ವರದಿ/ ಚಿತ್ರ: ರೋಶನ್ ನೆಲ್ಲಿಗುಡ್ಡೆ
ಮೂಲ್ಕಿ: ರಾಷ್ಟ್ರೀಕೃತ ಬ್ಯಾಂಕಿಗೆ ಸರಿಸಮಾನವಾಗಿ ಜಿಲ್ಲೆಯ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರ ವಿಶ್ವಾಸ ಗಳಿಸಿದೆ. ಸಹಕಾರಿ ಸಪ್ತಾಹದ ಮೂಲಕ ಗ್ರಾಹಕರಿಗೆ ಸಹಕಾರಿ ಸಂಘಗಳನ್ನು ಇನ್ನಷ್ಟು ಪ್ರಚುರಪಡಿಸಲು ಅನುಕೂಲವಾಗಲಿದೆಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಅವರು ಹಳೆಯಂಗಡಿಯಲ್ಲಿ ಜಿಲ್ಲಾ ಸಹಕಾರ ಇಲಾಖೆಯ ನೇತೃತ್ವದಲ್ಲಿ ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಶ್ರಯದಲ್ಲಿ ಕೇಂದ್ರ ಸಹಕಾರ ಇಲಾಖೆ 5ವರ್ಷ ಪೂರ್ಣಗೊಂಡ ಪ್ರಯುಕ್ತ “ಸಹಕಾರ ಸಪ್ತಾಹ’ದ ಅಂಗವಾಗಿ ಮೂಲ್ಕಿ ತಾಲ್ಲೂಕು ಮಟ್ಟದ ಸಹಕಾರ ಸಂಘಗಳ ನಿರ್ದೇಶಕರು ಮತ್ತು ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾಡ್ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು.ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ವೈ. ಸುಧೀರ್ ಮಾತನಾಡಿದರು.ಸಹಕಾರ ಸಂಘಗಳ ನಿರ್ವಹಣೆಯಲ್ಲಿ ನಮ್ಮ ಪಾತ್ರ ಎಂಬ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಸಹಕಾರ ಸಂಘಗಳ ತರಬೇತುದಾರ ನ್ಯಾಯವಾದಿ ಶ್ರೀಧರ್ ಪಿ.ಎಸ್ ಕುಂದಾಪುರ ಮಾತನಾಡಿ, ಸಹಕಾರಿ ಸಂಘದ ಉನ್ನತೀಕರಣಕ್ಕೆ ಆಡಳಿತ ಮತ್ತು ಸಿಬ್ಬಂದಿವರ್ಗದ ಪರಸ್ಪರ ಕ್ರಿಯಾಶೀಲತೆ ಪ್ರಾಮಾಣಿಕವಾಗಿ ಇರಬೇಕು ಎಂದರು.
ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ವಂದಿಸಿದರು.ಲೋಲಾಕ್ಷಿ ನಿರೂಪಿಸಿದರು.
