28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮಂಗಳೂರು: ಪ್ರಾಮಾಣಿಕತೆ ಮೆರೆದ ರೈಲ್ವೆ ಉದ್ಯೋಗಿ;

ವರದಿ/ ಚಿತ್ರ :ದಿತೇಶ್ ಪೂಜಾರಿ ಮಂಗಳೂರು

ಮಂಗಳೂರು: ಮಂಗಳೂರುಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೈಟ್ ಪಟ್ರೋ ಲ್ಮನ್‌(ಹಳಿ ಗಸ್ತು ಸಿಬ್ಬಂದಿ) ಕುಲದೀಪ್ ಮಹಾತ ಎಂಬುವವರು ರೈಲು ಹಳಿಯ ಬದಿಯಲ್ಲಿ ಸಿಕ್ಕಿದ ಹಣ ಮತ್ತು ಪ್ರಮುಖ ದಾಖಲೆಗಳಿದ್ದ ಪರ್ಸ್ ಒಂದನ್ನು ಸುರಕ್ಷಿತವಾಗಿ ಮಾಲೀಕರಿಗೆ ತಲುಪಿ ಸುವ ಮೂಲಕ ಮಾದರಿಯಾಗಿದ್ದಾರೆ.

ಕಳೆದ ಜುಲೈ 19ರಂದು ರಾತ್ರಿ ಕರ್ತವ್ಯದಲ್ಲಿದ್ದ ಕುಲದೀಪ್ ಮಹಾತ ಅವರಿಗೆ ರೈಲು ಹಳಿಯ ಪಕ್ಕದಲ್ಲಿ ಪರ್ಸ್ ಸಿಕ್ಕಿದ್ದು, ಪರಿಶೀಲಿಸಿದಾಗ ಅದರಲ್ಲಿ ರೂ. 3,000 ನಗದು ಹಣ, ಪಾನ್ ಕಾರ್ಡ್, ಆಧಾರ್ ಕಾರ್ಡ್, ಮೆಡಿಕಲ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್‌ಗಳು ಇರುವುದು ತಿಳಿದು ಬಂದಿದೆ. ತಕ್ಷಣವೇ ಅವರು, ಆ ಪರ್ಸ್‌ನ್ನು ಮಂಗಳೂರು ಸೆಂಟ್ರಲ್‌ ರಕ್ಷಣೆ ಕ್ಷಣೆ ಕಚೇರಿಗೆ ಹಸ್ತಾಂ ತರಿಸಿದ್ದರು.

ಮಂಗಳೂರು ಆರ್‌ಪಿಎಫ್ ಸಿಬ್ಬಂದಿ, ಅದರಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಜುಲೈ 22 ರಂದು ಮಾಲೀಕನನ್ನು ಪತ್ತೆಹಚ್ಚಿದ್ದಾರೆ.ಪರ್ಸ್ ಕೇರಳದ ಮಲಪ್ಪುರಂ ಜಿಲ್ಲೆಯ ಪುಲ್ಲಿಪಾದಂ ಮೂಲದ ಸುಜಿತ್ ಕೆ. ಎಂಬುವವರಿಗೆ ಸೇರಿದ್ದೆಂದು ತಿಳಿದು ಬಂದಿದೆ. ತಕ್ಷಣವೇ ಅವರನ್ನು ಸಂಪರ್ಕಿಸಿದ ಅಧಿಕಾರಿಗಳು, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, ಅವರ ಎಲ್ಲಾ ಕಾರ್ಡ್‌ಗಳನ್ನು ಹಸ್ತಾಂತರಿಸಿದ್ದಾರೆ.ನೈಟ್ ಪಟ್ರೋಲ್ಮನ್ ಕುಲದೀಪ್ ಮಹಾತ ಅವರ ಈ ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Related posts

ಬಾಯಿ ಮೂಗಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಹೆಂಡತಿ, ಮಕ್ಕಳ ಭೀಕರ ಕೊಲೆ: ಕೊನೆಗೆ ಪತಿಯೂ ಆತ್ಮಹತ್ಯೆಗೆ ಶರಣು: ಮೈಸೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ!

Voiceoftulunadu

ಅನ್ನಬ್ರಹ್ಮ ಸೇವಾ ಸಮಿತಿ ಉಡುಪಿಯಿಂದ ಬಡ ಹೆಣ್ಣುಮಗಳ ಮದುವೆಗೆ ಸೀರೆಗಳ ನೆರವು ;

Voiceoftulunadu

ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನದಲ್ಲಿ ಮೃತಪಟ್ಟಿದ್ದ ಉಡುಪಿಯ ಪೈಲೆಟ್ ಅಭಿಷೇಕ್ ಪೂಜಾರಿ : ಕಾರ್ಕಳದ ಕಣಜಾರಿನಲ್ಲಿ ಪೈಲೆಟ್ ಅಂತ್ಯಕ್ರಿಯೆ…!!

Voiceoftulunadu

Leave a Comment