September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಕೇರಳ ಸಿಎಂ ವಿ.ಡಿ. ಸತೀಶನ್ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ: ದೇವಳದ ಆಡಳಿತ ಮಂಡಳಿಯಿಂದ ವಿಶೇಷ ಗೌರವ ಸ್ವೀಕರಿಸಿದ ಸಿಎಂ ಸತೀಶನ್;

ವರದಿ /ಚಿತ್ರ: ಈ ಮೀಡಿಯಾ

ಕೊಲ್ಲೂರು: ಕೇರಳ ಸಿಎಂ ವಿ.ಡಿ. ಸತೀಶನ್ ಶನಿವಾರ ಮುಂಜಾನೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

Z-ಪ್ಲಸ್ ಭದ್ರತೆಯಲ್ಲಿ ಅವರು ದೇವಸ್ಥಾನಕ್ಕೆ ಆಗಮಿಸಿದ್ದರು.

ಶುಕ್ರವಾರ ರಾತ್ರಿ ಕೋಲ್ಲೂರಿಗೆ ಆಗಮಿಸಿದ ಸಿಎಂ ಸತೀಶನ್, ಮುಂಜಾನೆಯೇ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.

ಬಳಿಕ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅವರಿಗೆ ಗೌರವ ಸಲ್ಲಿಸಲಾಯಿತು.

ಸತೀಶನ್ ಅವರು ಸಿಎಂ ಆದ ಬಳಿಕ ಮೊದಲ ಭೇಟಿ ಇದಾಗಿದೆ. ಅವರು ಕೊಲ್ಲೂರು ಮೂಕಾಂಬಿಕೆಯ ಅಪಾರ ಭಕ್ತರಾಗಿದ್ದಾರೆ.

ಪೂಜೆ ಬಳಿಕ ಮಂಗಳೂರು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಸತೀಶನ್ ಅವರು ಆಗಮಿಸಿದ್ದ ಹಿನ್ನೆಲೆ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಶೆಟ್ಟಿ ಸಹಿತ ಆಡಳಿತ ಮಂಡಳಿಯ ಸದಸ್ಯರು, ದೇವಳದ ಅರ್ಚಕರು ಭಕ್ತಾಧಿಗಳು ಉಪಸ್ಥಿತರಿದ್ದರು.

Related posts

ಲಾವಣ್ಯ ಹಂತಕನಿಗೆ ವೆಸ್ಲಾಕ್ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಹಂತಕ ಚೇತನ್ ವಿಷ ಪದಾರ್ಥ ಸೇವಿಸಿದ್ದ ಬಗ್ಗೆ ಮಾಹಿತಿ ನೀಡಿದ್ದ

Voiceoftulunadu

ಕಟಪಾಡಿ ಸಿ.ಎ. ಬ್ಯಾಂಕ್ ಎಜಿಎಂ ಅವರ ಮನೆಯಂಗಳದಲ್ಲಿ ಚಾಪೆ ನೇಜಿ : ಇನ್ನಂಜೆ ಅಜಿಲಕಾಡುವಿನ ರಮೇಶ್ ಪೂಜಾರಿಯವರಿಂದ 6 ಎಕರೆ ಗದ್ದೆಯಲ್ಲಿ ಚಾಪೆ ನೇಜಿ ನಾಟಿಯ ಕೃಷಿ ;

Voiceoftulunadu

ಹಿರಿಯ ಪತ್ರಕರ್ತ-ನಿವೃತ್ತ ಪ್ರಾಂಶುಪಾಲ ಪ್ರೊ| ಕೆ. ಬಾಲಕೃಷ್ಣ ಗಟ್ಟಿ ನಿಧನ:

voiceoftulunadu

Leave a Comment