September 5, 2026
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮೈಸೂರು ಕಂಬಳ ಆಯೋಜನೆಗೆ ಮುನ್ನ ಸರ್ಕಾರ ಎಲ್ಲಾ ದೃಷ್ಟಿಕೋನಗಳಿಂದ ಯೋಚಿಸಬೇಕು: ಸುನಿಲ್ ಕುಮಾರ್;

ವರದಿ/ ಚಿತ್ರ :ದಿತೇಶ್ ಪೂಜಾರಿ ಮಂಗಳೂರು

ಕಾರ್ಕಳ: ಮೈಸೂರು ದಸರಾ ದಲ್ಲಿ ಕಂಬಳ ಕ್ರೀಡೆಯನ್ನು ಪರಿಚಯಿ ಸುವ ಬಗ್ಗೆ ಈಗ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಸರ್ಕಾ ರವೇಕೋ ಮೈಸೂರಿನಲ್ಲಿ ಕಂಬಳ ನಡೆಸಲೇಬೇಕೆಂಬ ಹಠಕ್ಕೆ ಬಿದ್ದಿರು ವುದು ಮೇಲ್ನೋಟಕ್ಕೆ ಭಾಸವಾಗು ತ್ತಿದೆ. ಆದರೆ ಈ ಬಗ್ಗೆ ನಿರ್ಣಯಕ್ಕೆ ಬರುವುದಕ್ಕೆ ಮೊದಲು ಎಲ್ಲ ದೃಷ್ಟಿ ಕೋನಗಳಿಂದಲೂ ಯೋಚನೆ ಮಾಡಬೇಕಾದ ಅಗತ್ಯವಿದೆ ಎಂದು ಕಾರ್ಕಳ ಮಿಯಾರಿನ ‘ಲವ -ಕುಶ’ ಕಂಬಳದ ಆಯೋಜಕ, ಶಾಸಕ ವಿ.ಸುನಿಲ್ ಕುಮಾ‌ರ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಕಂಬಳ ಕರಾವಳಿಯ ಸಾಂಸ್ಕೃತಿಕ ಕ್ರೀಡೆ. ಇದಕ್ಕೆ ಅದರದ್ದೇ ಆದ ಇತಿ ಹಾಸ ಹಾಗೂ ಸ್ಥಳೀಯ ಮೆರಗು ಗಳಿವೆ. ಭಾಷೆ, ಸಂಸ್ಕೃತಿ, ಕಲೆ, ಆಚರ ಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಬದ ಲಾಗುವುದು ಮಾತ್ರವಲ್ಲ, ಅದರ ಆಕರ್ಷಣೆ ಹಾಗೂ ಮೆಚ್ಚುವಿಕೆಯಲ್ಲೂ ವ್ಯತ್ಯಾಸಕ್ಕೆ ಒಳಪಡುತ್ತವೆ. ಹೀಗಾಗಿ ಕರಾವಳಿಯ ಕ್ರೀಡೆಯನ್ನು ದಸರಾಉತ್ಸವದ ಕಾರಣಕ್ಕಾಗಿ ಮೈಸೂರಿಗೆ ಕೊಂಡೊಯ್ಯುವುದರಿಂದಾಗುವ ಒಟ್ಟಾರೆ ಪರಿಣಾಮವನ್ನೂ ನಿಷ್ಕರ್ಷೆಗೆ ಒಳಪಡಿಸುವುದು ಅತ್ಯಗತ್ಯ.

ಹೀಗಾಗಿ ಮೈಸೂರಿನಲ್ಲಿ ಕಂಬಳ ನಡೆಸಬೇಕೋ ಬೇಡವೋ ಎಂಬ ಬಗ್ಗೆ ಸರ್ಕಾರ ಮೈಸೂರಿನ ಜನಪ್ರತಿನಿಧಿಗಳ ಜೊತೆಗೆ ಚರ್ಚೆ ನಡೆಸುವುದಕ್ಕೆ ಮುನ್ನ ಕರಾ ವಳಿಯ ಕಂಬಳ ಆಯೋಜಕರು ಹಾಗೂ ಕೋಣಗಳ ಮಾಲೀಕರ ಜೊತೆಗೂ ಸಮಾಲೋಚನೆ ನಡೆಸಿ ಆ ಬಳಿಕ ನಿರ್ಧಾರಕ್ಕೆ ಬರುವುದು ಒಳಿತು.ಈಗಾಗಲೇ ಲಭಿಸಿರುವಮಾಹಿತಿ ಪ್ರಕಾರ ದಸರಾದಲ್ಲಿ ನಡೆಯುವ ಕಂಬಳಕ್ಕೆ ಸುಮಾರು 8 ಕೋಟಿ ರೂ. ಖರ್ಚು ಮಾಡುವುದಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಈ ಮಾಹಿತಿಯನ್ನು ಕೇಳಿ ನನಗೆ ಅಚ್ಚರಿಯಾಯ್ತು. ಏಕೆಂದರೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಕಂಬಗಳಿಗೆ ಈ ಸರ್ಕಾರ ಬಂದ ನಂತರ ತಲಾ 2.5 ಲಕ್ಷ ರೂ. ನೀಡುವುದಕ್ಕೂ ಹಿಂದೆ ಮುಂದೆ ನೋಡಿದೆ. ನಾವು ಈ ಬಗ್ಗೆ ಪಕ್ಷಾತೀತ ವಾಗಿ ಸದನದಲ್ಲಿ ಮಾತನಾಡಿದ್ದೇವೆ. ಅದರಂತೆ ಉಭಯ ಜಿಲ್ಲೆಗಳ 20 ಕಂಬಳಗಳಿಗೆ ತಲಾ 25 ಲಕ್ಷ ರೂ. ಸಹಾಯ ಧನ ನೀಡುವುದಕ್ಕೆ ರಾಜ್ಯ ಸರ್ಕಾರ ಮೊದಲು ನಿರ್ಧಾರ ತೆಗೆದು ಕೊಳ್ಳಬೇಕು.

ಆಗ ಕಂಬಳಗಳ ವೈಭವ ಇನ್ನಷ್ಟು ಹೆಚ್ಚುತ್ತದೆ. ಕಂಬಳವನ್ನು ನೋಡುವುದಕ್ಕೆ ರಾಜ್ಯದ ನಾನಾ ಭಾಗ ಗಳಿಂದ ಜನರು ಬರುವಂತಾಗುವ ವಾತಾವರಣವನ್ನು ಸ್ಥಳೀಯ ಭಾಗಿ ದಾರಿಕೆಯಲ್ಲಿ ಸರ್ಕಾರ ನಿರ್ಮಾಣ ಮಾಡಬೇಕು. ಆ ಮೂಲಕ ಕರಾವ ಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಯನ್ನು ಹೆಚ್ಚಿಸಬೇಕು.

Related posts

ಕರಾವಳಿಗೆ ಹೈಕೋರ್ಟ್ ಪೀಠದ ಬೇಡಿಕೆ : ಉಡುಪಿಯಲ್ಲಿ ಬೃಹತ್ ಜನಾಂದೋಲನ;

Voiceoftulunadu

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ : ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ, ಇನ್ನಷ್ಟು ತಲೆದಂಡ ಸಾಧ್ಯತೆ;

Voiceoftulunadu

ರಾಜ್ಯದ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ:ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆ ಸಚಿವ ಯು.ಟಿ. ಖಾದರ್ ನೇಮಕ;

Voiceoftulunadu

Leave a Comment