28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸ

ಮಂಗಳೂರು-ಮೂಡುಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದದ ಆವರಣದಲ್ಲಿ‘ಡಾ| ಶ್ರೀಕಾಂತ್ ಲತಾ ಏಕನಾಥ್ ಶಿಂಧೆ ಆಡಿಟೋರಿಯಂ’ ನಿರ್ಮಾಣ ; ದೇಣಿಗೆಗೆ ಮನವಿ ;

ವರದಿ/ ಚಿತ್ರ: ರೋನ್ಸ್ ಬಂಟ್ವಾಳ್


ಮುಂಬಯಿ, ಆ.೩೦:  ಕರ್ನಾಟಕ ಕರಾವಳಿಯ ಮಂಗಳೂರು ಮೂಡುಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ದೇಣಿಗೆ ಕೋರಿ ಮಹಾರಾಷ್ಟ್ರದ ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಡಾ| ಶ್ರೀಕಾಂತ್ ಏಕನಾಥ್ ಶಿಂಧೆ ಅವರಿಗೆ ಇಂದಿಲ್ಲಿ ಭಾನುವಾರ ಸಂಸದರ ಅಧಿಕೃತ ನಿವಾಸ ಥಾಣೆ ಲೂಯಿಸ್‌ವಾಡಿ ಇಲ್ಲಿನ ಶುಭ್‌ದೀಪ್ ಬಂಗಲೋಗೆ ವಿಷ್ಣುಮೂರ್ತಿ ದೇವಸ್ಥಾನ ಪುನರ್‌ನಿರ್ಮಾಣ ಸಮಿತಿ ಪರವಾಗಿ ಮುಂಬಯಿ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಮೂಡುಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮುಂಬಯಿ ಸಮಿತಿ ಅಧ್ಯಕ್ಷ ಮೂಡುಶೆಡ್ಡೆ ವಿಶ್ವನಾಥ್ ಎಸ್.ಶೆಟ್ಟಿ, ಗೌರವಾಧ್ಯಕ್ಷ ಮುಂಡಪ್ಪ ಎಸ್.ಪಯ್ಯಡೆ, ಕಾರ್ಯದರ್ಶಿ ದಿವಾಕರ್ ರೈ ಪ್ರಧಾನವಾಗಿದ್ದು ಡಾ| ಶ್ರೀಕಾಂತ್ ಶಿಂಧೆ ಅವರಿಗೆ ಮನವಿ ಸಲ್ಲಿಸಿ ಮೂಡುಶೆಡ್ಡೆ ಗ್ರಾಮಸ್ಥರು ಡಾ| ಶ್ರೀಕಾಂತ್ ಶಿಂಧೆ ಅವರಿಗೆ ವಿನಮ್ರ ಮನವಿ ಸಲ್ಲಿಸಿ ಅವರ ಹಾಗೂ ಅವರ ಮಾತಾಪಿತರ ಹೆಸರು ಮೂಡುಶೆಡ್ಡೆ ಗ್ರಾಮದಲ್ಲಿ ಶಾಸ್ವತವಾಗಿ ಸ್ಮರಣೀಯವಾಗಿರಬೇಕು ಎಂಬ ಉದ್ದೇಶದಿಂದ ‘ಡಾ| ಶ್ರೀಕಾಂತ್ ಲತಾ ಏಕನಾಥ್ ಶಿಂಧೆ ಆಡಿಟೋರಿಯಂ’ ಹೆಸರಿನಲ್ಲಿ ಸಭಾಂಗಣ ನಿರ್ಮಿಸಲು ಯೋಚಿಸಲಾಗಿದೆ ಎಂದರು.

ಯೋಜನೆಯಂತೆ ನೆಲಮಹಡಿಯಲ್ಲಿ ಅಡುಗೆಮನೆ ಹಾಗೂ ಊಟದ ವ್ಯವಸ್ಥೆಗಾಗಿ ಒಟ್ಟು ೧೧,೯೮೦ ಚದರ ಅಡಿ ವಿಸ್ತೀರ್ಣದ ಕಟ್ಟಡ ಹಾಗೂ ಪ್ರಥಮ ಮಹಡಿಯಲ್ಲಿ ೯,೦೮೫ ಚದರ ಅಡಿ ವಿಸ್ತೀರ್ಣದ ಸಭಾಂಗಣ ನಿರ್ಮಾಣಗೊಳ್ಳಲಿದೆ. ಈ ಪುಣ್ಯ ಕಾರ್ಯಕ್ಕೆ ಡಾ| ಶ್ರೀಕಾಂತ್ ಶಿಂಧೆ ಅವರು ಸಮ್ಮತಿಸಿ, ತಮ್ಮ ಹೃದಯಪೂರ್ವಕ ಬೆಂಬಲದೊಂದಿಗೆ ೩.೫ ಕೋಟಿ ದೇಣಿಗೆ ನೀಡುವಂತೆ ದೇವಸ್ಥಾನ ಪುನರ್‌ನಿರ್ಮಾಣ ಸಮಿತಿ ವಿನಮ್ರವಾಗಿ ಮನವಿ ಮಾಡಿದೆ ಎಂದು ಮೂಡುಶೆಡ್ಡೆ ವಿಶ್ವನಾಥ್ ಎಸ್.ಶೆಟ್ಟಿ ತಿಳಿಸಿದರು.

