September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಆ.09: ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರದಲ್ಲಿತುಳುನಾಡಿನ ಮರೆಯಾಗುತ್ತಿರುವ ಸಂಸ್ಕೃತಿ-ಸಂಪ್ರದಾಯದ ವಿಚಾರ ಸಂಕಿರಣ ;

ವರದಿ /ಚಿತ್ರ :ರೋನ್ಸ್ ಬಂಟ್ವಾಳ್

ಮುಂಬಯಿ, ಆ.05: ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರ, ಸಂಚಯಗಿರಿ (ಬಿ.ಸಿ.ರೋಡ್) ಹಾಗೂ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಇಎಫ್‌ಎ) ಸಹಯೋಗದಲ್ಲಿ ತುಳುನಾಡುನಲ್ಲಿ ಮರೆಯಾಗುತ್ತಿರುವ ಆಹಾರ ಸಂಸ್ಕೃತಿ ಎಂಬ ವಿಷಯದ ಕುರಿತು ವಿಶೇಷ ವಿಚಾರ ಸಂಕಿರಣವು ಇದೇ ಆಗಸ್ಟ್ 09ರ (ಭಾನುವಾರ) ಬೆಳಿಗ್ಗೆ 9:30ರಿಂದ ಸಂಜೆ 5:30ರ ವರೆಗೆ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ.

ಈ ಯೋಜನೆಗೆ ಟಾಟಾ ಟ್ರಸ್ಟ್‌ಸ್‌ನ ಸಹಯೋಗದಲ್ಲಿ ನಡೆಯಲಿದೆ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರದ ಸಂಸ್ಥಾಪಕರು ಮತ್ತು ಮುಖ್ಯ ನವೀನ್ಯತಾ ಚಿಂತಕ ಪ್ರೊ| ಡಾ| ತುಕಾರಾಮ್ ಪೂಜಾರಿ ತಿಳಿಸಿದ್ದಾರೆ.ಆಹಾರ ಸಂಸ್ಕೃತಿಯ ಆಳವಾದ ಅಧ್ಯಯನ:ಆಹಾರವು ಪ್ರತಿಯೊಬ್ಬ ಜೀವಿಯ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಾನವ ವಿಕಾಸದ ಇತಿಹಾಸವನ್ನು ಅಧ್ಯಯನ ಮಾಡಿದ ವಿಜ್ಞಾನಿಗಳ ಪ್ರಕಾರ, ಆಹಾರದ ಅನ್ವೇಷಣೆಯೇ ಮಾನವನನ್ನು ಬೇಟೆಗಾರ ಜೀವನದಿಂದ ಕೃಷಿ ಆಧಾರಿತ ನೆಲೆಸಿದ ಸಮಾಜವಾಗಿ ರೂಪುಗೊಳ್ಳಲು ಕಾರಣವಾಯಿತು.

ನಾಗರಿಕತೆಗಳ ಬೆಳವಣಿಗೆಯೊಂದಿಗೆ ಆಹಾರ ಉತ್ಪಾದನೆ, ವ್ಯಾಪಾರ ಮತ್ತು ವಿವಿಧ ಸಂಸ್ಕೃತಿಗಳ ನಡುವಿನ ಸಂಪರ್ಕ ಹೆಚ್ಚಾಗಿ, ವಿಭಿನ್ನ ಆಹಾರ ಪದ್ಧತಿಗಳ ವಿನಿಮಯಕ್ಕೂ ದಾರಿಯಾಯಿತು. ಭಾರತವು ವೈವಿಧ್ಯಮಯ ಆಹಾರ ಸಂಸ್ಕೃತಿಗಳ ನಾಡಾಗಿದ್ದು, ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿಶಿಷ್ಟ ಪಾಕಪದ್ಧತಿಯನ್ನು ಹೊಂದಿದೆ.

ಪಶ್ಚಿಮ ಘಟ್ಟಗಳು, ಅರಬ್ಬಿ ಸಮುದ್ರ, ಆರು ತಿಂಗಳ ಮಳೆಗಾಲ ಹಾಗೂ ಅನೇಕ ನದಿಗಳ ಆಶೀರ್ವಾದ ಪಡೆದ ತುಳುನಾಡಿನಲ್ಲಿ ವರ್ಷಕ್ಕೆ ಮೂರು ಬಾರಿ ಭತ್ತ ಬೆಳೆಯುವುದರಿಂದ ಅಕ್ಕಿಯೇ ಪ್ರಮುಖ ಆಹಾರವಾಗಿದೆ.

