27 C
ಮಂಗಳೂರು
July 6, 2026
Uncategorizedಅಂತಾರಾಷ್ಟ್ರೀಯಬ್ರೇಕಿಂಗ್ ನ್ಯೂಸ್ರಾಜಕೀಯರಾಜ್ಯ/ದೇಶವಾಣಿಜ್ಯ

ಅಮೆರಿಕ -ಇರಾನ್ ಶಾಂತಿ ಒಪ್ಪಂದ: 14 ಅಂಶಗಳ ಜ್ಞಾಪಕ ಪತ್ರಕ್ಕೆ ಉಭಯ ದೇಶಗಳ ಸಹಿ, ಮಹತ್ವದ ಅಂಶಗಳಿವು;

ವರದಿ /ಚಿತ್ರ:ಸಂತೋಷ್ ಕುಲಾಲ್ ನೆತ್ತರಕೆರೆ

ವಾಷಿಂಗ್ಟನ್ ಡಿಸಿ(ಯುಎಸ್): ಪಶ್ಚಿಮ ಏಷ್ಯಾ ಸಂಘರ್ಷ ನಿಲ್ಲಿಸಿ, ಜಾಗತಿಕ ವ್ಯಾಪಾರ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತರೆಯುವ ವಿಚಾರವಾಗಿ ಮಹತ್ವದ ಬೆಳವಣಿಗೆ ನಡೆದಿದೆ. ಈ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ 14 ಅಂಶಗಳ ಒಪ್ಪಂದಕ್ಕೆ ಸಹಿ ಹಾಕಿವೆ.ಇದರಲ್ಲಿ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದು, ಇತರೆ ನಿರ್ಬಂಧಗಳ ತೆರವು ಮತ್ತು ಇರಾನಿನ ಪರಮಾಣು ಕಾರ್ಯಕ್ರಮಗಳ ಬಗ್ಗೆ ಅಂತಿಮ ಒಪ್ಪಂದದ ಮಾತುಕತೆ ನಡೆಸಲು 60 ದಿನಗಳ ಪ್ರಕ್ರಿಯೆ ಪ್ರಾರಂಭಿಸುವ ಅಂಶಗಳಿವೆ. ಈ ಅಂಶಗಳ ಜ್ಞಾಪಕ ಪತ್ರ(MoU)ಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಸಹಿ ಹಾಕಿದ್ದಾರೆ.

ಶ್ವೇತಭವನದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರಕಾರ, ಟ್ರಂಪ್ ಬುಧವಾರ ಪ್ಯಾರಿಸ್‌ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ವೈಯಕ್ತಿಕವಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪೆಜೆಶ್ಕಿಯನ್ ಅವರೂ ಕೂಡಾ ಸಹಿ ಮಾಡಿರುವ, ಈ ಒಪ್ಪಂದ ತಕ್ಷಣವೇ ಜಾರಿಗೆ ಬಂದಿದೆ.ಇದು ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮರು ತೆರೆಯುವ, ಇರಾನ್‌ನ ಪುಷ್ಟೀಕರಿಸಿದ ಯುರೇನಿಯಂ ಸಂಗ್ರಹವನ್ನು ಪರಿಹರಿಸುವ ಮತ್ತು ಹಂತ ಹಂತದ ಆರ್ಥಿಕ ಪರಿಹಾರಕ್ಕಾಗಿ ಚೌಕಟ್ಟು ರಚಿಸುವ ಕಾರ್ಯವಿಧಾನ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಪ್ರತಿಕ್ರಿಯಿಸಿ, ಜ್ಞಾಪಕ ಪತ್ರ(MoU)ದ ಪಠ್ಯ ಅಂತಿಮಗೊಂಡಿದೆ. ಎರಡೂ ಕಡೆಯವರು ಸಹಿ ಮಾಡಿದ್ದಾರೆ ಎಂದು ಖಚಿತಪಡಿಸಿದರು.

