ವರದಿ /ಚಿತ್ರ :ಈ ಮೀಡಿಯಾ
ಉಡುಪಿ: ಸಂಹಿತಾ ಸೌಹಾರ್ದ ಸಹಕಾರಿ ನಿಯಮಿತ ವಾರ್ಷಿಕ ಉಡುಪಿ, ಇದರ ಮಹಾಸಭೆಯು ಇಂದು ಉಡುಪಿ ರಥಬೀದಿಯ ಕೃಷ್ಣ ಸಭಾಗೃಹದಲ್ಲಿ ನಡೆಯಿತು.ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ದೀಪ ಬೆಳಗಿಸಿಕಾರ್ಯಕ್ರಮ ಉದ್ಘಾಟಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಬೆಳ್ಳಾರು ರಾಘವೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಸಂಘದ ಸದಸ್ಯರಿಗೆ 14% ಡಿವಿಡೆಂಡ್ ಘೋಷಿಸಲಾಯಿತು.
ಸಭೆಯಲ್ಲಿ ವಿದ್ವಾನ್ ಡಾ. ಹರಿದಾಸ ಭಟ್ ಹೆರ್ಗ, ಮಣಿಪಾಲ ಕೆಎಂಸಿಯ ಡಾ.ಸುನೀಲ್ ಉಡುಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸಂಸ್ಥೆಯ ಸಿಇಒ ಶ್ರೀಶ ಸಾಮಗರು ಪ್ರಾಸ್ತಾವಿಕವಾಗಿ ಮಾತನಾಡಿದರು.ನಿರ್ದೇಶಕ ರಾಮಚಂದ್ರ ಉಡುಪ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಗುರುಪ್ರಸಾದ್ ಭಟ್ ವಂದಿಸಿದರು.