ತುಳುನಾಡಿನ ಆಹಾರ ವೈವಿಧ್ಯಕಾಲಕ್ರಮೇಣ ಈ ಪ್ರದೇಶಕ್ಕೆ ವಲಸೆ ಬಂದ ವಿವಿಧ ಸಮುದಾಯಗಳು, ಪೋರ್ಚುಗೀಸರು, ಬ್ರಿಟಿಷರ ಪ್ರಭಾವ, ಭೂಸುಧಾರಣಾ ಕ್ರಮಗಳು ಹಾಗೂ ಆಧುನಿಕ ಬೇಕರಿಗಳು, ಹೋಟೆಲ್ಗಳು ಮತ್ತು ಪ್ಯಾಕೇಜ್ ಆಹಾರ ಸಂಸ್ಕೃತಿಯ ಬೆಳವಣಿಗೆಯಿಂದ ತುಳುನಾಡಿನ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬಂದಿವೆ.

ತುಳು ತಿಂಗಳಾದ ಕರ್ಕಾಟಕ (ಆಟಿ) ಅವಧಿಯಲ್ಲಿ ಎದುರಾಗುತ್ತಿದ್ದ ಆಹಾರದ ಕೊರತೆಯನ್ನು ಎದುರಿಸಲು ಬೇಸಿಗೆಯಲ್ಲಿಯೇ ಹಣ್ಣು-ತರಕಾರಿಗಳನ್ನು ಸಂರಕ್ಷಿಸುವುದು, ಸ್ಥಳೀಯ ಸೊಪ್ಪು ಹಾಗೂ ಕಾಡು ಸಸ್ಯಗಳನ್ನು ಬಳಸಿಕೊಂಡು ಪೌಷ್ಟಿಕ ಆಹಾರ ತಯಾರಿಸುವ ವಿಶಿಷ್ಟ ಸಂಪ್ರದಾಯವನ್ನು ತುಳುವರು ಬೆಳೆಸಿಕೊಂಡಿದ್ದಾರೆ.

ಈ ವಿಚಾರ ಸಂಕಿರಣವು ಕೇವಲ ಆಹಾರೋತ್ಸವವಲ್ಲ; ಆಹಾರದ ಇತಿಹಾಸ, ಪರಿಸರ, ಸಂಸ್ಕೃತಿ, ಸಾಂಪ್ರದಾಯಿಕ ಅಡುಗೆ ಪಾತ್ರೆಗಳು ಹಾಗೂ ಆರೋಗ್ಯದ ಜ್ಞಾನವನ್ನು ಸಮಗ್ರವಾಗಿ ಪರಿಚಯಿಸುವ ಪ್ರಯತ್ನವಾಗಿದೆ.ಸಂಶೋಧನಾ ಯೋಜನೆಯ ಭಾಗಈ ಕಾರ್ಯಕ್ರಮವು ಅರವಿಂದ್ ಕೆ. ಅವರ ಪರಿಕಲ್ಪನೆಯಡಿ, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಇಎಫ್‌ಎ) ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಆರ್ಕೈವ್ಸ್ ಮತ್ತು ಮ್ಯೂಸಿಯಂಸ್ ಯೋಜನೆಯ ಭಾಗವಾಗಿದೆ.

ರಾಣಿ ಅಬ್ಬಕ್ಕ ತುಳು ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿರುವ ದೈನಂದಿನ ಬಳಕೆಯ ವಸ್ತುಗಳ ಮೂಲಕ ತುಳುವರ ಕೃಷಿ ಪದ್ಧತಿ, ಆಹಾರ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಅಡುಗೆ ಪಾತ್ರೆಗಳ ಮಹತ್ವವನ್ನು ದಾಖಲಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.ಕಳೆದ ಮೂರು ದಶಕಗಳಿಂದ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರವು ತುಳುನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ದೈನಂದಿನ ಬಳಕೆಯ ವಸ್ತುಗಳ ಮೂಲಕ ದಾಖಲಿಸಿ ಸಂರಕ್ಷಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದು, ಈ ಸಂಸ್ಥೆಯ ಸ್ಥಾಪಕರಾದ ಡಾ. ತುಕರಾಮ ಪೂಜಾರಿ ಅವರ ಕನಸಿನ ಕೂಸಾಗಿದೆ.

ಉದ್ಘಾಟನಾ ಸಮಾರಂಭಬೆಳಿಗ್ಗೆ 09:30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್‌ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಮೆನಕಾ ರೋಡ್ರಿಗಸ್ ಹಾಗೂ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರದ ಸಂಸ್ಥಾಪಕ ಡಾ| ತುಕರಾಮ ಪೂಜಾರಿ ಉಪಸ್ಥಿತರಿದ್ದು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಪ್ರೊ| ಬಿ.ಶಿವರಾಮ ಶೆಟ್ಟಿ ಅವರು ಮುಖ್ಯ ಉಪನ್ಯಾಸ ನೀಡಲಿದ್ದಾರೆ.ಮೊದಲ ಅಧಿವೇಶನ ತುಳುವ ಸಮಾಜ ಮತ್ತು ಆಹಾರ ಸಂಸ್ಕೃತಿಬೆಳಿಗ್ಗೆ ೧೧ ಗಂಟೆಗೆ ನಡೆಯುವ ಮೊದಲ ಅಧಿವೇಶನದಲ್ಲಿ ತುಳುನಾಡಿನ ಆಹಾರ ಸಂಸ್ಕೃತಿಯ ವೈಶಿಷ್ಟ್ಯ, ಸ್ಥಳೀಯ ಆಹಾರ ಸಂಗ್ರಹಣೆ, ಕೃಷಿ ಹಾಗೂ ಸಂರಕ್ಷಣಾ ಪದ್ಧತಿಗಳ ಕುರಿತು ಚರ್ಚೆ ನಡೆಯಲಿದೆ.

