28.5 C
ಮಂಗಳೂರು
September 4, 2026
Uncategorizedಕೃಷಿ/ಭೌಗೋಳಿಕಜಿಲ್ಲಾ ಸುದ್ದಿರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಚಾರ್ಮಾಡಿ ಘಾಟಿಯಲ್ಲಿ ಕಂಡು ಬಂದ ಒಂಟಿ ಸಲಗ: ರಸ್ತೆ ದಾಟುತ್ತಿದ್ದ ಸಲಗ ಮೊಬೈಲ್ ನಲ್ಲಿ ಸೆರೆ ;

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನ ಬಳಿ ಒಂಟಿ ಸಲಗವೊಂದು ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಿಗ್ಗೆ ರಸ್ತೆ ಮಧ್ಯೆ ಕಾಣಿಸಿಕೊಂಡು ಕೆಲಕಾಲ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.ಕಾಡಾನೆ ರಸ್ತೆ ದಾಟಿದ ದೃಶ್ಯವನ್ನು ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಾಟಿಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಕೆಲಕಾಲ ನಿಧಾನಗತಿಯಲ್ಲಿ ಸಾಗಿದವು. ಕೆಲವು ವಾಹನ ಚಾಲಕರು ಸುರಕ್ಷತೆಯ ದೃಷ್ಟಿಯಿಂದ ದೂರದಲ್ಲೇ ವಾಹನ ನಿಲ್ಲಿಸಿ ಆನೆ ರಸ್ತೆ ದಾಟುವವರೆಗೆ ಕಾಯಬೇಕಾಯಿತು. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವವರಿಗೆ ಈ ಆನೆ ಆಗಾಗ ರಸ್ತೆ ಸಮೀಪ ಕಾಣಿಸಿಕೊಳ್ಳುವುದು ಹೊಸ ವಿಚಾರವಲ್ಲ. ಆಹಾರಅರಸಿಕೊಂಡು ಅಥವಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸುವ ವೇಳೆ ಈ ಆನೆ ರಸ್ತೆ ದಾಟುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆನೆಯನ್ನು ಸುರಕ್ಷಿತವಾಗಿ ಕಾಡಿನೊಳಗೆ ಅಟ್ಟಿದರು.ಘಾಟಿ ಪ್ರದೇಶದಲ್ಲಿ ಕಾಡುಪ್ರಾಣಿಗಳ ಓಡಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ವಿಶೇಷವಾಗಿ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಅತಿವೇಗದ ಚಾಲನೆ ತಪ್ಪಿಸಿ, ಕಾಡುಪ್ರಾಣಿಗಳು ಕಂಡುಬಂದರೆ ಸುರಕ್ಷಿತ ಅಂತರ ಕಾಯ್ದುಕೊಂಡು ಮುಂದುವರಿಯುವಂತೆ ಅರ್ಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.

Related posts

ಜುಲೈ 10, 11 ಆಳ್ವಾಸ್ನಲ್ಲಿ `ಕನ್ನಡ ಗಾನ ಗುಚ್ಛ’ ವೈವಿಧ್ಯಮಯ ಹಾಡುಗಳ ವಿನೂತನ ರಂಗಪ್ರಸ್ತುತಿ: ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಸಂಯೋಜಿಸಲಿರುವ ಗಾನ ಗುಚ್ಛ;

Voiceoftulunadu

ಮಂಗಳೂರು ವಿಮಾನ ನಿಲ್ದಾಣದಲ್ಲಿ “ಉಬರ್” ಸೇವೆ ಆರಂಭ:ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ;

Voiceoftulunadu

ದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರದ ಕೊಡುಗೆ ಮಹತ್ವದ್ದಾಗಿದೆ, ಎಸ್.ಆರ್. ಸತೀಶ್ ಚಂದ್ರ :ಶಿರ್ವ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಕಾರ್ಯಕಾರಿಣಿ;

Voiceoftulunadu

Leave a Comment