ವರದಿ /ಚಿತ್ರ: ಈ ಮೀಡಿಯಾ
ಉಡುಪಿ / ಕುಂತಲ ನಗರ: ಆಟಿ ನಮಗೆ ಶಕ್ತಿ ತುಂಬುವ ಕಾಲವಾಗಿದೆ. ಆಹಾರ ಅಂದು ಹಿರಿಯರು ಆರೋಗ್ಯಯುತ ಸೇವಿಸಿ ಸದೃಢರಾಗಿ, ಅನಾರೋಗ್ಯದಿಂದ ದೂರವಿದ್ದರು. ಇಂದು ಮದ್ದುಗಳು ತಿನಿಸುಗಳಾದ ಕಾಲದಲ್ಲಿ ತಿನಿಸುಗಳೇ ಮದ್ದಾಗುವ ಕಾಲ ಬರಬೇಕು ಎಂದು ಕಟೀಲು ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹೇಳಿದರು.
ವತಿಯಿಂದ ಅವರು ಭನುವಾರ ಉಡುಪಿ ಗ್ರಾಮೀಣ ಬಂಟರ ಸಂಘದ ಕುಂತಳನಗರ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಸನ್ ಸಭಾಂಗಣದಲ್ಲಿ ಜರಗಿದ ఆటింజి ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ಭಾಷೆ ತುಳುವಿನ ಬಗೆಗೂ ನಮಗೆ ಅಭಿಮಾನವಿರಬೇಕು. ತುಳುನಾಡಿನ ಕಲರಿ ಮೊದಲ ಸಮರ ಕಲೆಯಾಗಿದೆ. ತುಳುನಾಡಿನಲ್ಲಿ ವೃತ್ತಿ ಆಧಾರಿತವಾಗಿ ಜಾತಿ ವ್ಯವಸ್ಥೆ ಇತ್ತು. ನಮ್ಮ ತುಳುನಾಡಿನ ಗತ ವೈಭವ ಸಾರುವ ಕುರುಹುಗಳ ಬಗೆಗೆ ಬೆಳಕು ಚೆಲ್ಲಬೇಕಾಗಿದೆ ಎಂದರು.
ಉಡುಪಿ ಗ್ರಾಮೀಣ ಬಂಟರಸಂಘ ದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ ಕುಮಾರ ಶೆಟ್ಟಿ ಮಾತನಾಡಿ, ಪ್ರಸ್ತಾವಿಕವಾಗಿ ಆರೋಗ್ಯ ಶಿಕ್ಷಣ ಸಾಮಾಜಿಕ ಕ್ಷೇತ್ರದಲ್ಲಿ ಉಡುಪಿ ಗ್ರಾಮೀಣ ಬಂಟರ ಸೇವೆ ನಿರಂತರವಾಗಿದೆ. ಒಂದು ಸಾವಿರ ಸದಸ್ಯರು ನಮ್ಮ ಸಂಘದಲ್ಲಿದ್ದಾರೆ. ಆರ್ಥಿಕವಾಗಿ ವಿದ್ಯಾರ್ಥಿಗಳಿಗೆ ಮನೆಕಟ್ಟಲು ಸಾವಿರಾರು ಕೌಶಲ್ಯಾಭಿವೃದ್ಧಿ ಹಿಂದುಳಿದ ವಿದ್ಯಾರ್ಥಿವೇತನ, ಸಹಾಯ ಸಹಿತ ವಿದ್ಯಾರ್ಥಿಗಳಿಗೆ ನೀಡಲಾಗಿದೆ.
4 ವರ್ಷದಲ್ಲಿ ಗ್ರಾಮೀಣ ಭಾಗದ ಕುಂತಳನಗರದಲ್ಲಿ ಉದ್ಯೋಗ ಮೇಳ ಆಯೋಜಿಸಿ, ಸುಮಾರು 3,700 ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸಿದೆ. ಆಗಸ್ಟ್ 9 ರಂದು 5 ನೇ ಉದ್ಯೋಗ ಮೇಳ ನಡೆಯಲಿದೆ. ಇದರ ಜೊತೆಗೆ ಆಟಿಯನ್ನು ಪರಿಚಯಿಸುವುದು ನಮ್ಮ ಆಶಯವಾಗಿದೆ ಎಂದರು.ಎಸ್ಸೆಸ್ಸೆಲ್ಸಿ-ಪಿಯುಸಿ ಸಾಧಕರಿಗೆ ಗೌರವ : ವಿದ್ಯಾರ್ಥಿಗಳಾದ ಸಾನ್ವಿ ಶೆಟ್ಟಿ, ಪನ್ನಾ ಪಿ ಶೆಟ್ಟಿ, ಸಾನ್ವಿ ಶೆಟ್ಟಿ, ಆದಿತ್ಯ ಬಿ ಶೆಟ್ಟಿ, ಪ್ರಾಪ್ತಿ ಎಸ್ ಶೆಟ್ಟಿ, ಪ್ರಗತಿ ಶೆಟ್ಟಿ,ನವ್ಯಾ ಶೆಟ್ಟಿ, ಮಾನ್ಯ ಶೆಟ್ಟಿಯವರನ್ನು ಗೌರವಿಸಲಾಯಿತು.
ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಡಾ. ಎಚ್.ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ನ್ಯಾಯವಾದಿ ಎಂ. ಶಾಂತರಾಮ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಸಾಫಲ್ಯ ಟ್ರಸ್ಟ್ ನ ಪ್ರವರ್ತಕಿ ನಿರುಪಮಾ ಪ್ರಸಾದ್ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಕಾರ್ಯಧ್ಯಕ್ಷ ಪದ್ಮನಾಭ ಹೆಗ್ಡೆ, ಮಾಜಿ ಅಧ್ಯಕ್ಷರುಗಳಾದ ಅಲೆವೂರ್ ಶ್ರೀಧರ್ ಶೆಟ್ಟಿ ಹಾಗೂ ಹೇಮಂತ್ 3, ಕಾರ್ಯದರ್ಶಿ ಶೆಟ್ಟಿ, ಖಂಚಾಂಜಿ ರಂಜನಿ ಹೆಗ್ಡೆ ಉಪಸ್ಥಿತರಿದ್ದರು.
ಕಾರ್ತಿಕ್ಸಂಘದ ಕಾರ್ಯದರ್ಶಿ ವಿಜಿತ್ ಶೆಟ್ಟಿ ಕೊರಂಗ್ರಪಾಡಿ ಸ್ವಾಗತಿಸಿದರು. ನಿಟ್ಟೆ ವಿ.ವಿ.ಯ ಪ್ರೊ. ಸುಧೀರ್ ರಾಜ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ಕಾರ್ಯಧ್ಯಕ್ಷ ಪದ್ಮನಾಭ ಹೆಗ್ಡೆ ವಂದಿಸಿದರು.
