September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಲಯನ್ಸ್ ಕ್ಲಬ್ ಕುಂಜಿಬೆಟ್ಟು: ನೂತನ ಪದಾಧಿಕಾರಿಗಳ ಪದಗ್ರಹಣ.ಲಯನ್ಸ್ ಎಂದರೆ ಸೇವೆಗೆ ಮತ್ತೊಂದು ಹೆಸರು : ರಜತ್ ಕುಮಾರ್ ಹೆಗ್ಡೆ ;

ವರದಿ /ಚಿತ್ರ: ಈ ಮೀಡಿಯಾ

ಉಡುಪಿ : ಲಯನ್ಸ್ ಎಂದರೆ ಸೇವೆಗೆ ಮತ್ತೊಂದು ಹೆಸರು.ಇಂದು ಜಗತ್ತಿನಾದ್ಯಂತ ಸುಮಾರು 16.5 ಲಕ್ಷ ಲಯನ್ಸ್‌ ಸದಸ್ಯರು ನಿಸ್ವಾರ್ಥ ಸೇವೆ ಮಾಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸಮಾಜದ ಅಗತ್ಯತೆ ಹಾಗೂ ಅನಿವಾರ್ಯತೆಗಳನ್ನು ಅರಿತು, ಶಾಶ್ವತ ಪರಿಹಾರಕ್ಕಾಗಿ ಶ್ರಮಿಸಿದಾಗ ಮಾತ್ರ ನಿಜವಾದ ಆತ್ಮತೃಪ್ತಿ ಸಿಗುತ್ತದೆ ಎಂದು ಜಿಲ್ಲಾ ಮುಖ್ಯ ಸಂಯೋಜಕರಾದ ಲಯನ್ ರಜತ್ ಕುಮಾರ್ ಹೆಗ್ಡೆ ಅಭಿಪ್ರಾಯಪಟ್ಟರು.

ಉದ್ಯಾವರದ ಬಲಾಯಿಪಾದೆಯ ನಿತ್ಯಾನಂದ ಆರ್ಕೇಡ್’ನಲ್ಲಿ ನಡೆದ ಲಯನ್ಸ್ ಕ್ಲಬ್ ಕುಂಜಿಬೆಟ್ಟು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪದಗ್ರಹಣದ ಜವಾಬ್ದಾರಿ ಹಾಗೂ ನಿಯಮಾವಳಿಗಳ ಕುರಿತು ವಿವರಣೆ ನೀಡಿದರು.

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಲಯನ್ ಅಶೋಕ್ ರಾವ್ ಮಾತನಾಡಿ, ಅಧ್ಯಕ್ಷ ಸ್ಥಾನ ಎಂಬುದು ಕೇವಲ ಹುದ್ದೆಯಲ್ಲ, ಅದುದೊಡ್ಡ ಜವಾಬ್ದಾರಿ. ಹಿಂದೆ ಪಂಚಾಯತ್ ಅಧ್ಯಕ್ಷನಾಗಿ ಹಾಗೂ ಹಲವು ಸಂಸ್ಥೆಗಳಲ್ಲಿ ದುಡಿದ ಅನುಭವ ನನಗಿದೆ. ಎಲ್ಲ ಲಯನ್ಸ್ ಸದಸ್ಯರ ಸಹಕಾರದೊಂದಿಗೆ ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ಸಮಾಜಕ್ಕೆ ನಮ್ಮಿಂದಾಗುವ ಅಳಿಲು ಸೇವೆಯನ್ನು ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿಯಾಗಿ ಲಯನ್ ಜಯಶ್ರೀ ಕೊಟ್ಯಾನ್ ಹಾಗೂ *ಲಿಯೋ ಲಯನ್ ಆದಿತ್ಯ ಆರ್. ಶೆಟ್ ಮತ್ತು ತಂಡದವರು ಅಧಿಕಾರ ಸ್ವೀಕರಿಸಿದರು.ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಲಯನ್ ಮಂಜುನಾಥ್ ಶೇಟ್ ನೂತನ ಕಾರ್ಯದರ್ಶಿ ಲಯನ್ ಜಯಶ್ರೀ ಕೊಟ್ಯಾನ್ ಹಾಗೂ ಖಜಾಂಚಿ ಲಯನ್ ರವಿ ಪ್ರಕಾಶ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಲಯನ್ ರಂಜಿತಾ ಶೇಟ್ ನಿರೂಪಿಸಿದರು.

Related posts

ಧವಳತ್ರಯ ಜೈನ ಕಾಶಿ – ಪುಸ್ತಕ ವಿತರಣೆ NEWSಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜ್‌ನ ವಿದ್ಯಾಥಿಗಳಿಗೆ ಪುಸ್ತಕಗಳ ವಿತರಣೆಶಿಕ್ಷಣದ ಮಹತ್ವ ಅರಿತು ಬದುಕು ರೂಪಿಸಿರಿ : ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ:

voiceoftulunadu

ರೋಟರಿ ಸಂಸ್ಥೆಯು ಸಮಾಜಕ್ಕೆ ಸೇವೆ ನೀಡುವ ಮಾದರಿ ಸಂಸ್ಥೆ : ರೋಟರಿ ಜಿಲ್ಲಾ ಗವರ್ನರ್ ಬಿ.ಎಂ. ಭಟ್ ಪಡುಬಿದ್ರಿ ಸಹಕಾರಿ ಸಂಸ್ಥೆಯ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿ;

Voiceoftulunadu

ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಹೈಕೋರ್ಟ್ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ನೇಮಕ;

Voiceoftulunadu

Leave a Comment