September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು ತಾಲೂಕು ಆಡಳಿತದಿಂದ 80 ನೇ ಸ್ವಾತಂತ್ರೋತ್ಸವ ಆಚರಣೆಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ;

ವರದಿ/ ಚಿತ್ರ: ಈ ಮೀಡಿಯಾ

ಕಾಪು: ಕಾಪು ತಾಲೂಕು ಆಡಳಿತದ ಆಯೋಜನೆಯಲ್ಲಿ 80 ನೇ ಸ್ವಾತಂತ್ರೋತ್ಸವ ಆಚರಣೆಯು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನೆರವೇರಿತು.ಕಾಪು ತಹಶಿಲ್ದಾರ್ ಅನಂತ ಶಂಕರ್ ಬಿಯವರು ಧ್ವಜಾರೋಹಣಗೈದು ಸ್ವಾತಂತ್ರೋತ್ಸವದ ಸಂದೇಶ ನೀಡಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ತಾಲೂಕು ಆಡಳಿತದಿಂದ ಗಣ್ಯರಾದ ಕರಕುಶಲ ಕರ್ಮಿ ಸುಂದರ, ಸ್ಯಾನಿಟರಿ ಸುಪರ್ವೈಜರ್ ಜಯ, ಗೋಪಾಲ ಎನ್ ಕುಂದರ್, ಲೀಲಾ ಆಚಾರ್, ಯು ಸಿ ಶೇಕಬ್ಬ, ಚಂದ್ರಶೇಖರ ಸೇರಿಗಾರ, ದಯಾನಂದ ಬಂಗೇರ, ವಿಠಲ ಮಾಸ್ಟರ್ ರವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಪು ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಕಾಪು ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಗಾಂಡ್ಕರ್, ಪುರಸಭಾ ಮುಖ್ಯಾಧಿಕಾರಿ ಎನ್ ಎಂ ಮೇಸ್ತ, ಕಾಪು ಪೊಲೀಸ್ ವೃತ್ತನಿರೀಕ್ಷಕ ಅಜ್ಜತ್ ಆಲಿ, ತಾಲೂಕು ಗ್ಯಾರಂಟಿ ಯೋಜನಾಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠ, ನೌಕರರ ಸಂಘದ ಅಧ್ಯಕ್ಷ ಬಸವ ರಾಜ್, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.

ಕಾಪು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಕುಮಾರ್ ಸ್ವಾಗತಿಸಿದರು. ಶಿವಣ್ಣ ಬಾಯರ್ ನಿರೂಪಿಸಿದರು.ಚಿತ್ರ ಕೃಪೆ : ಕುಶ, ರೂಪಂ, ಕಾಪು

Related posts

ಮುದರಂಗಡಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು.ಕಾಪು ಠಾಣಾಧಿಕಾರಿ ತೇಜಸ್ವಿ ಮೇಲೆ ಆರೋಪಿಯ ಹಲ್ಲೆ ;

Voiceoftulunadu

ಪಣಿಯೂರು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಸದಸ್ಯರಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮ: ಶ್ರೀ ಬಬ್ಬುಸ್ವಾಮಿ ದೇವಸ್ಥಾನ, ಗಾಂಧಿ ಸರ್ಕಲ್ ರಸ್ತೆ, ಅಂಬೇಡ್ಕ‌ರ್ ಕಾಲನಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯ;

Voiceoftulunadu

ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ!.

Voiceoftulunadu

Leave a Comment