ಈ ಅಧಿವೇಶನದಲ್ಲಿ ಕಾಸರಗೋಡು ಗಡಿನಾಡಿನ ಲೇಖಕಿ ಹಾಗೂ ಸಂಶೋಧಕಿ ರಾಜಶ್ರೀ ಟಿ.ರೈ ಪೆರ್ಲ ಅವರು ತುಳುವರ ಆಹಾರ ಸಂಪ್ರದಾಯದ ಕುರಿತು ಮಾತನಾಡಲಿದ್ದು, ಯೂಟ್ಯೂಬ್ನಲ್ಲಿ ಜನಪ್ರಿಯ ಅಡುಗೆ ವಾಹಿನಿ ನಡೆಸುತ್ತಿರುವ ಆಹಾರ ತಜ್ಞ ಸುದರ್ಶನ ಭಟ್ ಬೇಡ್ರಾಡಿ ಅವರು ಸಾಂಪ್ರದಾಯಿಕ ಅಡುಗೆ ವಿಧಾನಗಳು ಹಾಗೂ ಪ್ರಾದೇಶಿಕ ಪಾಕವೈವಿಧ್ಯವನ್ನು ಪರಿಚಯಿಸಲಿದ್ದಾರೆ.

ಎರಡನೇ ಅಧಿವೇಶನ ತುಳುವ ಸಂಸ್ಕೃತಿಯಲ್ಲಿ ಅಡುಗೆ ಪಾತ್ರೆಗಳ ಮಹತ್ವಮಧ್ಯಾಹ್ನ 02 ಗಂಟೆಗೆ ನಡೆಯುವ ಎರಡನೇ ಅಧಿವೇಶನದಲ್ಲಿ ಮಣ್ಣಿನ ಪಾತ್ರೆಗಳು, ಲೋಹದ ಪಾತ್ರೆಗಳು, ಉಪ್ಪಿನಕಾಯಿ ಸಂಗ್ರಹಿಸಲು ಬಳಸುವ ಪಿಂಗಾಣಿ ಪಾತ್ರೆಗಳು ಸೇರಿದಂತೆ ತುಳುನಾಡಿನ ಸಾಂಪ್ರದಾಯಿಕ ಅಡುಗೆ ಪಾತ್ರೆಗಳ ಮಹತ್ವ ಹಾಗೂ ಅವುಗಳ ಸಾಂಸ್ಕೃತಿಕ ಹಿನ್ನೆಲೆಯ ಕುರಿತು ಚರ್ಚೆ ನಡೆಯಲಿದೆ.

ದೃಶ್ಯ ಕಲಾವಿದ, ಅಡುಗೆ ಪರಿಣಿತ ಹಾಗೂ ಪುರಾತನ ವಸ್ತುಗಳ ಸಂಗ್ರಾಹಕರಾದ ಪುರುಷೋತ್ತಮ ಅಡ್ವೆ ಅವರು ಈ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.ಮೂರನೇ ಅಧಿವೇಶನ ಆಧುನಿಕ ಯುಗದಲ್ಲಿ ಆಹಾರ ಮತ್ತು ಆರೋಗ್ಯಮಧ್ಯಾಹ್ನ ೩.೩೦ಕ್ಕೆ ನಡೆಯುವ ಮೂರನೇ ಅಧಿವೇಶನದಲ್ಲಿ ಬದಲಾಗುತ್ತಿರುವ ಜೀವನಶೈಲಿಯಲ್ಲಿ ಆಹಾರ ಮತ್ತು ಆರೋಗ್ಯದ ಸಂಬಂಧ, ಸ್ಥಳೀಯ ಹಾಗೂ ಋತುಮಾನಕ್ಕೆ ಅನುಗುಣವಾದ ಆಹಾರದ ಪೌಷ್ಟಿಕತೆ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿಯ ಆರೋಗ್ಯಕರ ಅಂಶಗಳ ಕುರಿತು ಚರ್ಚೆ ನಡೆಯಲಿದೆ.

