September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಪುಣೆಯಲ್ಲಿ ‘ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ(ರಿ.) ಇದರ 10 ನೇ ವಾರ್ಷಿಕೋತ್ಸವ : ಯಕ್ಷ ದಶ ಸಂಭ್ರಮ -2026, ಇದರ ಪ್ರಯುಕ್ತ “ರಾಣಿ ಶಶಿಪ್ರಭೆ” ಮತ್ತು “ಶ್ರೀದೇವಿ ಕದಂಬ ಕೌಶಿಕೆ” ಯಕ್ಷಗಾನ ಪ್ರದರ್ಶನ;

ಪುಣೆ: ಪುಣೆಯಲ್ಲಿ ಕಲಾಭಿಮಾನಿಗಳ ಹೃದಯಗೆದ್ದ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ(ರಿ.) , ಇದರ 10 ನೇ ವಾರ್ಷಿಕೋತ್ಸವವು ದಿನಾಂಕ 30/08/2026 ನೇ ಆದಿತ್ಯವಾರ ಮಧ್ಯಾಹ್ನ ಅವರ ಗಂಟೆ 2 ರಿಂದ ಶ್ರೀಮತಿ ಶಕುಂತಲಾ ಜಗನ್ನಾಥ್ ಶೆಟ್ಟಿ ಸಭಾ ಭವನ (ಕನ್ನಡ ಸಂಘ), ಗಣೇಶ್ ನಗರ, ಎರಂಡವಣ, ಪುಣೆ ಇಲ್ಲಿ ನಡೆಯಲಿದೆ.

ಕಾರ್ಯಕ್ರಮಗಳವಿವರ : ಯಕ್ಷಗಾನ – 2 ಗಂಟೆಯಿಂದ 4 ಗಂಟೆಯ ತನಕ ” ರಾಣಿ ಶಶಿಪ್ರಭೆ” ಹಾಗೂ 5.30 ಗಂಟೆಗೆ ” ಶ್ರೀದೇವಿ ಕದಂಬ ಕೌಶಿಕೆ” ಯಕ್ಷಗಾನ.

ಸಭಾ ಕಾರ್ಯಕ್ರಮ: 4.15 ರಿಂದ 5.30 ರವರಿಗೆ.

ಸಭಾ ಕಾರ್ಯಕ್ರಮದ ವಿವರಗಳು : ಸಭಾಧ್ಯಕ್ಷತೆಯನ್ನು ಸಂತೋಷ್ ಶೆಟ್ಟಿ ಕುರ್ಕಿಲ್ ಬೆಟ್ಟು ಬಾಳಿಕೆ ಇವರು ವಹಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಕೆ.ಕೆ.ಶೆಟ್ಟಿ ಶಬರಿ ಕ್ಯಾಟರರ್ಸ್, ಅಹಮದ್ ನಗರ್, ರವಿ ಶೆಟ್ಟಿ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್, ಅಜಿತ್ ಹೆಗ್ಡೆ, ಅಧ್ಯಕ್ಷರು ಬಂಟರ ಸಂಘ ಪುಣೆ, ಶಶಿಧರ್ ಶೆಟ್ಟಿ ಬರೋಡ, ಅಧ್ಯಕ್ಷರು ತುಳುಕೂಟ ಬರೋಡ ಗುಜರಾತ್, ಜಯಕರ್ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು ತುಳುಕೂಟ ಉಡುಪಿ, ವಿಶ್ವನಾಥ್ ಪೂಜಾರಿ ಬರೋಡ, ಅಧ್ಯಕ್ಷರು ಬಿಲ್ಲವ ಸಮಾಜ ಸೇವಾ ಸಂಘ ಪುಣೆ, ರೋಹಿತ್ ಶೆಟ್ಟಿ ನಗ್ರಿಗುತ್ತು, ಅಧ್ಯಕ್ಷರು ಬಂಟ್ಸ್ ಅಸೋಸಿಯೇಷನ್ ಪುಣೆ, ಜಿತೇಂದ್ರ ಹೆಗ್ಡೆ, ಎಂ.ಡಿ.ಬಯೋರಡ್ ಮೆಡಿಸಿಸ್ ಪ್ರೈ, ಲಿಮಿಟೆಡ್, ಪುಷ್ಪಾ. ಕೆ. ಹೆಗ್ಡೆ, ಟ್ರಸ್ಟಿ ಬಂಟರ ಸಂಘ ಪುಣೆ, ಸೀತಾರಾಮ ಶೆಟ್ಟಿ ಪಿಂಪ್ರಿ, ಮಾಜಿ ಅಧ್ಯಕ್ಷರು ಬಂಟರ ಸಂಘ ಪಿಂಪ್ರಿ – ಚಿಂಚ್ವಾಡ್ ಹಾಗೂ ಇಂದಿರಾ ಸಾಲಿಯಾನ್, ಉಪಾಧ್ಯಕ್ಷರು ಕನ್ನಡ ಸಂಘ ಪುಣೆ ಇವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಆದರದ ಸ್ವಾಗತವನ್ನು ಬಯಸುವವರು: ಶ್ರೀ ವಿಶ್ವನಾಥ ಶೆಟ್ಟಿ ಪಾಂಗಾಳ ಗೌರವಾಧ್ಯಕ್ಷರು, ಶ್ರೀ ಚಂದ್ರಶೇಖರ್ ಶೆಟ್ಟಿ,ನಿಟ್ಟೆ ಅಧ್ಯಕ್ಷರು, ಶ್ರೀ ಜಗದೀಪ ಶೆಟ್ಟಿ , ಕಾರ್ಯದರ್ಶಿ, ಶ್ರೀಮತಿ ನಯನಾ ಸಿ ಶೆಟ್ಟಿ ಜೊತೆ ಕಾರ್ಯದರ್ಶಿ, ಶ್ರೀ ವಿಕೇಶ್ ರೈ ಶೇಣಿ, ಕೋಶಾಧಿಕಾರಿ, ಶ್ರೀ ಭಾರ್ಗವ್ ಮಂಡ್ಯ, ಜೊತೆ ಕೋಶಾಧಿಕಾರಿ, ಶ್ರೀ ಸುದರ್ಶನ್ ಸುವರ್ಣ, ಜನ ಸಂಪರ್ಕಾಧಿಕಾರಿ ಹಾಗೂ ಶ್ರೀ ಪ್ರವೀಣ್ ಶೆಟ್ಟಿ ಪಳ್ಳಿ, ಜೊತೆ ಜನ ಸಂಪರ್ಕಾಧಿಕಾರಿ.

