27 C
ಮಂಗಳೂರು
July 6, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶವಿಶೇಷ ಅಂಕಣಸ್ಥಳೀಯ/ಪ್ರಾದೇಶಿಕ ಸುದ್ದಿ

ಶತಮಾನೋತ್ಸವದ ಹೊಸ್ತಿಲಲ್ಲಿ ತುಳುವ ಮಹಾಸಭೆ : ಕೇಂದ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ;

ಮಂಗಳೂರು, ಜೂನ್ 28: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ತುಳುವ ಮಹಾಸಭೆಯ ಕೇಂದ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.ತುಳುವ ಮಹಾಸಭೆ ಇಂಟರ್ನ್ಯಾಷನಲ್ ಕೇಂದ್ರೀಯ ಸಮಿತಿಯ ಅಧ್ಯಕ್ಷರಾಗಿ ಡಾ. ಅವಿನ್ ಬಿ. ಆರ್. ಆಳ್ವ, ಪ್ರಧಾನ ಕಾರ್ಯದರ್ಶಿಯಾಗಿ ಅರವಿಂದ ಬೆಳ್ಚಾಡ ಹಾಗೂ ಪ್ರಧಾನ ಸಂಚಾಲಕರಾಗಿ ವಿಶ್ವನಾಥ ಆಚಾರ್ಯ ಪೆರ್ಡೂರು ಅವರನ್ನು ನೇಮಕ ಮಾಡಲಾಗಿದೆ.

2028ರಲ್ಲಿ ತುಳುವ ಮಹಾಸಭೆಗೆ 100 ವರ್ಷಗಳು ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ಶತಮಾನೋತ್ಸವವನ್ನು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.ತುಳುವ

ಭಾಷೆಯ ಅಭಿವೃದ್ಧಿ, ಸಂವಿಧಾನಾತ್ಮಕ ಮಾನ್ಯತೆಗಾಗಿ ಪ್ರಯತ್ನ, ಸಂಶೋಧನೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ವಿಶ್ವದಾದ್ಯಂತ ತುಳುವ ಸಮುದಾಯವನ್ನು ಸಂಘಟಿಸುವ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮಹಾಸಭೆ ನೂತನ ಪದಾಧಿಕಾರಿಗಳು ತಿಳಿಸಿದ್ದಾರೆ.

Related posts

ಈ ಸಲನೂ ಕಪ್ ನಮ್ಧೇ! ಗೆದ್ದ RCB ಗೆ ಸಿಕ್ಕ ಬಹುಮಾನ ಎಷ್ಟು?

Voiceoftulunadu

ಗ್ರಾಹಕರಿಗೆ ನೀಡುವ ಪ್ರಾಮಾಣಿಕ ಸೇವೆಯಿಂದ ಆತ್ಮತೃಪ್ತಿ ಲಭಿಸಲಿದೆ: ಪ್ರಭಾಕರ ಪ್ರಭು.

Voiceoftulunadu

ಅಹಮದಾಬಾದ್-ಮಂಗಳೂರು ಜಂಕ್ಷನ್-ಅಹಮದಾಬಾದ್ ರೈಲುಯಾನ‘ವೀಕ್ಲಿ ಟ್ರೈನ್ ಆನ್ ಡಿಮ್ಯಾಂಡ್’ ವಿಶೇಷ ರೈಲು ಸಂಚಾರ ಅವಧಿ ವಿಸ್ತಾರ;

Voiceoftulunadu

Leave a Comment