ವರದಿ ಚಿತ್ರ ವಿನೋದ್ ಶೆಟ್ಟಿ ಉಡುಪಿ

ಉಡುಪಿ: ಅಖಿಲ ಭಾರತ ದೈವಾರಾಧಕರ ಒಕ್ಕೂಟದ ಕೇಂದ್ರೀಯ ಉಡುಪಿ ಜಿಲ್ಲೆ ವತಿಯಿಂದ ಉಡುಪಿ ನಗರ ಘಟಕ ದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 29-07-2026, ಬುಧವಾರದಂದು ಸಂಜೆ 7.00 ಗಂಟೆಗೆ ಬುಡ್ನಾರ್ ಕ್ಷೇತ್ರದ ಶ್ರೀ ಮೂಕಾಂಬಿಕಾ ದೇವಿ ಕೊರಗಜ್ಜ ಸನ್ನಿಧಾನ ದಲ್ಲಿ ವಿಜೃಂಭಣೆಯಿಂದ ಜರಗಿತು.

ಉದ್ಘಾಟನೆ:
ಕಾರ್ಯಕ್ರಮವನ್ನು ಶ್ರೀ ದೊಡ್ಡನಗುಡ್ಡೆ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಮಾನಂದ ಗುರೂಜಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಸನ್ಮಾನ:
ಈ ಸಂದರ್ಭದಲ್ಲಿ ಒಕ್ಕೂಟದ ಪರವಾಗಿ ಕುಂಜಿಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಶೇಷು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉದ್ಯಮಿ ಹಾಗೂ ಸಮಾಜಸೇವಕರಾದ ಶ್ರೀ ರಾಯಲ್ ರತ್ನಾಕರ್ ಶೆಟ್ಟಿ ಅವರು ಆಗಮಿಸಿದ್ದರು.

ಒಕ್ಕೂಟದ ಕೇಂದ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ವಿನೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ್ ಪೂಜಾರಿ, ಕೇಂದ್ರೀಯ ಕೋಶಾಧಿಕಾರಿ ಶ್ರೀ ಸಮಿತ್ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ನವೀನ್ ಪಾತ್ರಿ, ಜೊತೆ ಕಾರ್ಯದರ್ಶಿ ಶ್ರೀ ಶ್ಯಾಮ್, ಸಂಘಟನಾ ಕಾರ್ಯದರ್ಶಿ ಶ್ರೀ ಕೃಷ್ಣ ಪೂಜಾರಿ ಅಂಜಾರು ಉಪಸ್ಥಿತರಿದ್ದರು.

ನಗರ ಘಟಕದ ನೂತನ ಅಧ್ಯಕ್ಷರಾಗಿ ಪ್ರಭಾಕರ್ ಉಪಾಧ್ಯಕ್ಷರಾಗಿ ರಾಮ್, ಕಾರ್ಯದರ್ಶಿಯಾಗಿ ಶ್ರೀನಿವಾಸ್_ ಅವರು ಆಯ್ಕೆಯಾಗಿದ್ದಾರೆ.
ಕುಂಜಿಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನ ಸಮಿತಿಯ ಸದಸ್ಯರಾದ ಬೋಜ ಶೇರಿಗಾರ್ , ಕೇಂದ್ರೀಯ ಒಕ್ಕೂಟದ ಪ್ರಮುಖ ಸದಸ್ಯರಾದ _ ಕುಮಾರ್ ಭವಿಷ್, ಸಂದೇಶ್ ಪೂಜಾರಿ,ಉಮೇಶ್ ಶೆಟ್ಟಿ ಹಾವಂಜಿ ಶ್ರೀ ಮೂಕಾಂಬಿಕ ದುರ್ಗಾಪರಮೇಶ್ವರಿ ಕೊರಗಜ್ಜ ಸನ್ನಿಧಾನದ ಕಮಿಟಿ ಅಧ್ಯಕ್ಷರು
ನಾಗರಾಜ ಪೂಜಾರಿ ಶ್ರೀ ಮೂಕಾಂಬಿಕ ದುರ್ಗಾಪರಮೇಶ್ವರಿ ದೇವಸ್ಥಾನದ ನೇಮೋತ್ಸವ ಸಮಿತಿಯ ಕಾರ್ಯದರ್ಶಿ
ಸನ್ಮಾಂತರು ಶ್ರೀ ಸೇಸು ಗುರಿಕಾರ ಕುಂಜಿಬೆಟ್ಟು ಶ್ರೀ ಬಬ್ಬು ಸ್ವಾಮಿ ದೇವಸ್ಥಾನ,ಅಖಿಲ ಭಾರತ ದೈವಾರಾದಕರ
ಒಕ್ಕೂಟ ಕೇಂದ್ರೀಯ (ರಿ. ),ಉಡುಪಿ ಜಿಲ್ಲೆ,ನಗರ ಘಟಕದ ಅಧ್ಯಕ್ಷರು,ಶ್ರೀಪ್ರಭಾ ಮದೀಪು,ಅಭಿಜಿತ್ ಪಾಂಡೇಶ್ವರ,
ಶ್ರೀ ತುಳಸಿಯಮ್ಮ ಶಿರಸಿಯಮ್ಮ ಮಾರಿಕಾಂಬೆ ಕೊರಗಜ್ಜ ಕ್ಷೇತ್ರ ಕಲಿ ಬೈಲು ಧರ್ಮದರ್ಶಿಗಳು, ಪಿತ್ರೋಡಿ ಶ್ರೀ ಬಬ್ಬು ಸ್ವಾಮಿ ದೇವಸ್ಥಾನದ 10 ಸಮಸ್ತರು, ಬಜೆ ಬಬ್ಬು ಸ್ವಾಮಿ ದೇವಸ್ಥಾನದ 10 ಸಮಸ್ತರು ಶ್ರೀ ಬಬ್ಬು ಸ್ವಾಮಿ ದೇವಸ್ಥಾನ ಕಾರ್ತಿ ಬೈಲು ಕೊಳಲಗಿರಿ 10 ಸಮಸ್ತರು ಹಾಗೂ
ಶ್ರೀ ಬಬ್ಬು ಸ್ವಾಮಿ ದೇವಸ್ಥಾನ ತಂಕಬೆಟ್ಟು ಊರು ಹತ್ತು ಸಮಸ್ತರು ಉಪಸ್ಥಿತರಿದ್ದರು.
ಪ್ರಶಾಂತ್ ಪಾತ್ರಿ_ ಹಾಗೂ ಒಕ್ಕೂಟದ ಪ್ರಮುಖ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
