September 6, 2026
Uncategorizedಕ್ರೈಮ್/ಅವಘಡಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸ

ಉಡುಪಿ ಜನ್ಮಾಷ್ಟಮಿ ಸಂಭ್ರಮ ಭಕ್ತಿ, ಶ್ರದ್ದೆಯ ಕೃಷ್ಣಾಷ್ಠಮಿ: ಪರ್ಯಾಯ ಶಿರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಅರ್ತ್ಯ ಪ್ರಧಾನ ;

ವರದಿ /ಚಿತ್ರ: ಈ ಮೀಡಿಯಾ

ಕನ್ನಡಉಡುಪಿ : ಉಡುಪಿಯಲ್ಲಿ ಜನ್ಮಾಷ್ಟಮಿ ಸಂಭ್ರಮ ಮೇರೆ ಮೀರಿದ್ದು, ಸಿಂಹ ಮಾಸ ಕೃಷ್ಣ ಪಕ್ಷ ಅಷ್ಟಮಿ ತಿಥಿ ರೋಹಿಣಿ ನಕ್ಷತ್ರದ ಶುಭಗಳಿಗೆಯಲ್ಲಿ ಲೋಕಕಲ್ಯಾಣಕ್ಕಾಗಿ ಅವತಾರವೆತ್ತಿದ ಶ್ರೀಕೃಷ್ಣನಿಗೆ ಶುಕ್ರವಾರ ರಾತ್ರಿ ಭಕ್ತಿ, ಶ್ರದ್ದೆಯಿಂದ ಅರ್ಥ್ಯ ಪ್ರದಾನ ನೆರವೇರಿತು.

ಪರ್ಯಾಯ ಶಿರೂರು ಶ್ರೀವೇದವರ್ಧನತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ರಾತ್ರಿ ಮಹಾಪೂಜೆ ಬಳಿಕ ರಾತ್ರಿ 12.15ರ ಚಂದ್ರೋದಯ ಕಾಲದಲ್ಲಿ ಪೂಜೆ, ನವ ಬಗೆಯ ಉಂಡೆ ಚಕ್ಕುಲಿ ಸಹಿತ ನೈವೇದ್ಯ ಅರ್ಪಿಸಿದರು.

ಸಮಸ್ತ ಲೋಕಕ್ಕೆ ಒಳಿತು ಮಾಡುವಂತೆ ಪ್ರಾರ್ಥಿಸಿ ಅರ್ತ್ಯ ನೀಡಿದರು.ತೀರ್ಥಮಂಟಪದ ಅಲಂಕೃತ ತುಳಸಿಕಟ್ಟೆಯಲ್ಲಿ ಚಂದ್ರನಿಗೆ ಕ್ಷೀರಾರ್ಥ್ಯ ತೆಂಗಿನ ಕಾಯಿ ಹೋಳಿನಲ್ಲಿ ಸಮರ್ಪಿಸಲಾಯಿತು. ಯತಿಗಳು, ಭಕ್ತರು ದಿನವಿಡೀ ನಿರ್ಜಲ ಉಪವಾಸ ಕೈಗೊಂಡಿದ್ದು, ಮಿಂದು ಸರತಿಯಲ್ಲಿ ಬಂದು ಶ್ರೀಕೃಷ್ಣನಿಗೆ ಭಕ್ತಿ, ಶ್ರದ್ದೆಯಿಂದ ಅರ್ತ್ಯ ಪ್ರದಾನಿಸಿದರು.

ಜಗದೊಡೆಯನ ಜನ್ಮಾಷ್ಟಮಿ ಅಂಗವಾಗಿ ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶಿರೂರು ಶ್ರೀವೇದವರ್ಧನತೀರ್ಥ ಶ್ರೀಪಾದರಿಂದ ಶುಕ್ರವಾರ ಮಹಾಪೂಜೆ ನಡೆಯಿತು.

Related posts

ಉಡುಪಿ ಕುಂಜಿಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪಲ್ಲಪೂಜೆ, ಹಾಲು ಪಾಯಸದ ಅನ್ನಸಂತರ್ಪಣೆ : ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ ಭಾಗಿ;

Voiceoftulunadu

ಈ ಬಾರಿ ಸಮಾಜ ಸೇವಕ ರವಿ ಕಟಪಾಡಿಯವರಿಂದ ಮರ್ಮೈಡ್’ ಅಂದರೆ ಮತ್ಮಕನ್ಯ ವೇಷ : 1.85 ಕೋಟಿ ರೂ. ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವಾದ ರವಿಯವರಿಗೆ, ಈಬಾರಿ 15 ಲಕ್ಷ ರೂ. ನಿರೀಕ್ಷೆ ;

Voiceoftulunadu

ಕರಾವಳಿ ಹಾಗೂ ಮಲೆನಾಡಿನ ಟೂರಿಸಂ ಬ್ರಾಂಡ್ ಅಂಬಾಸಿಡರ್ ಆಗಿ ನಟ ರಿಷಬ್ ಶೆಟ್ಟಿ ನೇಮಕ:

voiceoftulunadu

Leave a Comment