ಬೆಳ್ತಂಗಡಿ ಅಲ್ಲಿನ ಪ್ರಸನ್ನ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಶಲ್ಯತಂತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಖ್ಯಾತ ಆಯುರ್ವೇದ ವೈದ್ಯರಾದ ಡಾ| ಸುಪ್ರೀತ್ ಜೆ.ಲೋಬೋ ಅವರು ಈ ಕುರಿತು ಉಪನ್ಯಾಸ ನೀಡಲಿದ್ದಾರೆ.ತುಳುವ ಸಂಸ್ಕೃತಿಯ ಅಮೂಲ್ಯ ಭಂಡಾರರಾಣಿ ಅಬ್ಬಕ್ಕ ಕಲಾ ಗ್ಯಾಲರಿ ಹಾಗೂ ತುಳು ಬದುಕು ವಸ್ತು ಸಂಗ್ರಹಾಲಯಕ್ಕಾಗಿ ಪ್ರಸಿದ್ಧವಾಗಿರುವ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರವು ತುಳುವ ಸಂಸ್ಕೃತಿಗೆ ಸಂಬಂಧಿಸಿದ ದೇಶದ ಏಕೈಕ ಜನಾಂಗಶಾಸ್ತ್ರೀಯ (Ethnographic) ಸಂಗ್ರಹಾಲಯವಾಗಿದೆ.

ಸ್ಥಾಪಕರಾದ ಡಾ| ತುಕರಾಮ ಪೂಜಾರಿ ಅವರ ವೈಯಕ್ತಿಕ ಸಂಗ್ರಹದಿಂದ ಆರಂಭವಾದ ಈ ಸಂಸ್ಥೆ ಇಂದು ತುಳುವರ ಇತಿಹಾಸ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಪ್ರತಿಬಿಂಬಿಸುವ ಸಾವಿರಾರು ಅಪರೂಪದ ವಸ್ತುಗಳನ್ನು ಒಳಗೊಂಡ ಮಹತ್ವದ ಅಧ್ಯಯನ ಕೇಂದ್ರವಾಗಿ ಬೆಳೆದಿದೆ.ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್‌ಸ್ (ಇಎಫ್‌ಎ) ದೇಶವ್ಯಾಪಿ ಸ್ವತಂತ್ರ ಲಾಭರಹಿತ ಸಂಸ್ಥೆಯಾಗಿದ್ದು, ಕಲೆ, ಸಂಸ್ಕೃತಿ, ಸಂಶೋಧನೆ, ಶಿಕ್ಷಣ, ಆರ್ಕೈವ್ಸ್ ಹಾಗೂ ಮ್ಯೂಸಿಯಂ ಕ್ಷೇತ್ರಗಳಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.

1993ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಭಾರತೀಯ ಭಾಷೆಗಳಲ್ಲಿನ ಸಂಶೋಧನೆ ಹಾಗೂ ಸಾಂಸ್ಕೃತಿಕ ದಾಖಲಾತಿಗಳಿಗೆ ವಿಶೇಷ ಉತ್ತೇಜನ ನೀಡುತ್ತಿದೆ.ಅರವಿಂದ್ ಕೆ. ಅವರ ಪರಿಕಲ್ಪನೆಯ ಈ ಯೋಜನೆ, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಇಎಫ್‌ಎ) ಹಾಗೂ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರ ಸಹಯೋಗದಲ್ಲಿ, ಟಾಟಾ ಟ್ರಸ್ಟ್ ನ ಆಥಿsಕ ಸಹಕಾರದೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಮಹತ್ವದ ಸಾಂಸ್ಕೃತಿಕ ಉಪಕ್ರಮವಾಗಿದೆ ಎಂದು ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರದ ಕಾರ್ಯದರ್ಶಿ ಮತ್ತು ಮುಖ್ಯ ನವೀನ್ಯತಾ ನಾಯಕಿ ಡಾ| ಆಶಾಲತಾ ಸುವರ್ಣ ತಿಳಿಸಿದ್ದಾರೆ

Related posts

ಎಥೆನಾಲ್‌ ಅಪಪ್ರಚಾರ| ಮೆಟಾ, ಇನ್‌ಫ್ಲುಯೆನ್ಸರ್‌ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಗಡ್ಕರಿ;

Voiceoftulunadu

ಅವಳಿ ಮಕ್ಕಳ ಅಪೂರ್ವ ಸಾಧನೆ: ದಾಖಲೆ ಪುಸ್ತಕ ಸೇರಿದ ಪುಟ್ಟ ಪ್ರತಿಭೆಗಳು ;

Voiceoftulunadu

ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಆವರಣದಲ್ಲಿ ವನಮಹೋತ್ಸವ :ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ವೈ ಸುಧೀ‌ರ್ ಕುಮಾರ್ ;

Voiceoftulunadu

Leave a Comment