28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಸೈಂಟ್ ಮಿಲಾಗ್ರಿಸ್ ಕೋ ಆ. – ಸೊಸೈಟಿ ವತಿಯಿಂದ ಸ್ಪಂದನ ದಿವ್ಯಾಂಗರ ಕೇಂದ್ರಕ್ಕೆ ಸಹಾಯ ಹಸ್ತ ಸಮಾಜ ಸೇವೆಯು ಹಣಕಾಸು ಸಂಸ್ಥೆಗಳಿಗೆ ಮಾದರಿ: ವಂ. ಫಾ. ಡೆನ್ನಿಸ್ ಡೇಸಾ;

ವರದಿ /ಚಿತ್ರ :ಈ ಮೀಡಿಯಾ

ಉಡುಪಿ:ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ನೇಜಾರಿನ ಸ್ಪಂದನ ದಿವ್ಯಾಂಗರ ಸಂರಕ್ಷಣಾ ಕೇಂದ್ರದಲ್ಲಿ ಮಂಗಳವಾರ ಅಗತ್ಯ ವಸ್ತುಗಳ ವಿತರಣಾ ಸಮಾರಂಭನಡೆಯಿತು.ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋಓಪ್ ಸೊಸೈಟಿಯು ಅನೇಕ ವರ್ಷಗಳಿಂದ ಉಡುಪಿ ಜಿಲ್ಲೆಯ ವಿಶೇಷ ಮಕ್ಕಳ ಶಾಲೆ ಹಾಗೂ ದಿವ್ಯಾಂಗರ ಕೇಂದ್ರಕ್ಕೆ ಅಗತ್ಯ ವಸ್ತುಗಳನ್ನುವಿತರಿಸಿಕೊಂಡು ಬರುತ್ತಿದೆ.

ಇದು ಇತರ ಹಣಕಾಸು ಸಂಸ್ಥೆಗಳಿಗೆ ಮಾದರಿ ಆಗಿದೆ ಎಂದು ಶೋಕ ಮಾತಾ ಇಗರ್ಜಿಯ ಧರ್ಮಗುರು ವಂ. ಫಾ. ಡೆನ್ನಿಸ್ ಡೇಸಾ ಹೇಳಿದರು.ಕಾರ್ಯವು ಹಣಕಾಸಿನ ವ್ಯವಹಾರ ಜೊತೆ ಸಮಾಜಮುಖಿ ನಿರಂತರವಾಗಿ ನಡೆದು ದುರ್ಬಲ ವರ್ಗದವರಿಗೆ ಆಸರೆಯಾಗಿ ಇರಲಿ ಎಂದು ಹಾರೈಸಿದರು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಮಲ್ಪೆ ಉಪನಿರೀಕ್ಷಕರಾದ ಅನಿಲ್ ಕುಮಾರ್, ಸೊಸೈಟಿಯಶಾಖಾ ಅಭಿವೃದ್ಧಿ ಅಧಿಕಾರಿ ಮನೀಶ್, ಉಡುಪಿ ವ್ಯವಸ್ಥಾಪಕಿ ಪ್ರಮೀಳಾ ಲೋಬೊ, ಸಾಲ ವಸೂಲಾತಿ ಅಧಿಕಾರಿ ಗೌತಮ್ ರೈ, ಉಡುಪಿ ಶಾಖೆಯ ಸಿಬ್ಬಂದಿಗಳಾದ ಸಂದೇಶ್, ನಿಶಿತ್, ರೋಶನ್ ಮೆಂಡೋನ್ಸ, ಧನುಷ್, ಸುವಿಧಾ, ಅಜಯ್ ಶೆಟ್ಟಿ, ಸುಮಂತ್ ಉಪಸ್ಥಿತರಿದ್ದರು.ಜಾಸ್ಮಿನ್ ಶಿಲ್ಪಾ ಕ್ರಾಸ್ಟ ನಿರೂಪಿಸಿದರು. ನಿಶಿತ್ ಕುಲಾಲ್ ವಂದಿಸಿದರು.

Related posts

ಕಿನ್ನಿಗೋಳಿ ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ “ಆಟಿದ ನೆಂಪು – ೨೦೨೬” – ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳು ವರ್ಲ್ಡ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ಭಾನುಮತಿ ಶೆಟ್ಟಿ ;

Voiceoftulunadu

ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಆಶಾಕಿರಣ: ಉಡುಪಿ ಜಿಲ್ಲೆಗೆ 100 ಜ್ಞಾನ ದೀಪ ಶಿಕ್ಷಕರು ಪೂಜ್ಯ ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಹತ್ವಕಾಂಕ್ಷಿ ಜ್ಞಾನ ದೀಪ ಯೋಜನೆ;

Voiceoftulunadu

ಶ್ರೀಕೇತ್ರ ಪೊಳಲಿಗೆ ಶೃಂಗೇರಿ ಮಠದ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳ ಭೇಟಿ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಿದ ಆಡಳಿತ ಮಂಡಳಿ;

Voiceoftulunadu

Leave a Comment