ಧರ್ಮಸ್ಥಳ : ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮಂಗಳವಾರ ಖ್ಯಾತ ಚಲನಚಿತ್ರ ನಟ ಯಶ್ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ಯಶ್ ಅವರ ಆಶೀರ್ವಾದ ಪಡೆದರು.
ಕೆಲಕಾಲ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆನಡೆಸಿದ್ದಾರೆ.ಯಶ್ ರವರನ್ನು ಹತ್ತಿರದಿಂದ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಗಳು ನೆರೆದಿದ್ದರು.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಯಶ್, ನಾಳೆ ಟಾಕ್ಸಿಕ್ ಸಿನೇಮಾ ರಿಲೀಸ್ ಬಗ್ಗೆ ಬಂದಿಲ್ಲ. ನಾನು ದೇವರ ದರ್ಶನಕ್ಕಾಗಿ ಬಂದಿದ್ದೇನೆ. ಎಲ್ಲರಿಗೂ ಶ್ರೀ ಮಂಜುನಾಥ ಒಳ್ಳೆದು ಮಾಡಲಿ ಎಂದು ಹಾರೈಸಿದ್ದಾರೆ.