ಕಳೆದ ಜುಲೈನಲ್ಲಿ ನಡೆದ ದೇವಸ್ಥಾನದ ಶಿಲಾನ್ಯಾಸ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಾ| ಶ್ರೀಕಾಂತ್ ಶಿಂಧೆ ತಮ್ಮ ಭಾಷಣದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ವಿವರಿಸಿ, ಛತ್ರಪತಿ ಶಿವಾಜಿ ಮಹಾರಾಜರು ಕರ್ನಾಟಕದಲ್ಲಿ ತಂಗಿದ್ದ ವಿಚಾರ ಹಾಗೂ ಮಹಾರಾಷ್ಟ್ರದ ಭಕ್ತರೊಂದಿಗೆ ಕರ್ನಾಟಕದ ಜನರೂ ಪಂಢರಪುರ ಜಾತ್ರೆಯಲ್ಲಿ ಪಾಲ್ಗೊಳ್ಳುವ ಪರಂಪರೆಯನ್ನು ಸುಂದರವಾಗಿ ವಿವರಿಸಿದ್ದನ್ನು ವಿಶ್ವನಾಥ್ ಎಸ್.ಶೆಟ್ಟಿ ಪುನರುಚ್ಚಿಸಿ ಈ ಭಾಷಣವು ವಿಶ್ವದ ವಿವಿಧೆಡೆ ನೆಲೆಸಿರುವ ತುಳು ಹಾಗೂ ದಕ್ಷಿಣ ಭಾರತೀಯ ಸಮುದಾಯಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಮುಂಬೈನ ದಕ್ಷಿಣ ಭಾರತೀಯ ಸಮುದಾಯದ ಅನೇಕರು ದೂರವಾಣಿ ಮೂಲಕ ಸಂಪರ್ಕಿಸಿ ಭಾಷಣವನ್ನು ಪ್ರಶಂಸಿಸಿದ್ದಾರೆ. ಅವರ ಭಾಷಣದ ಮೂಲಕ ಮೂಡುಶೆಡ್ಡೆ ಗ್ರಾಮದ ಹೆಸರು ಎಲ್ಲೆಡೆ ಪರಿಚಿತವಾಗಿರುವುದು ಗ್ರಾಮಸ್ಥರಲ್ಲಿ ಹೆಮ್ಮೆಯ ಭಾವನೆ ಮೂಡಿಸಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದ್ದಾಗಿ ತಿಳಿಸಿದರು.

ದಕ್ಷಿಣ ಕನ್ನಡದ ಇತಿಹಾಸದಲ್ಲಿ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಪುನಃರ್ ನಿರ್ಮಾಣ ಕಾರ್ಯಗಳು ನಡೆದಿದ್ದರೂ, ೫,೦೦೦ಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ನಡೆದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಡಾ| ಶ್ರೀಕಾಂತ್ ಶಿಂಧೆ ಅವರು ನೀಡಿದ ಸ್ಮರಣೀಯ ಭಾಷಣವು ಮೂಡುಶೆಡ್ಡೆಯ ಜನತೆಗೆ ವಿಶೇಷ ಹೆಮ್ಮೆಯ ಸಂಗತಿಯಾಗಿದೆ. ಇದೇ ಸಂದರ್ಭದಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ತನ್ನ ತಂದೆ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅರೊಂದಿಗೆ ಪಾಲ್ಗೊಳ್ಳುವುದಾಗಿ ನೀಡಿದ ಭರವಸೆಯೂ ಶೀಘ್ರದಲ್ಲೇ ಪೂರೈಸುವ ಭರವಸೆ ನಮಗಿದೆ ಎಂದು ಮುಂಡಪ್ಪ ಎಸ್.ಪಯ್ಯಡೆ ಆಶಯ ವ್ಯಕ್ತಪಡಿಸಿದರು.

ಇಂದಿನ ಭೇಟಿಯ ಸಂದರ್ಭದಲ್ಲಿ ದೇವಸ್ಥಾನದ ಮುಂಬಯಿ ಸಮಿತಿಯ ಉಪಾಧ್ಯಕ್ಷೆ ಶರ್ಮಿಳಾ ಡಿ.ರೈ, ಉಪಾಧ್ಯಕ್ಷ ಗೋಪಾಲ್ ಶೆಟ್ಟಿ, ಶಿವಸೇನೆಯ ದಕ್ಷಿಣ ಭಾರತೀಯ ಘಟಕದ ಥಾಣೆ ಜಿಲ್ಲಾಧ್ಯಕ್ಷರಾದ ಸುಭಾಷ್ ಶೆಟ್ಟಿ ಇನ್ನಂಜೆ ಮತ್ತು ಮಹಿಳಾಧ್ಯಕ್ಷೆ ಅನುಪಮಾ ಶೆಟ್ಟಿ ಉಪಸ್ಥಿತರಿದ್ದರು.

Related posts

ಬಂಟ್ವಾಳ ತಾಲೂಕಿನ ನೆತ್ತರಕೆರೆ ಎಡುವೆಂಚರ್ ಪಿಯು ಕಾಲೇಜಿನ ಅಶ್ರಯದಲ್ಲಿ ‘ಹಸಿರು ಹೆಜ್ಜೆ-2026’ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಆಟೋಟ ಸ್ಪರ್ಧೆ, ಕೃಷಿ ಸಾಧಕರಿಗೆ ಸನ್ಮಾನ ;

Voiceoftulunadu

ಮಿಫ್ 2026 ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ಎಐ ಬಳಕೆ ಜವಾಬ್ದಾರಿಯುತವಾಗಿರಬೇಕು: ರಾಜ್ಯಪಾಲರ ಕರೆ;

Voiceoftulunadu

ರಾಷ್ಟ್ರೀಕೃತ ಬ್ಯಾಂಕಿಗೆ ಸಮಾನವಾಗಿ ಸಹಕಾರಿ ಸಂಘ ದೇವಿಪ್ರಸಾದ್ ಶೆಟ್ಟಿ;

Voiceoftulunadu

Leave a Comment