28.5 C
ಮಂಗಳೂರು
September 4, 2026
Uncategorizedಆರೋಗ್ಯಜಿಲ್ಲಾ ಸುದ್ದಿಫ್ಯಾಷನ್/ಬ್ಯೂಟಿ ಝೋನ್ರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸ್ಥಳೀಯ/ಪ್ರಾದೇಶಿಕ ಸುದ್ದಿ

ಆಗಸ್ಟ್ 13 ಕ್ಕೆ ಮಂಗಳೂರಿನಲ್ಲಿ ಆರಂಭವಾಗಲಿದೆ ಅಂತಾರಾಷ್ಟ್ರೀಯ ಮಟ್ಟದ ‘ಡೋಲ್ವೆ 2′(Dolce Estetica)ಹೊಸ ಸೌಂದರ್ಯ ಚಿಕಿತ್ಸಾ ಕೇಂದ್ರ ಟ್ರ್ಯಾಂಡ್ ಎಂಟ್ರಿ!

ಮಂಗಳೂರು: ಸುದೀರ್ಘ ಆರೋಗ್ಯಕ್ಕೆ ಪೂರಕ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಂದರ್ಯ ಚಿಕಿತ್ಸಾ ಸಂಸ್ಥೆಯಾಗಿರುವ ಆರೋಗ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ‘ಡೋಲ್ವೆ ಎಸ್ಥೆಟಿಕಾ’ ಕರ್ನಾಟಕದ ತನ್ನ ಮೊದಲ ಶಾಖೆಯನ್ನು ಮಂಗಳೂರಿನಲ್ಲಿ ಆರಂಭಿಸಲಿದೆ. ಆ.13ರಂದು ಬೆಳಗ್ಗೆ 10.30ಕ್ಕೆ ಪದವಿನಂಗಡಿಯ ವಿಶ್ವಗೀತಾ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಳ್ಳಲಿದೆ.

ಸೋಮವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವೈದ್ಯಕೀಯ ನಿರ್ದೇಶಕ ಡಾ| ಜೋಸೆಫ್ ಥಾಮಸ್, ಜನರು ಹೆಚ್ಚು ಆರೋಗ್ಯಕರವಾಗಿ, ಹೆಚ್ಚು ವರ್ಷಗಳ ಕಾಲ ಆತ್ಮವಿಶ್ವಾಸದಿಂದ ಬದುಕಲು ನೆರವಾಗುವುದು ಸಂಸ್ಥೆಯ ಧೈಯವಾಗಿದೆ. ಆರೋಗ್ಯ ಸಮಸ್ಯೆಗಳು ಉಂಟಾಗುವ ಮುನ್ನ ಅವುಗಳನ್ನು ತಡೆಯುವುದೇ ಅತ್ಯಂತ ಪರಿಣಾಮಕಾರಿಯಾಗಿದ್ದು, ಇದನ್ನು ಸಂಸ್ಥೆ ಮಾಡಲಿದೆ.ಕೇಂದ್ರದಲ್ಲಿ

ಸೋಮವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವೈದ್ಯಕೀಯ ನಿರ್ದೇಶಕ ಡಾ| ಜೋಸೆಫ್ ಥಾಮಸ್, ಜನರು ಹೆಚ್ಚು ಆರೋಗ್ಯಕರವಾಗಿ, ಹೆಚ್ಚು ವರ್ಷಗಳ ಕಾಲ ಆತ್ಮವಿಶ್ವಾಸದಿಂದ ಬದುಕಲು ನೆರವಾಗುವುದು ಸಂಸ್ಥೆಯ ಧೈಯವಾಗಿದೆ. ಆರೋಗ್ಯ ಸಮಸ್ಯೆಗಳು ಉಂಟಾಗುವ ಮುನ್ನ ಅವುಗಳನ್ನು ತಡೆಯುವುದೇ ಅತ್ಯಂತ ಪರಿಣಾಮಕಾರಿಯಾಗಿದ್ದು, ಇದನ್ನು ಸಂಸ್ಥೆ ಮಾಡಲಿದೆ.

ಕೇಂದ್ರದಲ್ಲಿಕೃತಕ ಬುದ್ಧಿಮತ್ತೆ ಆಧಾರಿತ ಆರೋಗ್ಯ ಮೌಲ್ಯಮಾಪನ, ಡಿಜಿಟಲ್ ಆರೋಗ್ಯ ದಾಖಲೆಗಳು, ಅತ್ಯಾಧುನಿಕ ರೋಗ ನಿರ್ಣಯ ಸಾಧನಗಳು ಹಾಗೂ ವೈದ್ಯಕೀಯವಾಗಿ ಅಗತ್ಯವಿದ್ದಲ್ಲಿ ಜಿನೋಮಿಕ್ ವೈದ್ಯಕೀಯ ಸೇವೆಗಳು ಲಭ್ಯವಿದ್ದು, ಇವೆಲ್ಲವೂ ಪರಿಣಿತ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.

ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಾರ್ಜ್ ಮ್ಯಾಲ್ಯೂ ಮಾತನಾಡಿ, ಡೋಲ್ವೆ ಎಸ್ಥೆಟಿಕಾ ಕೇರಳ ಮೂಲದ ಸಂಸ್ಥೆಯಾಗಿದ್ದು, ಯು.ಕೆ. ಯಲ್ಲಿ ನೋಂದಣಿಯಾಗಿದೆ. ಸಂಸ್ಥೆಯ ವಿಸ್ತರಣೆಯು ದಕ್ಷಿಣ ಭಾರತವನ್ನು ಕೇಂದ್ರೀಕರಿಸಿದ್ದು, ಮಂಗಳೂರಿನ ಮೂಲಕ ದಕ್ಷಿಣ ಭಾರತದ ಮೊದಲ ಶಾಖೆಯನ್ನು ಆರಂಭಿಸಲಾಗುತ್ತಿದೆ.ಮುಂದಕ್ಕೆ

ಬೆಂಗಳೂರು, ಮೈಸೂರು, ಕೊಯಮತ್ತೂರು, ಚೆನ್ನೈ, ತಿರುಪೂರು,

ಪುದುಚೇರಿ, ಕೊಚ್ಚಿ, ಕೋಯಿಕ್ಕೋಡ್, ತಿರುವನಂತಪುರ, ಪಾಲಾ, ಚರ್ತಲಾ ಹಾಗೂ ಪೆರಿಂತಲ್ಮಣ್ಣ ನಗರದಲ್ಲಿ ಹೊಸ ಕೇಂದ್ರಗಳನ್ನು ಆರಂಭಿಸುವ ಯೋಜನೆ ಹೊಂದಿದೆ. ಸಂಸ್ಥೆಯ ವಿಸ್ತರಣೆಗಾಗಿ ಕಂಪೆನಿ ಮಾಲಕತ್ವ- ಕಂಪೆನಿ ನಿರ್ವಹಣೆ (ಸಿಒಸಿಒ) ಹಾಗೂ ಫ್ರಾಂಚೈಸಿ ಮಾಲಕತ್ವ – ಕಂಪೆನಿ ನಿರ್ವಹಣೆ (ಎಫ್ ಒಸಿಒ) ಮಾದರಿಗಳನ್ನು ಅನುಸರಿಸುತ್ತಿದೆ.
ಇದರಿಂದಾಗಿ ಪ್ರತಿಯೊಂದು ಕೇಂದ್ರದಲ್ಲೂ ಒಂದೇ ರೀತಿಯ ವೈದ್ಯಕೀಯ ಗುಣಮಟ್ಟ, ಕಾರ್ಯನಿರ್ವಹಣೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದರು.ಕ್ಲಿನಿಕ್ ನ ಮುಖ್ಯ ವೈದ್ಯ ಡಾ| ಅಕ್ಷತ್ ಆಚಾರ್ಯ ಮಾತನಾಡಿ, ಆ.13ರಂದು ಶಾಖೆಗೆ ಆಗಮಿಸುವವರಿಗೆ ಆಯ್ದ ಚಿಕಿತ್ಸೆಗಳ ಮೇಲೆ ವಿಶೇಷ ಉದ್ಘಾಟನಾ ರಿಯಾಯಿತಿ ಆಫರ್ ದೊರೆಯಲಿದೆ.
ಸಮಾರಂಭಕ್ಕೆ ಮೊದಲು ಬರುವ 100 ಮಂದಿಗೆ ಎಐ ಫೇಸ್ ಅನಲೈಸರ್ ಪರೀಕ್ಷೆ ಉಚಿತವಾಗಿ ಮಾಡಲಾಗುವುದು ಎಂದರು. ವ್ಯವಹಾರ ಅಭಿವೃದ್ಧಿ ಮುಖ್ಯಸ್ಥ ಜಿಜೋ ಮ್ಯಾಥ್ಯ, ಕ್ಲಿನಿಕ್ ಹೆಡ್ ಭರತ್‌ ಉಪಸ್ಥಿತರಿದ್ದರು.

Related posts

ಅಗರಿ ಎಂಟರ್‌ಪ್ರೈಸಸ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅಫ‌ರ್ ಪ್ರಾರಂಭ ;

Voiceoftulunadu

ಪುತ್ತೂರು ವಲಯ ಸಂಚಾಲಕರಾಗಿ ಮನೋಹರ ರೈ, ಮನವಳಿಕೆ ಗುತ್ತು, ನೇಮಕ ;

Voiceoftulunadu

ಮಹಿಳಾ ಸಮಾಜ ಮಣಿಪಾಲದಿಂದ ಸಂಸ್ಥಾಪಕರ ದಿನಾಚರಣೆ: ಶ್ರೀಮತಿ ಶಾರದಾ ಎಂ. ಪೈ ಹಾಗೂ ಡಾ. ಎ. ಪದ್ಮರಾವ್ ಅವರ ಸ್ಮರಣಾರ್ಥ ಸಂಸ್ಥಾಪಕರ ದಿನಾಚರಣೆ ;

Voiceoftulunadu

Leave a Comment