ಕಾರ್ಯಕ್ರಮಕ್ಕೆ ಶುಭಾಶಯವನ್ನು ಕೋರುವವರು : ಬಂಟರ ಸಂಘ ಪುಣೆ ಹಾಗೂ ಕನ್ನಡ ಸಂಘ ಪುಣೆ ಸನ್ಮಾನಿತರು : ತಾರಾನಾಥ ರೈ,ನೇಗಿನ ಗುತ್ತು,ಗೌರವಾಧ್ಯಕ್ಷರು, ತುಳುನಾಡ ಫೌಂಡೇಶನ್,ಪುಣೆ ಹಾಗೂ ವಿಕೇಶ್ ರೈ ಶೇಣಿ, ಬಹುಮುಖ ಪ್ರತಿಭೆ, ಯಕ್ಷ ಕಲಾವಿದ ,ಯಕ್ಷಗುರುಗಳು.

ಕಾರ್ಯಕ್ರಮದ ನಿರೂಪಣೆ : ಶ್ರೀ ತಾರಾನಾಥ ಶೆಟ್ಟಿ , ಮೊಡಂತ್ಯಾರು ಮತ್ತು ಶ್ರೀಮತಿ ಅಕ್ಷತಾ ಸುಜಿತ್ ಶೆಟ್ಟಿ

Related posts

ಕಾಪು ಶ್ರೀ ಹೊಸ ಮಾರಿಗುಡಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ;ಪ್ರಾಧಿಕಾರದ ಅಧ್ಯಕ್ಷರಿಗೆ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿಯಿಂದ  ಗೌರವ:

voiceoftulunadu

ಸೌದಿ ಅರೇಬಿಯಾ ಬಿಲ್ಲವರ ಅಸೋಸಿಯೇಷನ್ : ಆ.16 ರಂದು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಿತರಣೆ :

Voiceoftulunadu

ಜನರ ಧ್ವನಿಗೆ ಸ್ಪಂದನೆ – ಚಿಲಿಂಬಿ ರಸ್ತೆ ಕಾಮಗಾರಿ ಆರಂಭ : ಮಾಧ್ಯಮದ ವರದಿಗೆ ಮಣಿದ ಆಡಳಿತ – ವಾಯ್ಸ್ ಆಫ್ ತುಳುನಾಡು ಸುದ್ದಿಪತ್ರಿಕೆಯ ಪ್ರಯತ್ನಕ್ಕೆ ಫಲ;

Voiceoftulunadu

Leave a Comment