯನ್ನು ದಾಖಲಿಸಿದೆ.
ನವದೆಹಲಿದಲ್ಲಿ ಕಳೆದ ಮಂಗಳವಾರ ನಡೆದ ಭವ್ಯ ಸಮಾರಂಭದಲ್ಲಿ ಭಾರತದ ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ಡಾ। ಸುಕಾಂತ ಮಜುಂದಾರ್ ಅವರು ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ನಿರ್ದೇಶಕಿ ಡಾ| ಸ್ನೇಹಲ್ ಪಿಂಟೊ ಅವರಿಗೆ ಪ್ರಶಸ್ತಿ ಫಲಕ ಪ್ರದಾನಿಸಿ ಅಭಿನಂದಿಸಿದ ರು.
ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಗುಣಮಟ್ಟದ ಸಾಧನೆ, ನವೀನ ಶೈಕ್ಷಣಿಕ ವಿಧಾನಗಳು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೀಡಿದ ವಿಶೇಷ ಒತ್ತು ಹಾಗೂ ಶೈಕ್ಷಣಿಕ ನಾಯಕತ್ವದಲ್ಲಿ ಸಲ್ಲಿಸಿರುವ ಅತ್ಯುತ್ತಮ ಕೊಡುಗೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ರಯಾನ್ ಇಂಟರ್ನ್ಯಾಷನಲ್ ಶಾಲೆಗೆ ನೀಡಲಾಗಿದೆ.
ಈ ಗೌರವವು ಶಾಲೆಯ ನಿರಂತರ ಶೈಕ್ಷಣಿಕ ಉತ್ಕೃಷ್ಟತೆ, ಮೌಲ್ಯಾಧಾರಿತ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ನೀಡುತ್ತಿರುವ ಬದ್ಧತೆಗೆ ಸಂದ ರಾಷ್ಟ್ರೀಯ ಮನ್ನಣೆಯಾಗಿದೆ ಎಂದು ಡಾ| ಸ್ನೇಹಲ್ ಪಿಂಟೊ ತಿಳಿಸಿದರು.
