ವರದಿ /ಚಿತ್ರ :ಈ ಮೀಡಿಯಾ
ಪಡುಬಿದ್ರಿ: ಪಡುಬಿದ್ರಿ ಬಂಟರ ಸಂಘ,ಬಂಟ್ಸ್ ವೆಲ್ವೇರ್ ಟ್ರಸ್ಟ್ ಮತ್ತು ಬಂಟರ ಮಹಿಳಾ ವಿಭಾಗದ ಆಶ್ರಯದಲ್ಲಿ ಪಡುಬಿದ್ರಿ ಬಂಟರ ಸಂಘದ ಕೃಷ್ಣ ಸುಧಾಮ ಸಭಾಭವನದಲ್ಲಿ ಆಟಿದ ಗೌಜಿ ಕಾರ್ಯಕ್ರಮ ಭಾನುವಾರ ನೆರವೇರಿತು.ಕಾರ್ಯಕ್ರಮವನ್ನು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು.
ಅವರು ಮಾತನಾಡಿ, ಇಂದು ಕೂಡು ಕುಟುಂಬ ಮಾಯವಾಗಿದೆ. ಆಟಿದ ಕೂಟದ ಉದ್ದೇಶ ಸಂಘಟನೆ, ಎಲ್ಲರನ್ನೂ ಸಂಘಟಿಸುವುದಾಗಿದೆ. ತುಳುವರ ತಿಂಗಳ ಪ್ರಾಮುಖ್ಯತೆಗಳು, ಪದಾರ್ಥಗಳು, ವೈವಿಧ್ಯತೆಗಳನ್ನು ಯುವ ಪೀಳಿಗೆಗೂ ఆటి ಮುಂದುವರಿಯಬೇಕು ಎಂದರು.
ಮೊಂಟೆಪದವು ಸರಕಾರಿ ಪ.ಪೂ. ಕಾಲೇಜಿನ ಉಪ ಪ್ರಾಶುಪಾಲೆ ಶ್ರೀಮತಿ ಡಾ. ಮಂಜುಳಾ ಶೆಟ್ಟಿ ಮಾತನಾಡಿ, ತುಳುವರ ಆಟಿಯ ಬಗೆಗೆ ತುಳುನಾಡಿನ అల్లల్లి ವಿಶೇಷ ಆಚರಣೆಗಳು ನಡೆಯುತ್ತವೆ. ಆಟಿ ತಿಂಗಳು ಜಡತ್ವದ ಮಾಸ ಇದಾಗಿದ್ದು, ಕಾಲದಲ್ಲೂಜನಪದೀಯ ಸಂಸ್ಕೃತಿ ಜೀವಂತವಾಗಿದ್ದ ಕಾಲ. ఆటియ ಆಗೇಲು, ఆటి ಕಳಂಜ, ಆಟಿ ಅಮಾವಾಸ್ಯೆಯ ಮದ್ದು, ಮೊದಲಾದ ಪ್ರಾಕೃತಿಕ ವೈವಿಧ್ಯದ ಕ್ರಮಗಳು ಇಂದೂ ಚಾಲ್ತಿಯಲ್ಲಿವೆ. ಅದನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಿ ಕೊಡುವ ಕಾರ್ಯ ಕ್ರಮವಾಗಿ ಆಟಿಯ ದಿನಗಳು ಮೂಡಿ ಬರುತ್ತಿದೆ ಎಂದರು.
ಬಂಟ್ಸ್ ವೆಲ್ವೇರ್ ಟ್ರಸ್ಟ್ ಅಧ್ಯಕ್ಷ ಡಾ. ವೈ.ಎನ್. ಶೆಟ್ಟಿ ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ತು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಸುಶ್ಮಿತಾ ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ನೀತಾ ನವೀನ್ ಚಂದ್ರ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಸುಜಿತ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ ಸಾವಯವ ಕೃಷಿಕ ಸಂತೋಷ್ ಶೆಟ್ಟಿ ಬರ್ಪಾಣಿ, ಯುವ ರಂಗ ನಿರ್ದೇಶಕ, ನಿರೂಪಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಹಾಗೂ ದೈವ ಮದಿಪುಗಳ ನಿಷ್ಣಾತರಾದ ಹರೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಸಂಘದ ಪಡುಬಿದ್ರಿ ಬಂಟರ ನಿಕಟವರ್ತಿಯಾಗಿದ್ದ ಪತ್ರಕರ್ತ, ನಾಟಕ ಕಾರ, ರಂಗ ನಿರ್ದೇಶಕ ಪರಮಾನಂದ ಸಾಲ್ಯಾನ್ ನಿಧನಕ್ಕೆ ಜಯ ಶೆಟ್ಟಿ ಪದ್ರ ಪ್ರಸ್ತುತಪಡಿಸಿದ ನುಡಿ ನಮನದಲ್ಲಿ ಸಭೆ ಒಂದು ನಿಮಿಷದ ಮೌನ ಪ್ರಾರ್ಥನೆ ಯನ್ನು ಸಲ್ಲಿಸಲಾಯಿತು.
ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಭಾರತಿ ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.ಸತೀಶ್ ಶೆಟ್ಟಿ ಗುಡ್ಡೆಚ್ಚಿ ಹಾಗೂ ವಿಧಿಶಾ ಹರೀಶ್ ಶೆಟ್ಟಿ ಕಾರ್ಯ ಕ್ರಮ ನಿರ್ವಹಿಸಿದರು.
ತುಳು ಪರ್ಬ ಸಾಂಸ್ಕೃತಿಕ ವೈಭವರಾಜ್ಯೋತ್ಸವ ಪ್ರಶಸ್ತಿ ವಿಜೇತ ಯಶೋಧರ ಎರ್ಮಾಳು ನೇತೃತ್ವದ ಅಬ್ಬರ ತಂಡದಿಂದ ತುಳು ಸಾಂಸ್ಕೃತಿಕ ಕಿರು ನಾಟಕ, ನೃತ್ಯ ರೂಪಕ ಪ್ರೇಕ್ಷಕರ ಮನಸೂರೆಗೊಂಡಿತು.ಆಗಮಿಸಿದ ಎಲ್ಲರಿಗೂ ಆಟಿ ತಿಂಗಳ ಸಸ್ಯಾಹಾರಿ ಮತ್ತು ಮಾಂಸಾಹಾರ ಖಾದ್ಯದ ಊಟದ ವ್ಯವಸ್ಥೆ ಮಾಡಲಾಗಿತ್ತು.