ಹಾರ್ಮುಜ್ ಜಲಸಂಧಿಯನ್ನುನಿರ್ವಹಿಸುವ ವ್ಯವಸ್ಥೆಗಳನ್ನು ಹೆಚ್ಚಾಗಿ ನಾವು ಒಪ್ಪಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.ಜ್ಞಾಪಕ ಪತ್ರದಲ್ಲಿ ಲೆಬನಾನ್ ಸೇರಿದಂತೆ ಇತರೆಡೆಯ ಸೇನಾ ಕಾರ್ಯಾಚರಣೆಗಳನ್ನು ತಕ್ಷಣ ಶಾಶ್ವತವಾಗಿ ನಿಲ್ಲಿಸುವುದು, ಪರಸ್ಪರ ಒಪ್ಪಿಗೆಯಿಂದ ಅಂತಿಮ ಒಪ್ಪಂದದ ಕುರಿತು ಮಾತುಕತೆಗಳನ್ನು ಮುಗಿಸುವ ಪ್ರತಿಜ್ಞೆ ಇದೆ.ಇರಾನ್ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನ ಹಾಗು ಇತರೆ ನಿರ್ಬಂಧಗಳನ್ನು ತೆಗೆದುಹಾಕಲಿದೆ. ಇರಾನ್ ಆರಂಭಿಕ 60 ದಿನಗಳ ಅವಧಿಗೆ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸುರಕ್ಷಿತ ಸಾಗಣೆಗೆ ಅನುಕೂಲ ಮಾಡಿಕೊಡಲಿದೆ.

ಒಟ್ಟಾರೆ ಹಂತಹಂತವಾಗಿ ಇರಾನ್ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕುವುದು, ಫ್ರೀಜ್ ಮಾಡಿರುವ ಇರಾನ್‌ನ ಆಸ್ತಿಗಳನ್ನು ಬಿಡುಗಡೆ ಮಾಡುವುದು, ಇರಾನಿನ ತೈಲ ರಫ್ತಿಗೆ ಅನುಕೂಲ ಮಾಡಿಕೊಡುವುದು ಮತ್ತು ಕನಿಷ್ಠ 300 ಬಿಲಿಯನ್ ಡಾಲರ್ ವೆಚ್ಚದಲ್ಲಿ ಇರಾನ್‌ಗೆ ಯುಎಸ್ ಬೆಂಬಲಿತ ಪುನರ್ನಿರ್ಮಾಣ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮದ ವಿಚಾರಗಳೂ ಇವೆ.ಒಪ್ಪಂದದಂತೆ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದು ಅಥವಾ ಖರೀದಿಸುವುದಕ್ಕೆ ಸಾಧ್ಯವಿಲ್ಲ. ಇದನ್ನು ಆ ದೇಶ ಒಪ್ಪಿಕೊಂಡಿದೆ. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಮೇಲ್ವಿಚಾರಣೆಯಲ್ಲಿ ಇರಾನ್‌ನ ಪುಷ್ಟೀಕರಿಸಿದ ಯುರೇನಿಯಂ ದಾಸ್ತಾನುಗಳ ಕುರಿತು ಚರ್ಚೆ ನಡೆಯುವ ವಿಚಾರಗಳು ಒಪ್ಪಂದದಲ್ಲಿವೆ.

Related posts

ಅಸಂಖ್ಯಾತ ಜೀವಗಳನ್ನು ಸ್ಪರ್ಶಿಸಿದ ಪುಣ್ಯಾತ್ಮ ಕಾಂತಾಡಿಗುತ್ತು ಉಗ್ಗ ಶೆಟ್ಟಿ ಚಿರಶಾಂತಿಯಲಿ;

Voiceoftulunadu

ಮೂಡುಶೆಡ್ಡೆಯ ಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ದೇವಸ್ಥಾನಕ್ಕೆ ಶಿಲಾನ್ಯಾಸಪಾವನ ಕ್ಷೇತ್ರಗಳ ಜೀರ್ಣೊದ್ಧಾರ ಅಗತ್ಯವಾಗಿವೆ : ಸಂಸದ ಡಾ| ಶ್ರೀಕಾಂತ್ ಏಕನಾಥ ಶಿಂಧೆ ;

Voiceoftulunadu

ಕೇರಳದ ಕೊಟ್ಟಿಯೂರು ಶಿವಕ್ಷೇತ್ರದ ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ

voiceoftulunadu

Leave a Comment